ಆರ್.ಟಿ ನಗರದಲ್ಲಿ ಮೂರು ದಿನಗಳ ‘ಸಂಸ್ಕೃತಿ ಸಿರಿ ದೇಸಿ ಹಬ್ಬ’
ಬೆಂಗಳೂರು ಅಕ್ಟೋಬರ್ 17: ಡೈಮಂಡ್ ಟ್ರೀ ಇವೆಂಟ್ ಮ್ಯಾನೇಜ್ ಮೆಂಟ್ ವತಿಯಿಂದ ಆರ್ ಟಿ ನಗರ ಪೊಲೀಸ್ ಠಾಣೆ ಎದುರಿರುವ ಎಚ್ ಎಂ ಟಿ ಆಟದ ಮೈದಾನದಲ್ಲಿ ಮೂರು ದಿನಗಳ 'ಸಂಸ್ಕೃತಿ ಸಿರಿ ದೇಸಿ ಹಬ್ಬ ಆಯೋಜಿಲಾಗಿದೆ. ಈ 'ಸಂಸ್ಕೃತಿ ಸಿರಿ ದೇಸಿ ಹಬ್ಬ' ಅಕ್ಟೋಬರ್ 17, 18, 19ರಂದು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣದ ಜತೆಗೆ ತಿನಿಸು ಪ್ರಿಯರಿಗಾಗಿ ದೇಸಿ ರುಚಿಯ ವಿವಿಧ ಬಗೆಯ ಖಾದ್ಯಗಳು ಇಲ್ಲಿವೆ ಹಾಗೇ ಶಾಪಿಂಗ್ ಪ್ರಿಯರಿಗಾಗಿ ಶಾಪಿಂಗ್ ಮೇಳ, ಪುಸ್ತಕ ಪ್ರಿಯರಿಗಾಗಿ ಪುಸ್ತಕ ಮೇಳ, ಹೆಣ್ಣುಮಕ್ಕಳಿಗಾಗಿ ಕಸೂತಿ ಸೀರೆಗಳು, ಆಭರಣಗಳ ಪ್ರದರ್ಶನವಿದೆ. ಇನ್ನು ಮಕ್ಕಳ ಮನತಣಿಸಲು ವಿವಿಧ ಬಗೆಯ ಮಕ್ಕಳ ಆಟಿಕೆಗಳು ಹಾಗೂ ಆಟಗಳು ಇಲ್ಲಿವೆ.
ಮೂರು ದಿನವೂ ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರಿಗೂ ಮುದ ನೀಡಲಿದೆ.

ಅಕ್ಟೋಬರ 17ರಂದು ಕಲರ್ಸ್ ಕನ್ನಡದ ಮಜಾ ಟಾಕೀಸ್ ಖ್ಯಾತಿಯ ರೆಮೊ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಹಾಗೇ ಗುರುವಾರ ಸಂಜೆ ನಾವೇ ಭಾಗ್ಯವಂತರು ಸಿನಿಮಾ ತಂಡದಿಂದ ಮನೋರಂಜನೆ ಕಾರ್ಯಕ್ರಮವಿದೆ. ಹಾಗೇ ಮ್ಯಾಜಿಕ್ ಶೋ ಕೂಡ ನಡೆಯಲಿದೆ. ಇದರ ಜತೆಗೆ ಉಚಿತ ಆರೋಗ್ಯ ತಪಾಸಣೆ ಕೂಡ ಇದೆ.
ಇನ್ನು ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟಿ ಹಾಗೂ ರೂಪದರ್ಶಿ ಚಂದನಾ ದೇವರಾಜ್ ಗೌಡ ದೀಪ ಬೆಳಗಿಸಲಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಕೂಡ ಈ ಮೂರು ದಿನದ ಸಂಸ್ಕೃತಿ ಸಿರಿ ದೇಸಿ ಹಬ್ಬಕ್ಕೆ ತಮ್ಮ ಸಹಕಾರವನ್ನು ನೀಡಿದ್ದಾರೆ.
ಸ್ಥಳ:
ಆರ್ ಟಿ ನಗರ ಎಚ್ ಎಂ ಟಿ ಪಾಳ್ಯ ಮೈದಾನ,
ಸಮಯ ಬೆಳಿಗ್ಗೆ 9.30ರಿಂದ ರಾತ್ರ 9.30ವರೆಗೆ
ಆರ್.ಟಿ ನಗರ ಪೊಲೀಸ್ ಸ್ಟೇಷನ್ ಎದುರು
ಮೂರುದಿನವೂ ನಿಮ್ಮ ಮನೆಮಂದಿಯ ಮನಸ್ಸುಗಳಿಗೆ ಮುದ ನೀಡಲಿರುವ ಈ ಕಾರ್ಯಕ್ರಮದಲ್ಲಿ ಖುಷಿಯಿಂದ ಪಾಲ್ಗೊಳ್ಳಬಹುದಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications