BBMP: 2 ದಿನದಲ್ಲಿ ಗಡುವು ಅಂತ್ಯ: ಈವರೆಗೆ 60% ಕನ್ನಡ ಕಡ್ಡಾಯವಾಗಿದ್ದೆಷ್ಟು? ವಲಯವಾರು ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದಿಮೆ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆ ಕಡ್ಡಾಯದ ಗಡುವು ಮುಗಿಯಲು ಎರಡೇ ದಿನ ಬಾಕಿ (ಮಾರ್ಚ್ 15) ಇದೆ. ಹಾಗಾದರೆ ಈ ವರೆಗೆ ಎಷ್ಟು ಅನುಷ್ಠಾನಗೊಂಡಿವೆ, ಬಾಕಿ ಇವೆ ಎಂಬ ಅಪ್ಡೇಟ್ ಮಾಹಿತಿ ನಿಮ್ಮ ಮುಂದೆ.
ರಾಜಧಾನಿಯ ಅಂಗಡಿ ಮುಂಗಟ್ಟುಗಳು, ಮಳಿಗೆಗಳು, ಶಾಪಿಂಗ್ ಮಾಲ್‌ಗಳ ಸೇರಿದಂತೆ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇಕಡಾ 60ರಷ್ಟು ಕನ್ನಡ ಕಡ್ಡಾಯ ಮಾಡಿ ಆದೇಶಿಸಲಾಗಿದೆ. ಕೊನೆ ದಿನವಾಗಿದ್ದ ಫೆಬ್ರುವರಿ 28 ಅನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಿ ಡಿಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದರು.

ಮಾರ್ಚ್ 13ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 50,357 ವಾಣಿಜ್ಯ ಸಂಸ್ಥೆಗಳು 49, 732 ಕನ್ನಡವನ್ನು ಕಡ್ಡಾಯಗೊಳಿಸಿವೆ. ಒಟ್ಟು 625 ಕಡೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಇದೆ ಎಂದು ಬಿಬಿಎಂಪಿಯು ಮಾಹಿತಿ ನೀಡಿದೆ. ಜೊತೆಗೆ ಇರುವ ಎಂಟು ವಲಯಗಳಲ್ಲಿ ವಲಯವಾರು ಎಷ್ಟು ಬಾಕಿ ಇದೆ, ಅನುಷ್ಠಾನಗೊಂಡಿದ್ದೆಷ್ಟು ಎಂಬ ಮಾಹಿತಿ ನೀಡಿದೆ.
* ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ನೋಟಿಸ್ ಪಡೆದ 8411ರ ಉದ್ದಿಮೆಗಳಲ್ಲಿ 8341 ಅನುಷ್ಠಾನಗೊಂಡಿವೆ, 70 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ದಾಸರಹಳ್ಳಿ ವಲಯದಲ್ಲಿ ನೋಟಿಸ್ ಪಡೆದ 1548 ರ ಉದ್ದಿಮೆಗಳಲ್ಲಿ 1522 ಅನುಷ್ಠಾನಗೊಂಡಿವೆ, 26 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.

* ಪೂರ್ವ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಒಟ್ಟು 8634 ಉದ್ದಿಮೆಗಳಿಗೆ ನೋಟಿಸ್ ನೀಡಿತ್ತು. ಇದರಿಂದಾಗಿ ಮಾರ್ಚ್ 13ರವರೆಗೆ 8487 ಅನುಷ್ಠಾನಗೊಂಡಿದ್ದು, 147 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ಮಹಾದೇವಪುರ ವಲಯದಲ್ಲಿ ಒಟ್ಟು 5967 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ 5893 ಅನುಷ್ಠಾನಗೊಂಡಿವೆ, 74 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ರಾಜರಾಜೇಶ್ವರಿ ನಗರ ವಲಯದಲ್ಲಿ 6537 ಉದ್ದಿಮೆಗಳಲ್ಲಿ 6492 ಅನುಷ್ಠಾನಗೊಂಡಿವೆ, 45 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ದಕ್ಷಿಣ ವಲಯದಲ್ಲಿ ನೋಟಿಸ್ ಪಡೆದ 5982 ಉದ್ದಿಮೆಗಳಲ್ಲಿ 5933 ಅನುಷ್ಠಾನಗೊಂಡಿವೆ, 49 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ಪಶ್ಚಿಮ ವಲಯದಲ್ಲಿ ನೋಟಿಸ್ ಪಡೆದ 7113 ಉದ್ದಿಮೆಗಳಲ್ಲಿ 7074 ಅನುಷ್ಠಾನಗೊಂಡಿವೆ, 39 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
* ಯಲಹಂಕ ವಲಯದಲ್ಲಿ ನೋಟಿಸ್ ಪಡೆದ 6165 ಉದ್ದಿಮೆಗಳಲ್ಲಿ 5900 ಅನುಷ್ಠಾನಗೊಂಡಿವೆ, 175 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಿಂದಿನಿಂದಲೂ ಬಿಬಿಎಂಪಿ ಒಳಗೊಂಡಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೆ ಬಂದಿವೆ. ಈ ನಾಮಫಲಕದಲ್ಲಿ ಕನ್ನಡ ಬಳಕೆ ವಿಚಾರವಾಗಿ ಬೆಂಗಳೂರಿನಲ್ಲಿ ತಿಂಗಳುಗಳ ಹಿಂದೆ 'ಕರವೇ' ಸೇರಿದಂತೆ ಕನ್ನಡಪರ ಸಂಘಟನೆಗಳು, ಕನ್ನಡಿಗರು ದೊಡ್ಡ ಆಂದೋಲನವನ್ನೇ ಮಾಡಿದ್ದರು. ಆಂಗ್ಲ ನಾಮಪಲಕ ಕಿತ್ತಾಕಿ ಬುದ್ಧಿ ಕಲಿಸಿದರು. ಇದರ ಬೆನ್ನಲ್ಲೆ ಬಿಬಿಎಂಪಿ ನೋಟಿಸ್ ನೀಡಿ ಗಡುವು ನೀಡಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications