ಸಾ.ರಾ. ಮಹೇಶ್ ಪ್ರತಿಕ್ರಿಯೆಗೆ ರಕ್ಷಣಾ ಸಚಿವಾಲಯ ಅಸಮಾಧಾನ

ಬೆಂಗಳೂರು, ಆಗಸ್ಟ್ 25: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಭೇಟಿ ವೇಳೆ ಆಗಿರುವ ಘಟನೆ ಕುರಿತಂತೆ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದ್ದು, ರಕ್ಷಣಾ ಸಚಿವರ ಭೇಟಿ ಬಳಿಕ ಸಚಿವ ಸಾ.ರಾ. ಮಹೇಶ್‌ ನೀಡಿರುವ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಕೊಡಗು ಜಿಲ್ಲಾ ಆಡಳಿತ ನಿಗದಿಪಡಿಸಿದ ಪೂರ್ವಭಾವಿ ಕಾರ್ಯಕ್ರಮದಂತೆಯೇ ರಕ್ಷಣಾ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಆದ ಹಠಾತ್ ಬದಲಾವಣೆಗಳಿಂದ ಕೆಲ ಗೊಂದಲ ಉಂಟಾಗಿದ್ದು, ಇದರಿಂದ ರಕ್ಷಣಾ ಸಚಿವರಿಗೆ ತೀವ್ರ ಬೇಸರ ಉಂಟಟು ಮಾಡಿದೆ.

ಅಲ್ಲದೆ ಭೇಟಿ ಬಳಿಕ ಸಚಿವ ಸಾ.ರಾ. ಮಹೇಶ್ ಅವರು ನೀಡಿರುವ ಹೇಳಿಗೆ ರಾಜ್ಯ ಸಭೆಗೆ ಹಾಗೂ ವೈಯಕ್ತಿಕವಾಗಿ ರಕ್ಷಿಣಾ ಸಚಿವರಿಗೆ ಅಗೌರವವನ್ನುಂಟು ಮಾಡಿದೆ ಹಾಗಾಗಿ ಅವರ ಹೇಳಿಕೆಯನ್ನು ರಕ್ಷಣಾ ಸಚಿವಾಲಯ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Defense ministry condemns Sa. Ra. Mahesh comment on Nirmala Sitharaman

ಪೂರ್ವಭಾವಿ ಕಾರ್ಯಕ್ರಮದಂತೆ ಅಧಿಕಾರಿಗಳ ಸಭೆಯನ್ನು ನಡೆಸುವಾಗ ರಕ್ಷಣಾ ಸಚಿವರ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಹೇಶ್ ಅವರು ಅಡ್ಡಿ ಉಂಟು ಮಾಡಿದರು. ಆದಾಗ್ಯೂ ಕೂಡ ಅಧಿಕಾರಿಗಳ ಸಭೆ ನಡೆಸಲು ಸಚಿವರು ಉತ್ಸುಕರಾಗಿದ್ದರು ಈ ವೇಳೆ ಉಂಟಾದ ಮಾತುಗಳ ವಿನಿಮಯದಿಂದ ನೊಂದ ಸಚಿವರು ತಮ್ಮ ಪೂರ್ವಭಾವಿ ಕಾರ್ಯಕ್ರಮದಂತೆ ನಿವೃತ್ತ ಸೇನಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಭಾಂಗಣಕ್ಕೆ ತೆರಳಿದ್ದರು .

ಆದರೆ ಆ ವೇಳೆಗೆ ಅಧಿಕಾರಿಗಳ ಜತೆಗೆ ಮಾಧ್ಯಮದವರು ಸಭಾಂಗಣದಲ್ಲಿ ಇದ್ದುದರಿಂದ ಸಭೆಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Defense ministry condemns Sa. Ra. Mahesh comment on Nirmala Sitharaman

ಅಲ್ಲದೆ ತಮ್ಮ ಮಾತಿನ ನಡುವೆ ಪರಿವಾರ ಎಂಬ ಶಬ್ದ ಬಳಕೆ ಮಾಡಿರುವುದು ಮಾಮಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದ್ದು ನಿವೃತ್ತ ಸೇನಾಧಿಕಾರಿಗಳ ಇಲಾಖೆ ರಕ್ಷಣಾ ಇಲಾಖೆಯ ಒಂದು ಭಾಗವಾಗಿದ್ದು ಅದರ ಪರಿವಾರ ಎಂದು ಸಂಬೋಧಿಸಿದ್ದಾರೆ ಹೊರತು ಬೇರಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+