ಬೆಂಗಳೂರು ಕ್ಲಬ್‌ಗೆ ಜಿಲ್ಲಾಧಿಕಾರಿ ನೋಟಿಸ್
ಬೆಂಗಳೂರು, ನ. 24: ನಗರ ಜಿಲ್ಲಾಧಿಕಾರಿಯವರು ಪ್ರತಿಷ್ಠಿತ ಬೆಂಗಳೂರು ಕ್ಲಬ್‌ಗೆ ಅಬಕಾರಿ ನಿಯಮ ಉಲ್ಲಂಘನೆ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರು ಕ್ಲಬ್ ನೋಟಿಸ್ ತಲುಪಿದ 15 ದಿನಗಳಲ್ಲಿ ಉತ್ತರ ನೀಡಬೇಕು. ಕ್ಲಬ್ ನೀಡಿದ ಉತ್ತರವನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ವಿ ಶಂಕರ್ ತಿಳಿಸಿದ್ದಾರೆ.

ಕ್ಲಬ್‌ನಲ್ಲಿ ಅಬಕಾರಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಕ್ಲಬ್‌ನಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಆಗ ಅಬಕಾರಿ ನಿಯಮ ಉಲ್ಲಂಘನೆಯಾಗಿದ್ದು ಬೆಳಕಿಗೆ ಬಂದಿತ್ತು.

ಯಾವ ನಿಮಯ ಉಲ್ಲಂಘನೆ?: ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದ್ದು, ವರದಿಯಲ್ಲಿನ ವಿವರಗಳು ಹೀಗಿವೆ.
ಬೆಂಗಳೂರು ಕ್ಲಬ್‌ನಲ್ಲಿನ ಮೇನ್ಸ್ ಬಾರ್ ಮತ್ತು ಅಂಬ್ರೆಲ್ಲಾ ಬಾರ್‌ಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕ್ಲಬ್‌ನಲ್ಲಿ ಇನ್ನೂ ಐದು ಕೌಂಟರ್‌ಗಳಲ್ಲಿ ಮದ್ಯ ಮಾರಲಾಗುತ್ತಿದೆ. ಇದಕ್ಕೆ ಯಾವುದೇ ಪರವಾನಗಿ ಪಡೆದಿಲ್ಲ. ಅಲ್ಲದೆ, ಬದಿಯಲ್ಲಿ ಹೋಟೆಲ್ ಆರಂಭಿಸಲು ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ, ಇಲ್ಲಿಯೂ ಮದ್ಯ ಮಾರಲಾಗುತ್ತಿದೆ. ಇದನ್ನು ಅಬಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಉಲ್ಲಂಘಟನೆಯ ಕಾರಣದಿಂದ ಕರ್ನಾಟಕ ಅಬಕಾರಿ ಕಾಯಿದೆ 1968ರ ಪ್ರಕಾರ ಕ್ಲಬ್ ಪರವಾನಗಿ ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ನೋಟಿಸ್ ಹಿನ್ನೆಲೆಯಲ್ಲಿ ಪ್ರಸ್ತುತ ಬೆಂಗಳೂರು ಕ್ಲಬ್‌ನ ಮೆನ್ಸ್ ಬಾರ್‌ನಲ್ಲಿ ಮಾತ್ರ ಮದ್ಯ ಮಾರಲಾಗುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications