ಬೆಂಗಳೂರು: ದಸರಾ ದಿನ ಈ ರಸ್ತೆಯಲ್ಲಿ ಹೋಗ್ಬೇಡಿ

ಬೆಂಗಳೂರು, ಅಕ್ಟೋಬರ್, 21 : ದಸರಾ ಹಬ್ಬದ ದಿನದಂದು ನಗರದ ಕೆಲವು ರಸ್ತೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ ಹಾದುಹೋಗುತ್ತದೆ. ಈ ನಿಮಿತ್ತ ಕೆಲವೆಡೆ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದ್ದು, ಜಾಥಾ ಸಂದರ್ಭದಲ್ಲಿ ಜನರ ಓಡಾಟ ಹಾಗೂ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಬೆಂಗಳೂರು ನಗರದ ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಅಕ್ಟೋಬರ್ 23ರ ಶುಕ್ರವಾರ ರಂದು ಜೆ.ಸಿ ನಗರದ ಮುನಿರೆಡ್ಡಿಪಾಳ್ಯದಲ್ಲಿ ದಸರಾ ಮಹೋತ್ಸವವು ನಡೆಯಲಿದೆ. ಈ ಬಾರಿಯ ದಸರಾದಲ್ಲಿ ಸಾಕಷ್ಟು ಮಂದಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ಹಲವೆಡೆ ಸಂಚಾರ ನಿಷೇಧಿಸಲಾಗಿದೆ.[ಬೆಂಗಳೂರು ಸಂಚಾರ ಸಮಸ್ಯೆ ಬಗೆಹರಿಸಲು ಸಲಹೆ ಕೊಡಿ]

Dasara: Traffic police has changed some routes of bengaluru on Friday, October 23rd

ಕಳೆದ ವರ್ಷಕ್ಕಿಂತ ಈ ವರ್ಷದ ಮೆರವಣಿಗೆ ವಿಜೃಂಭಣೆಯಿಂದ ನಡೆಯುವ ಸಾಧ್ಯತೆ ಇದೆ. ಜಾಥಾದಲ್ಲಿ ಪಾಲ್ಗೊಳ್ಳುವ ಡೊಳ್ಳುಕುಣಿತ, ನಾನಾ ಕಲೆಗಳ ನೃತ್ಯ ತಂಡಗಳು, ಸ್ತಬ್ಧ ಚಿತ್ರಗಳು, ಮುಖವಾಡ ಬೊಂಬೆಗಳು ದಸರಾದ ಮೆರಗನ್ನು ಇನ್ನಷ್ಟು ಹೆಚ್ಚಿಸಲಿದೆ.

ಅಂದು ದಸರಾ ಸಾಂಸ್ಕೃತಿಕ ಮೆರವಣಿಗೆ ಈ ಕೆಳಕಂಡ ಮಾರ್ಗಗಳಲ್ಲಿ ಹಾದು ದಸರಾ ಮಂಟಪದ ಬಳಿ ಬರುತ್ತದೆ. ನಂತರ ಜೆ.ಸಿ.ನಗರ ಮುಖ್ಯ ರಸ್ತೆಯಲ್ಲಿ ಹಾದು, ಶಿವಣ್ಣ ವೃತ್ತದಿಂದ ಸ್ವಸ್ಥಾನಕ್ಕೆ ಸಂಚರಿಸುತ್ತದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಪ್ರಯಾಣದರ, ಮಾರ್ಗದ ಮಾಹಿತಿ ನೀಡುವ ಆಟೋ ಕೌಂಟರ್]


ಸಾಂಸ್ಕೃತಿಕ ಮೆರವಣಿಗೆ ಸಂಚರಿಸುವ ಮಾರ್ಗ:-

* ಕಾವಲ್ ಬೈರಸಂದ್ರ - ಪುಷ್ಪಾಂಜಲಿ ಚಿತ್ರಮಂದಿರ , ದಿಣ್ಣೂರು ದೇವೇಗೌಡ ಜಂಕ್ಷನ್ , ಎಡ ತಿರುವು ದೇವೇಗೌಡ ರಸ್ತೆ - ಪಿ.ಆರ್.ಟಿ.ಸಿ., ವೃತ್ತದಲ್ಲಿ (ದಸರಾ ಮಂಟಪ) ಒಂದೆಡೆ ಸೇರುವರು
* ಚಾಮುಂಡಿ ನಗರ - ದಿಣ್ಣೂರು ಮುಖ್ಯರಸ್ತೆ - ಆರ್.ಟಿ.ನಗರ ಪೊಲೀಸ್ ಠಾಣೆ, ಆರ್.ಟಿ.ನಗರ ಮುಖ್ಯರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್ ಎಡ ತಿರುವು ಪಿ.ಆರ್.ಟಿ.ಸಿ., ವೃತ್ತದಲ್ಲಿ (ದಸರಾ ಮಂಟಪ) ಒಂದೆಡೆ ಸೇರುವರು.
* ಜೆ.ಸಿ.ನಗರ - ಪೆಮ್ಮೇಗೌಡ ರಸ್ತೆ - ಮುನಿಸ್ವಾಮಪ್ಪ ರಸ್ತೆ - ಜೆ.ಸಿ.ನಗರ ಪಿ.ಎಸ್ ಜಂಕ್ಷನ್ - ಶಿವಣ್ಣವೃತ್ತ - ಜೆ.ಸಿ.ನಗರ ಮುಖ್ಯ ರಸ್ತೆ- ಪಿ.ಆರ್.ಟಿ.ಸಿ., ವೃತ್ತದಲ್ಲಿ (ದಸರಾ ಮಂಟಪ) ಒಂದೆಡೆ ಸೇರುವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+