Bengaluru: 'ಕೇವಲ 3400 ಎಕ್ರೆ ಅರಣ್ಯ ಪ್ರದೇಶ ಸರ್ಕಾರಿ ಕಡತದಲ್ಲಿದೆ'
ಬೆಂಗಳೂರು, ಫೆಬ್ರವರಿ 17: ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯಾನ ನಗರಿ ಅಂತಲೂ ಹೆಸರಿದೆ. ಇಲ್ಲಿನ ಹಸಿರು ವಾತಾವರಣ, ತಂಪು ಪ್ರದೇಶಕ್ಕೆ ಫಿದಾ ಆಗದವರೇ ಇಲ್ಲ. ಇಂದು ಕಾಲ ಬದಲಾಗಿದೆ. ಮರಗಳ ಕಡಿತ ಹೆಚ್ಚಾಗಿದ್ದು, ನಗರೀಕರಣ ಪ್ರಭಾವದಿಂದ ಬೆಂಗಳೂರಿನ ಅರಣ್ಯ ಪ್ರದೇಶವು ಕಡಿಮೆಯಾಗಿದೆ. ಅತ್ಯಧಿಕ ಪ್ರಮಾಣದಲ್ಲಿ ಬೆಂಗಳೂರು ಅರುಣ್ಯ ಪ್ರದೇಶ ಪೈಕಿ ಇದೀಗ ಕೇಲವ 3,400 ಎಕರೆಗಳು ಅರಣ್ಯ ಪ್ರದೇಶ ಇದೆ ಎಂಬುದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು 'DH' ವರದಿ ಮಾಡಿದೆ.
ಬೆಂಗಳೂರಿನ ಭವ್ಯ ಪ್ರತಿಬಿಂಬವಾಗಿದ್ದು, ಅರಣ್ಯ ಪ್ರದೇಶ ಇಂದು ನಗರೀಕರಣಕ್ಕೆ ಬಲಿಯಾಗಿದೆ. 100 ವರ್ಷಗಳ ಹಿಂದೆ ಅರಣ್ಯವೆಂದು ಘೋಷಿಸಲಾಗಿದ್ದ ಅನೇಕ ಪ್ರದೇಶಗಳು/ಭೂಮಿಯು ಇಂದು ಕಾಂಕ್ರಿಟ್ ಕಾಡಾಗಿವೆ. ಆದರೆ ಎಷ್ಟೆಲ್ಲ ಕಾಡು ಪ್ರದೇಶ ಇಂದು ಏನಾಗಿದೆ ಎಂಬುದಕ್ಕೆ ಸರ್ಕಾರಿ ದಾಖಲೆಗಳು ಇಲ್ಲ. ಬರೀ 3,400 ಎಕರೆ ಅರಣ್ಯ ಪ್ರದೇಶ ಎಂಬುದು ಇದೆ ಎಂದು ವಿವರಿಸಲಾಗಿದೆ.

ಸಾಕಷ್ಟು ಅರಣ್ಯ ಪ್ರದೇಶ ಡಿನೋಟಿಫೈ
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರಗಳು ನಗರದ ಪ್ರದೇಶಗಳನ್ನು "ಅಧಿಸೂಚಿತ ಮೀಸಲು ಅರಣ್ಯ" ಪಟ್ಟಿಯಿಂದ ತೆಗೆದುಹಾಕುವ ಯತ್ನ ಮಾಡಿವೆ. ಇದು ಬೆಂಗಳೂರಿನ ಹಸಿರು ಹೊದಿಕೆ ಮೇಲೆ ಪರಿಣಾಮ ಬೀರಿದೆ. ಮೈಸೂರು ಮಹಾಸಂಸ್ಥಾನ ಇದ್ದ ಕಾಲದಲ್ಲಿ ಮಹಾರಾಜರು ನಗರದ ನಿಸರ್ಗ ಪರಂಪರೆಯ ರಕ್ಷಣೆಗಾಗಿ ಬೆಂಗಳೂರಿನ ಸುತ್ತಮುತ್ತಲಿನ ದೊಡ್ಡ ಭೂಮಿಗೆ ಅರಣ್ಯ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದರು ಎಂದು ವರದಿ ಆಗಿದೆ.
