Adani: ಅದಾನಿ ಕಂಪನಿ ವಿರುದ್ಧ ಮಾನಹಾನಿ ವರದಿ ಪ್ರಕಟಿಸದಂತೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ, ಸೆಪ್ಟಂಬರ್ 06: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ವಿರುದ್ಧ ಪ್ರಕಟವಾಗುತ್ತಿದ್ದ ಮಾನಹಾನಿಕರ ವಿಷಯಕ್ಕೆ ದೆಹಲಿ ನ್ಯಾಯಾಲಯ ಮಧ್ಯಂತರ ತಡೆ ಆದೇಶ ಹೊರಡಿಸಿದೆ. ಈ ಮೂಲಕ ಅದಾನಿ ಕಂಪನಿಗೆ ಪರಿಹಾರ ಒದಗಿಸಿದೆ.

ದೆಹಲಿ ಹೈಕೋರ್ಟ್‌ನ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ನೀಡಿದ ಆದೇಶದ ಪ್ರಕಾರ, ಕೆಲವು ಪತ್ರಕರ್ತರು ಹಾಗೂ ವಿದೇಶಿ ಸಂಬಂಧಿತ ಎನ್‌ಜಿಒಗಳು ಲೇಖನ ಪ್ರಕಟಿಸಿದ್ದವು. ವೀಡಿಯೋಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಕಂಪನಿಯ ಖ್ಯಾತಿಗೆ ಧಕ್ಕೆಯಾಗಿದೆ ಎಂಬ ಆರೋಪದ ಮೇಲೆ, ಅವುಗಳನ್ನು ತಕ್ಷಣ ತೆಗೆದುಹಾಕುವಂತೆ ಕೋರ್ಟ್ ಸೂಚನೆ ನೀಡಿದೆ.

Delhi Court Bars Journalists Activists from Posting Defamatory Content on Adani Enterprises

AEL ಸಲ್ಲಿಸಿದ್ದ ಮೊಕದ್ದಮೆಯಲ್ಲಿ paranjoy.in, adaniwatch.org ಮತ್ತು adanifiles.com.au ಸೇರಿದಂತೆ ಹಲವು ಪೋರ್ಟಲ್‌ಗಳಲ್ಲಿ 'ಸಂಘಟಿತ ಮಾನಹಾನಿ ಅಭಿಯಾನ' ನಡೆದಿದೆಯೆಂದು ಉಲ್ಲೇಖ ಮಾಡಲಾಗಿದೆ. ಇದರಿಂದ ಅದಾನಿ ಗ್ರೂಪ್‌ ಜಾಗತಿಕ ಕಾರ್ಯಗಳಿಗೆ ಅಡ್ಡಿಪಡಿಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ವ್ಯಕ್ತಗಳಾಗಿ ಪರಂಜಯ್ ಗುಹಾ ಠಾಕುರ್ತಾ, ರವಿ ನಾಯರ್, ಅಬಿರ್ ದಾಸ್‌ಗುಪ್ತಾ, ಆಯಸ್ಕಂತ ದಾಸ್, ಆಯುಷ್ ಜೋಶಿ, ಬಾಬ್ ಬ್ರೌನ್ ಫೌಂಡೇಶನ್, ಡ್ರೀಮ್‌ಸ್ಕೇಪ್ ನೆಟ್‌ವರ್ಕ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ಗೆಟಪ್ ಲಿಮಿಟೆಡ್, ಡೊಮೇನ್ ಡೈರೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್ ಇನ್‌ಸ್ಟ್ರಾ ಮತ್ತು ಜಾನ್ ಡೋ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನ್ಯಾಯಾಲಯ ಹೇಳುವಂತೆ, 'ಅಪರಿಶೀಲಿತ ಮತ್ತು ಆಧಾರರಹಿತ ವಿಷಯಗಳು ಸಾರ್ವಜನಿಕರ ಮನಸ್ಸಿನಲ್ಲಿ ತಪ್ಪು ಗ್ರಹಿಕೆ ಮೂಡಿಸುತ್ತವೆ ಹಾಗೂ ಕಂಪನಿಯ ಇಮೇಜ್ ಹಾಳಾಗಲು ಕಾರಣವಾಗುತ್ತವೆ. ಆದ್ದರಿಂದ ಪ್ರತಿವಾದಿಗಳು ಮುಂದಿನ ವಿಚಾರಣೆಯವರೆಗೆ ಇಂತಹ ಲೇಖನ/ಪೋಸ್ಟ್‌ಗಳನ್ನು ಪ್ರಕಟಿಸುವುದನ್ನು ನಿಷೇಧಿಸುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರತಿವಾದಿಗಳು ವಾದಿಯ ಬಗ್ಗೆ ಪರಿಶೀಲಿಸದ, ಆಧಾರರಹಿತ ಮತ್ತು ಪೂರ್ವಭಾವಿ ಮಾನಹಾನಿಕರ ವರದಿಗಳನ್ನು ಪ್ರಕಟಿಸಬಾರದು. ಅಂಥವುಗಳನ್ನು ಹೆಚ್ಚಾಗಿ ವಿತರಿಸುವುದು ಅಥವಾ ಪ್ರಸಾರ ಮಾಡುವುದರಿಂದ ಅದಾನಿ ಕಂಪನಿ ಖ್ಯಾತಿಗೆ ಕಳಂಕ ತರುತ್ತದೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದೆ.

ಕಂಪನಿ ಸೂಚಿಸಿದ ಲಿಂಕ್‌ಗಳ ಆಧಾರದಲ್ಲಿ ಗೂಗಲ್, ಯೂಟ್ಯೂಬ್, ಎಕ್ಸ್ (ಹಳೆಯ ಟ್ವಿಟ್ಟರ್) ಮುಂತಾದ ಪ್ಲಾಟ್‌ಫಾರ್ಮ್‌ಗಳು 36 ಗಂಟೆಗಳ ಒಳಗೆ ಮಾನಹಾನಿಕರ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಪ್ರಕರಣದ ವಿಚಾರಣೆಯು ಅಕ್ಟೋಬರ್ 9ಕ್ಕೆ ನಿಗದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+