ನೋಟು ಬ್ಯಾನ್: ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕನ್ನಡ ಲೇಖಕ
ನಿರ್ದೇಶಕ ದಯಾನಂದ ಟಿಕೆ ಅವರು ಮೋದಿ ಅವರನ್ನು ಟೀಕಿಸುವ ಭರದಲ್ಲಿ ದಯಾನಂದ ಅವರು ಬಳಸಿರುವ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.
ಬೆಂಗಳೂರು, ನವೆಂಬರ್ 13: ದೊಡ್ಡ ಮೌಲ್ಯದ ನೋಟುಗಳ ಮೇಲೆ ನಿಷೇಧ ಹೇರಿರುವ ಪ್ರಧಾನಿ ಮೋದಿ ವಿರುದ್ಧ ಕನ್ನಡ ಲೇಖಕ, ನಿರ್ದೇಶಕ ದಯಾನಂದ ಟಿಕೆ ಅವರು ಕಿಡಿಕಾರಿದ್ದಾರೆ.
ಮೋದಿ ಅವರನ್ನು ಟೀಕಿಸುವ ಭರದಲ್ಲಿ ದಯಾನಂದ ಅವರು ಬಳಸಿರುವ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.

ಮೋದಿ ಅವರ ದಿಢೀರ್ ನಿರ್ಣಯದಿಂದಾಗಿ ಸಾರ್ವಜನಿಕರಿಗೆ ಭಾರಿ ತೊಂದರೆಯುಂಟಾಗಿದೆ. ಈ ರೀತಿ ಜನ ಸಾಮಾನ್ಯರಿಗೆ ಕಿರುಕುಳ ನೀಡುವವರು ಎಂಥವರು ಎಂಬುದನ್ನು ಫೇಸ್ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದರು.

ಮಾಧ್ಯಮಗಳ ವರದಿಯಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಇದರ ಹೊಣೆ ಹೊರಬೇಕಿದೆ ಎಂದು ದಯಾನಂದ್ ಅವರು ಹೇಳಿಕೊಂಡಿದ್ದಾರೆ. ಆದರೆ, ದಯಾನಂದ್ ಅವರ ಭಾಷೆ ಬಳಕೆ ಬಗ್ಗೆ ಅನೇಕ ಮಂದಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಟೀಕಿಸಿದ್ದಾರೆ.












Click it and Unblock the Notifications