ಆ. 22 ರಿಂದ ದವನಂ ಜ್ಯುವೆಲ್ಲರ್ಸ್‍ನಲ್ಲಿ ಪ್ರದರ್ಶನ, ಮಾರಾಟ
ಬೆಂಗಳೂರು, ಆಗಸ್ಟ್ 21: ಬೆಂಗಳೂರು ನಗರದ ಆಭರಣ ಪ್ರಿಯರಿಗಾಗಿ ಡಿವೈನ್ ಸಾಲಿಟೇರ್ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ವಜ್ರಾಭರಣಗಳ ಕಣಜವನ್ನು ತರುತ್ತಿದೆ.
ವಜ್ರಾಭರಣಗಳಿಗೆ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಡಿವೈನ್ ಸಾಲಿಟೇರ್ ಆಗಸ್ಟ್ 22 ರಿಂದ 26 ರವರೆಗೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿರುವ ನಗರದ ನಂಬಿಕಾರ್ಹ ಹಾಗೂ ಪ್ರಮುಖ ಆಭರಣ ಮಾರಾಟಗಾರ ದವನಂ ಜ್ಯುವೆಲ್ಲರಿ ಮಳಿಗೆಯಲ್ಲಿ ಸಾಲಿಟೇರ್, ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಈ ಆಕರ್ಷಕ ಕೊಡುಗೆ ಮಲ್ಲೇಶ್ವರಂ ನಲ್ಲಿರುವ ದವನಂ ಆಭರಣ ಮಳಿಗೆಯಲ್ಲೂ ಲಭ್ಯವಿದೆ.
ಇದುವರೆಗೆ ಬೆಂಗಳೂರು ನಗರದಲ್ಲಿ ಯಾವುದೇ ಆಭರಣ ಮಳಿಗೆಗಳು ಏರ್ಪಡಿಸದಂತಹ ವಜ್ರಾಭರಣಗಳ ಮೇಳವನ್ನು ಡಿವೈನ್ ಸಾಲಿಟೇರ್ ಆಯೋಜಿಸುವ ಮೂಲಕ ವಜ್ರಾಭರಣ ಪ್ರಿಯರ ಮನ ತಣಿಸಲಿದೆ.

ಆಗಸ್ಟ್ 22 ರಂದು ಮಧ್ಯಾಹ್ನ 12 ಗಂಟೆಗೆ ಖ್ಯಾತ ಚಿತ್ರತಾರೆ ಪ್ರಿಯಾಂಕ ಉಪೇಂದ್ರ ಅವರು ಈ ಮೇಳವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ಡೈಮಂಡ್ ಪರಿಪೂರ್ಣವಾದ ಕಟ್ -ಹಾರ್ಟ್‍ಗಳು ಮತ್ತು ಆ್ಯರೋಗಳನ್ನು (perfect cut-heart & Arrow) ಹೊಂದಿವೆ. ನಿಪುಣ ಕರಕುಶಲಕರ್ಮಿಗಳಿಂದ ಸಿದ್ಧವಾಗಿರುವ ಈ ವಜ್ರಾಭರಣಗಳು ಎಲ್ಲರಿಗೂ ಸಂತಸ ನೀಡಲಿವೆ
ಇದಲ್ಲದೇ, ಮುಂಬೈನಿಂದ ಆಗಮಿಸಲಿರುವ ವಜ್ರಾಭರಣದ ಪರಿಣಿತರು ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಕೂಲಂಕುಶವಾದ ಮಾಹಿತಿಗಳನ್ನು ನೀಡಲಿದ್ದಾರೆ. ಅಲ್ಲದೇ, ಆಭರಣಗಳನ್ನು ಕಾಯ್ದಿಟ್ಟುಕೊಳ್ಳುವ ಕುರಿತೂ ಮಾರ್ಗದರ್ಶನ ನೀಡಲಿದ್ದಾರೆ.
5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಲಿಟೇರ್ ವಜ್ರಾಭರಣಗಳಿಗೆ ಒಂದು ಖರೀದಿಸಿ, ಎರಡನ್ನು ಉಚಿತವಾಗಿ ಪಡಯುವಂತಹ ಯೋಜನೆಯನ್ನು ಇಲ್ಲಿ ನೀಡಲಾಗುತ್ತಿದೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 1 ಕ್ಯಾರೆಟ್ ಡಿವೈನ್ ಸಾಲಿಟೇರ್ ಅನ್ನು ಖರೀದಿಸಿದರೆ ಅದೇ ಗುಣಮಟ್ಟದ 0.18 ಸೆಂಟ್ ತೂಕದ ಡಿವೈನ್ ಡೈಮಂಡ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೇ, 1 ಕ್ಯಾರೆಟ್‍ಗಿಂತ ಕಡಿಮೆ ತೂಕದ ವಜ್ರಾಭರಣಗಳ ಮೇಲೆ ಆಕರ್ಷಕವಾದ ರಿಯಾಯ್ತಿಗಳನ್ನೂ ಪಡೆಯಬಹುದಾಗಿದೆ.
ಪ್ರದರ್ಶನ ಮತ್ತು ಮಾರಾಟ ಮೇಳದ ವಿವರ
ಸ್ಥಳ: ದವನಂ ಜ್ಯುವೆಲ್ಲರ್ಸ್ ಪ್ರೈ ಲಿಮಿಟೆಡ್
ಕಮರ್ಷಿಯಲ್ ಸ್ಟ್ರೀಟ್ ಹಾಗೂ ವೆಸ್ಟ್ ಪಾರ್ಕ್ ರೋಡ್ ಮಲ್ಲೇಶ್ವರಂ
ದಿನಾಂಕ: ಆಗಸ್ಟ್ 22 ರಿಂದ 26 ರವರೆಗೆ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications