ಜಮೀರ್ ಅಹ್ಮದ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಫ್‌ಐಆರ್ ದಾಖಲು
ಬೆಂಗಳೂರು, ಜನವರಿ 13: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೀಳು ಮಟ್ಟದ ಪೋಸ್ಟ್ ಹಾಕಿದ್ದ ಯುವಕ ಹಾಗೂ ಶ್ರೀ ಋಷಿ ಕುಮಾರ ಸ್ವಾಮೀಜಿ ಎಂಬ ಫೇಸ್‌ಬುಕ್ ಖಾತೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Recommended Video
ಚಿಕ್ಕಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಮೀರ್ ಅವರ ಶಾಸಕ ಕಚೇರಿಯ ಸಿಬ್ಬಂದಿ ಮೊಹಮ್ಮದ್ ಆಯುಬ್ ಪಾಷಾ ಎಂಬುವರು ದೂರು ದಾಖಲಿಸಿದ್ದಾರೆ.
ಶರತ್ ಐಟಿಐ ಎಂಬ 'ಹಲೋ' ಆಪ್ ಖಾತೆಯಿಂದ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಕೀಳಾದ ಭಾಷೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ಇದು ಜಮೀರ್ ಅವರ ಮರ್ಯಾದೆ ಭಂಗ ಮಾಡುವ ಪ್ರಯತ್ನ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶ್ರೀ ಋಷಿ ಕುಮಾರ ಸ್ವಾಮೀಜಿ ಎಂಬ ಫೇಸ್‌ಬುಕ್ ಖಾತೆಯಿಂದಲೂ ಜಮೀರ್ ಬಗ್ಗೆ ಬಹು ಕೀಳು ಮಟ್ಟದ ಭಾಷೆ ಬಳಸಿ ಪೋಸ್ಟ್ ಹಾಕಲಾಗಿದ್ದು, ಇವರ ವಿರುದ್ಧರೂ ದೂರು ದಾಖಲಾಗಿದೆ.
ಶಾಸಕ ಜಮೀರ್ ಅಹ್ಮದ್ ಅವರ ಬಗ್ಗೆ ಅವಮಾನಕಾರಿ ಪೋಸ್ಟ್ ಇದಾಗಿದೆ ಅಲ್ಲದೆ ಮುಸ್ಲೀಮರ ವಿರುದ್ಧವೂ ಪೋಸ್ಟ್‌ನಲ್ಲಿ ಕೀಳು ಅಭಿರುಚಿಯ ಭಾಷೆ ಬಳಸಲಾಗಿದೆ. ಜೊತೆಗೆ ಧರ್ಮಗಳ ನಡುವೆ ವೈಷಮ್ಯ ಭಿತ್ತುವ ಪೋಸ್ಟ್ ಸಹ ಇದಾಗಿದೆ. ಪೊಲೀಸರು ಸೂಕ್ತ ಕೈಗೊಳ್ಳಬೇಕು ಎಂದು ದೂರುದಾರರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.












Click it and Unblock the Notifications