Bengaluru Traffic: ಸಾಲು ರಜೆಗೆ ಊರಿನತ್ತ ಜನರ ಸಂಚಾರ, ಟೋಲ್-ಬೈಪಾಸ್ ಬಳಿ ಟ್ರಾಫಿಕ್ ಜಾಮ್
ಬೆಂಗಳೂರು, ಅಕ್ಟೋಬರ್ 02: ದಸರಾ ಹಬ್ಬ ಇಂದಿಗೆ ಕೊನೆಗೊಂಡಿದೆ. ಕಳೆದ ಒಂಬತ್ತು ದಿನಗಳಿಂದ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಮತ್ತು ಹಬ್ಬ ಪ್ರಯುಕ್ತ ರಜೆ ಇದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬುಧವಾರ ಆಯುಧ ಪೂಜೆ ಮುಗಿಸಿಕೊಂಡು ಬೆಂಗಳೂರಿನಿಂದ ಊರುಗಳತ್ತ ತೆರಳುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಕೊಂಚ ತಗ್ಗಿದಂತೆ ಕಾಣುತ್ತಿದೆ.
ಬುಧವಾರ, ಗುರುವಾರ ರಜೆ ಇದೆ. ನಂತರ ಶನಿವಾರ ಮತ್ತು ಭಾನುವಾರ ರಜೆ ಇದೆ. ಹಲವರು ಶುಕ್ರವಾರ ಒಂದು ದಿನ ರಜೆ ಹಾಕಿ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ನೆಲಮಂಗಲ, ಹಾಸನ ರಸ್ತೆ, ಹೈದರಾಬಾದ್ ರಸ್ತೆ, ಬೆಂಗಳೂರು-ಮೈಸೂರು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ನೆಲಮಂಗಲ ಟೋಲ್ ಬಳಿಕ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ರಾಷ್ಟ್ರೀಯ ಹೆದ್ದಾರಿ 4, ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿ ಟ್ರಾಫಿಕ್ ಕಂಡು ಬಂತು.

ತಮ್ಮ ಊರುಗಳಿಗೆ ಮಾತ್ರವಲ್ಲದೇ ಪ್ರವಾಸಿ ತಾಣಗಳತ್ತ ಸಹ ಮುಖ ಮಾಡಿದ್ದಾರೆ. ಇದರಿಂದಲೂ ಬೆಂಗಳೂರು ಕುಣಿಗಲ್ ಬೈಪಾಸ್ ಸೇರಿದಂತೆ ಹೊರ ಭಾಗಗಳಲ್ಲಿ ಅಲ್ಲಲ್ಲಿ ದಟ್ಟಣೆ ಕಂಡು ಬಂದಿದೆ. ಇನ್ನೂ ಬೆಂಗಳೂರು ನಗರದಲ್ಲಿ ಪೀಕ್ ಸಮಯವಾದ ಬೆಳಗ್ಗೆ ಮತ್ತು ಸಂಜೆ ಬುಧವಾರದಿಂದಲೂ ಅಷ್ಟಾಗಿ ಸಾಮಾನ್ಯ ದಿನಗಳಷ್ಟು ಬಹಳಷ್ಟು ವಾಹನಗಳು ಸಂಚರಿಸಿದ್ದು ಕಾಣಿಸಲಿಲ್ಲ.
ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ಬಳಿಕ ವಾಹನಗಳು ಸಾಲುಗಟ್ಟಿ ನಿಧಾನ ಪ್ರಯಾಣ ಬೆಳೆಸಿದವು. ಮರಳಿ ಮುಂದಿನ ಸೋಮವಾರ ಮತ್ತೆ ಬೆಂಗಳೂರಿನಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡು ಬರುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಈ ವಾರಾಂತ್ಯಕ್ಕೆ ಟ್ರಾಫಿಕ್ ಗೆ ತಾತ್ಕಾಲಿಕ ಮುಕ್ತಿ ಸಿಗಲಿದೆ.












Click it and Unblock the Notifications