ಡಿಸಿಎಂ ಹುದ್ದೆಗೆ ಡಿ.ಕೆ. ಶಿವಕುಮಾರ್ ರಾಜೀನಾಮೆ?

2024ರ ಲೋಕಸಭೆ ಚುನಾವಣೆ ನಂತರ ಕರ್ನಾಟಕದ ಕಾಂಗ್ರೆಸ್ ಒಳಗೆ ಕಿಚ್ಚು ಹೊತ್ತಿ, ತಿಕ್ಕಾಟ ಶುರುವಾಗಿದೆ ಅಂತಿದ್ದಾರೆ ಬಿಜೆಪಿ ನಾಯಕರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಒಳಗೆ ಈಗ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಜೋರಾಗಿ, ಒಂದೇ ಒಂದು ಉಪಮುಖ್ಯಮಂತ್ರಿ ಸ್ಥಾನ ಅಲ್ಲ ಹಲವು ಡಿಸಿಎಂ ಸ್ಥಾನ ಬೇಕೆಬೇಕು ಅಂತಾ ಕಾಂಗ್ರೆಸ್‌ನ ನಾಯಕರು ಹಠ ಹಿಡಿದಿದ್ದಾರೆ. ಈ ಸಮಯದಲ್ಲಿ ಡಿಸಿಎಂ ಹುದ್ದೆಗೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡುತ್ತಾರಾ? ಎಂಬ ಸಂಚಲನ ಸೃಷ್ಟಿಯಾಗಿದೆ.

ಹೌದು, ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂದಿನಿಂದ ಕೂಡ ತಾವು ಸಿಎಂ ಸ್ಥಾನಕ್ಕಾಗಿ ಆಕಾಂಕ್ಷಿ ಎಂಬ ಮಾತನ್ನ ಪರೋಕ್ಷವಾಗಿ ತಿಳಿಸುತ್ತಲೇ ಬಂದಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಿದ್ದರಾಮಯ್ಯ ಪರ ಆಸಕ್ತಿ ತೋರಿಸುತ್ತಾ ಬಂದಿದೆ. ಹೀಗಿದ್ದಾಗಲೇ ಬಿಜೆಪಿ & ಜೆಡಿಎಸ್ ನಾಯಕರು ಮಾತ್ರ ಈ ತಿಕ್ಕಾಟವನ್ನ ರಾಜಕೀಯ ವಾಗ್ದಾಳಿಗೆ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ.

DCM DK Shivakumar Is On Trend Now For This Reason

ಅದ್ರಲ್ಲೂ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದ ನಂತರ ಈ ತಲ್ಲಣ ಮತ್ತಷ್ಟು ಹೆಚ್ಚಾಗಿದೆ. ಈ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಹಬ್ಬಿದ್ದು ಡಿಸಿಎಂ ಹುದ್ದೆಗೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡ್ತಾರಾ? ಎಂಬ ಚರ್ಚೆ ಬಲು ಜೋರಾಗಿದೆ. ಹಾಗಾದ್ರೆ ಈ ವದಂತಿ ನಿಜವಾಗುತ್ತಾ? ಕರ್ನಾಟಕ ಕಾಂಗ್ರೆಸ್ ನಾಯಕರು ಈ ಬಗ್ಗೆ ಏನು ಹೇಳುತ್ತಿದ್ದಾರೆ? ಮುಂದೆ ಓದಿ.

ಡಿ.ಕೆ. ಶಿವಕುಮಾರ್ ರಾಜೀನಾಮೆ?

ಕರ್ನಾಟಕದ ರಾಜಕೀಯ ವಲಯದಲ್ಲಿ ಸುಳ್ಳು ಸುದ್ದಿ ಹಾಗೂ ವದಂತಿಗೆ ಕಡಿಮೆ ಏನು ಇಲ್ಲ. ಅದೇ ರೀತಿ ಈಗ ಮತ್ತೊಂದು ಸುದ್ದಿ ತಲ್ಲಣ ಸೃಷ್ಟಿ ಮಾಡಿದೆ. ಅದು ಏನಪ್ಪ ಅಂದ್ರೆ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ನೀಡಿ ಪಕ್ಷದಲ್ಲಿರುವ ವಿರೋಧಿಗಳಿಗೆ ಉತ್ತರ ನೀಡುತ್ತಾರೆ ಎಂಬುದು. ಆದ್ರೆ ಈ ಮಾತನ್ನ ಈಗ ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದು ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದಿದ್ದಾರೆ. ಹಾಗಾದ್ರೆ ರಾಜ್ಯದಲ್ಲಿ ಇನ್ನೂ ಹಲವರಿಗೆ ಡಿಸಿಎಂ ಸ್ಥಾನ ಸಿಗುತ್ತಾ? ಮುಂದೆ ಓದಿ.

ಡಿಸಿಎಂ ಹುದ್ದೆ ವಿಭಜನೆ ಆಗುತ್ತಾ?

ಈಗಿನ ಪರಿಸ್ಥಿತಿ ನೋಡಿದರೆ, ಕಾಂಗ್ರೆಸ್ ಕೇಂದ್ರ ನಾಯಕರು ಕರ್ನಾಟಕದಲ್ಲಿ ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಸುವುದು ಅಸಾಧ್ಯ ಎನ್ನಲಾಗುತ್ತಿದೆ. ಯಾಕಂದ್ರೆ ಈಗಿನ ಪರಿಸ್ಥಿತಿ ನೋಡುವುದಾದ್ರೆ ಪಕ್ಷದಲ್ಲಿ ಒಗ್ಗಟ್ಟು ಛಿದ್ರವಾಗುವ ಭಯ ಕಾಡುತ್ತಿದೆ. ಅದರಲ್ಲೂ ಈ ಸಮಯದಲ್ಲೇ ಬಿಬಿಎಂಪಿ ಚುನಾವಣೆ ಕೂಡ ಎದುರಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿ ಡಿಸಿಎಂ ಹುದ್ದೆ ವಿಭಜನೆ ಅಥವಾ ಮತ್ತಷ್ಟು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿ ಅಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+