ನಂತರ ರಾಜ್ಯದಲ್ಲಿ ಶುರುವಾರ ರಾಜಕೀಯ ಅಧಿಕಾರ, ಆಡಳಿತಕ್ಕೆ ಬಂದ ಪಕ್ಷಗಳು ಸರಿಯಾದ ಕಾರ್ಯ ವಿಧಾನವಿಲ್ಲದೆ ಭೂಮಿಯನ್ನು ಅರಣ್ಯ ವ್ಯಾಪ್ತಿಯಿಂದ ಬಿಟ್ಟಿವೆ ಎನ್ನಲಾಗಿದೆ.. ಅವುಗಳನ್ನು ಡಿನೋಟಿಫೈ ಮಾಡಿವೆ. ಇದು ಹಸಿರು ಹೊದಿಕೆ ಇಳಿಕೆಗೆ ಕಾರಣವಾಗಿದೆ. ಮಾನವ ನಿರ್ಮಿತ ಕಾಂಕ್ರೀಟು ಕಾಡು ಸೃಷ್ಟಿಯಾಗಿದೆ.
ಕಡತಗಳಲ್ಲಿ ಸುಳ್ಳು ಮಾಹಿತಿ
ಕರ್ನಾಟಕ ಸರ್ಕಾರ ಈ ಕುರಿತ ದಾಖಲೆಗಳಲ್ಲಿ, ವಿಧಾನಸಭೆ ಮತ್ತು ಪರಿಷತ್ತಿನ ಮಾಹಿತಿ ನೀಡಿದೆ. ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಮೀಸಲು ಅರಣ್ಯವೆಂದು ಇದೆ. ಆದರೆ ಇದೆಲ್ಲ ಸುಳ್ಳು ಎಂಬುದು ಜಗಜ್ಜಾಹೀರಾಗಿದೆ. ಕಡತಗಳಲ್ಲಿ ಮಾತ್ರವೇ ಅರಣ್ಯದ ಹಸಿರು ಹೊದಿಕೆ ಹೆಚ್ಚಿದೆ. ಅಧಿಸೂಚನೆಯಲ್ಲಿ ಕನಿಷ್ಠ 27ರಷ್ಟು ಸುಳ್ಳು ಕಾಡುಗಳನ್ನು ದಾಖಲೆಗಳಲ್ಲಿ ಇಡಲಾಗಿದೆ. ಈ ಸುಳ್ಳು ಅರಣ್ಯ ಪ್ರದೇಶ ಇನ್ನು ಹೆಚ್ಚಿನ ಪ್ರಮಾಣದಲ್ಲಿರಬಹುದು ಎಂಬ ಶಂಕೆ ಇದೆ.
1921 ರಲ್ಲಿ ಗುರುತಿಸಿದ್ದ ಅರಣ್ಯ ಪ್ರದೇಶ (537 ಎಕರೆ) ದಲ್ಲಿ ಸದ್ಯ ಮಾಲ್‌ಗಳು ಸೃಷ್ಟಿಯಾಗಿವೆ. ಲಗ್ಗೆರೆ ಪ್ರದೇಶ ಒಳ್ಳಗೊಂಡಂತೆ ಯಶವಂತಪುರ ನಿರ್ಮಾಣವಾಗಿದೆ. ಈ ಅರಣ್ಯ ಪ್ರದೇಶ ಯಾವಾಗ ಡಿನೋಟಿಫೈ ಆಯಿತು ಎಂಬುದೇ ಇಲ್ಲ. ಆದರೆ ಡಿನೋಟಿಫೈ ಆಗಿದ್ದು, ಅದರ ದಾಖಲೆಗಳು ಇತ್ತೀಚೆಗೆ ಸರ್ಕಾರದ ವಶಕ್ಕೆ ಸೇರಿವೆ. ಹೀಗೆ ನೂರಾರು ಎಕರೆ ಪ್ರದೇಶಗಳು ಕಾಂಕ್ರೀಟಿಗೆ ಬಲಿಯವಾಗಿವೆ.
ಬೆಂಗಳೂರು ವ್ಯಾಪ್ತಿಯಲ್ಲಿ ಅರಣ್ಯಗಳೆಂದು ಘೋಷಿಸಲ್ಪಟ್ಟಿದ್ದ ಅಂದಾಜು 4,900 ಎಕರೆಗಳು ಪ್ರದೇಶ ಇಂದು ನಗರಾಭಿವೃದ್ಧಿಗೆ ಒಳಗಾಗಿದೆ. ನಗರದಲ್ಲಿ ಕಳೆದ ನಾಲ್ಕರಿಂದ ಐದು ದಶಕಗಳಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳನ್ನು ಡಿನೋಟಿಫೈ ಮಾಡಲಾಗಿದೆ. ಸರ್ಕಾರಗಳು ಡಿನೋಟಿಫೈ ಮಾಡಿ ನಗರೀಕರಣ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮನಸ್ಥಿತಿ ಬೆಂಗಳೂರಿಗೆ ಭವಿಷ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications