ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಕೆಪಿಯಲ್ಲಿ ದಸರಾ ಹಬ್ಬದ ವಿಶೇಷ ಮಾರಾಟ ಹಾಗೂ ಪ್ರದರ್ಶನ ಮೇಳ

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್‌ 11: ಕರ್ನಾಟಕ ರಾಜ್ಯದ ನಾಡ ಹಬ್ಗ ದಸರಾ ಸಮೀಪಿಸುತ್ತಿದೆ. ದೇಶ ವಿದೇಶ ಹಾಗೂ ವಿ‍ಶ್ವದ ಗಮನ ಸೆಳೆಯುವ ದಸರಾ ಹಬ್ಬದಲ್ಲಿ ಮತ್ತೊಂದು ವಿಶೇಷ ಎಂದರೆ ದಸರಾ ಗೊಂಬೆಗಳು. ಈ ಗೊಂಬೆಗಳನ್ನು ಕೂರಿಸುವುದು ಒಂದು ಸಂಪ್ರದಾಯವಾಗಿ ಮುಂದುವರೆದುಕೊಂಡು ಬಂದಿದೆ. ಕಣ್ಮನ ಸೆಳೆಯುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುವ ಮೂಲಕ ಮನೆ ಮಂದಿಯೆಲ್ಲಾ ಸಂಭ್ರಮಿಸುತ್ತಾರೆ.

Recommended Video

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ | Oneindia Kannada

ಈ ಗೊಂಬೆಗಳು ಪರಂಪರಾಗತವಾಗಿ ಓಂದು ತಲೆಮಾರಿನಿಂದ ಇನ್ನೊಂದಕ್ಕೆ ಹಸ್ತಾಂತರಗೊಳ್ಳುತ್ತವೆ. ಆದರೆ, ಪ್ರತಿಬಾರಿಯೂ ಹೊಸದನ್ನು ನೀಡುವ ದೃಷ್ಟಿಯಿಂದ ಕೆಲವೊಂದು ಗೊಂಬೆಗಳನ್ನು ಖರೀದಿಸುವುದು ನಡೆದು ಬಂದಿರುವ ಸಂಪ್ರದಾಯ.

ಇಂತಹ ಸಂಪ್ರದಾಯಕ್ಕೆ ಪುಷ್ಠಿ ಕೊಡುವ ನಿಟ್ಟಿನಲ್ಲಿ ಹಾಗೂ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗುವ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ಸೆಪ್ಟೆಂಬರ್‌ 13 ರಿಂದ 22 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ‌ ಡಿಸೈನ್‌ ಸ್ಟ್ರೋಮ್ಸ್‌, ಚಿತ್ತಾರ ಸಹಯೋಗದಲ್ಲಿ ಅರ್ಬನ್‌ ಬಜಾರ್ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.

 ದಸರಾ ಗೊಂಬೆಗಳು ಆಕರ್ಷಣೆ

ದಸರಾ ಗೊಂಬೆಗಳು ಆಕರ್ಷಣೆ

ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಗೊಂಬೆಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ.

100ಕ್ಕೂ ಅಧಿಕ ಅಂಗಡಿಗಳಿವೆ

100ಕ್ಕೂ ಅಧಿಕ ಅಂಗಡಿಗಳಿವೆ

100 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

ಇದರ ಜೊತೆಯಲ್ಲಿಯೇ, ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ.

ಹ್ಯಾಂಡ್‌ ಲೂಮ್‌ ಸ್ಯಾರಿ ಕೊಳ್ಳಿರಿ

ಹ್ಯಾಂಡ್‌ ಲೂಮ್‌ ಸ್ಯಾರಿ ಕೊಳ್ಳಿರಿ

ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

ನೂರಾರು ಬಗೆಯ ಉತ್ಪನ್ನಗಳ ಪ್ರದರ್ಶನ

ನೂರಾರು ಬಗೆಯ ಉತ್ಪನ್ನಗಳ ಪ್ರದರ್ಶನ

ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

ಸೆಪ್ಟೆಂಬರ್‌ 13 ರಿಂದ 22 ರ ವರೆಗೆ ಮಾರಾಟ

ಸೆಪ್ಟೆಂಬರ್‌ 13 ರಿಂದ 22 ರ ವರೆಗೆ ಮಾರಾಟ

ಸೆಪ್ಟೆಂಬರ್‌ 13 ರಿಂದ 22 ರ ವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಡಿಸೈನ್‌ ಸ್ಟ್ರೋಮ್ಸ್‌, ಚಿತ್ತಾರ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.

ಅರ್ಬನ್‌ ಬಜಾರ್‌
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ಸೆಪ್ಟೆಂಬರ್‌ 13 ರಿಂದ ಸೆಪ್ಟೆಂಬರ್‌ 22, 2019 ವರೆಗೆ
ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

English summary
Dasara Dolls main attraction at Urban Bazaar being held at Sepetember 13 to 22, 2019 Chitrakala Parishat, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X