ಜಯನಗರ 3ನೇ ಬ್ಲಾಕ್ ನಲ್ಲಿ ತಲೆಯ ಮೇಲೆಯೇ ಇದೆ ಮೃತ್ಯು

ಬೆಂಗಳೂರು, ಜೂ. 02: ಮಳೆ ಬಂದರೆ ಬೆಂಗಳೂರಿನಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳುವುದು ಸರ್ವೇ ಸಾಮಾನ್ಯ. ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ಏನು ಮಾಡಲು ಸಾಧ್ಯವಿಲ್ಲ ಬಿಡಿ. ಆದರೆ ಜಯನಗರದ 3 ನೇ ಹಂತದಲ್ಲಿ ವಿದ್ಯುತ್ ಕಂಬವೊಂದು ಬಲಿಗಾಗಿ ಕಾದು ನಿಂತಿದೆ.

ಜಯನಗರದ ಸಿಂಡಿಕೇಟ್ ಬ್ಯಾಂಕ್ ಎದುರಿಗಿನ ಬಸ್ ನಿಲ್ದಾಣದ ಸಮೀಪ ಇಂಥದ್ದೊಂದು ಮೃತ್ಯುಕೂಪ ತಲೆಯ ಮೇಲೆಯೇ ಇದೆ. ಕೈಗೆಟಕುವ ಜಾಗದಲ್ಲಿ ವಿದ್ಯುತ್ ಕಂಬ ಕತ್ತರಿಸಿದ್ದು ಅದಕ್ಕೆ ತಾತ್ಕಾಲಿಕವಾಗಿ ಕಬ್ಬಿಣದ ರಾಡ್ ಗಳನ್ನು ಆಧಾರವಾಗಿ ನೀಡಲಾಗಿತ್ತು. ಆದರೆ ನಂತರ ಬೆಸ್ಕಾಂ ನವರು ಇತ್ತ ಮುಖ ಹಾಕಿದಂತೆ ಕಾಣುತ್ತಿಲ್ಲ. [ನೀವು ವಿಮೆ ಮಾಡಿಸಿದ್ರೆ ಈ ಮರದಡಿ ನಿಲ್ಲಬಹುದು!]

jayanagara

ಒಂದು ವೇಳೆ ವಿದ್ಯುತ್ ಕಂಬ ಮುರಿದುಬಿದ್ದರೆ ಘೋರ ಅಪಾಯ ಖಂಡಿತ. ಪಕ್ಕದಲ್ಲಿಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಈ ಕಂಬದ ಕೆಳಗೆಯೇ ಮಧ್ಯಾಹ್ನ ಜನರು ಊಟ ಮಾಡುತ್ತಿರುತ್ತಾರೆ. ಸದಾ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆ ಮೇಲೆ ಕಂಬ ಮುರಿದು ಬೀಳುವುದಕ್ಕಿಂತ ಮುನ್ನ ಬೆಸ್ಕಾಂ ತುರ್ತು ದುರಸ್ತಿ ಮಾಡಬೇಕಾಗಿದೆ.[ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ..]

ಅಪಾಯ ಸಂಭವಿಸಿದ ಮೇಲೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಇಲಾಖೆ ಮೊದಲೇ ಏಕೆ ಎಚ್ಚರಿಕೆ ತಾಳುವುದಿಲ್ಲ? ಕುಟುಂಬಗಳಲ್ಲಿ ಕಣ್ಣೀರು ಹರಿಸುವುದಕ್ಕೆ ಇಂಥ ಕಂಬಗಳು ಕಾರಣವಾಗಬಹುದು. ದಯವಿಟ್ಟು ಬೆಸ್ಕಾಂ ಮತ್ತು ಇದಕ್ಕೆ ಸಂಬಂಧಿಸಿದವರು ಕೂಡಲೇ ದುರಸ್ತಿ ಮಾಡಿ ಮುಂದೆ ಒದಗಬಹುದಾದ ದೊಡ್ಡ ಅಪಾಯವನ್ನು ತಡೆಯಬೇಕಾಗಿದೆ.

jayanagara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+