ದರ್ಶನ್‌ ಬಂಧನ: ಆಹಾರ ತಿನ್ನುತ್ತಿಲ್ಲ, ತೂಕದಲ್ಲಿ ಇಳಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾಗಿದ್ದಾರೆ. ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್‌, ಶನಿವಾರ ಪೊಲೀಸ್‌ ಕಸ್ಟಡಿ ಮುಕ್ತಾಯ ಆಗಲಿದೆ. ಶನಿವಾರ ಇವರನ್ನು ಬೆಂಗಳೂರಿನ ಮೆಜೆಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರು ಪಡೆಸುತ್ತಾರೆ. ದರ್ಶನ್‌ ಅವರ ಕಸ್ಟಡಿ ಅವಧಿ ವಿಸ್ತರಣೆ ಆಗುವುದೋ, ಜೈಲು ಸೇರುತ್ತಾರೋ ಕಾದು ನೋಡಬೇಕಿದೆ.

ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದಾಗಿನಿಂದಲೂ ಈ ಸುದ್ದಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್‌ ಅವರನ್ನು ಈಗಾಗಲೇ ವಿಚಾರಣೆ ನಡೆಸಿರುವ ಪೊಲೀಸರು, ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿ ಸರಿಯಾಗಿ ಆಹಾರ ಸೇವನೆ ಮಾಡುತ್ತಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿವೆ.

Darshan s weight loss began after his arrest due to a lack of proper eating

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 11 ದಿನಗಳ ಕಾಲ ಪೊಲೀಸ್‌ ವಶದಲ್ಲಿರುವ ದರ್ಶನ್‌, ತಮ್ಮ ತೂಕದಲ್ಲಿ ಇಳಿಕೆ ಕಂಡಿದ್ದಾರೆ. ಬಂಧನದ ಬಳಿಕ ನಟ ದರ್ಶನ್‌ ಸುಮಾರು 1 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲದೆ ಬಿಪಿಯಲ್ಲೂ ವ್ಯತ್ಯಾಸವಾಗಿದೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಈಡಾದ ದರ್ಶನ್‌ ರನ್ನು ಕಸ್ಟಡಿಗೆ ಪಡೆದಾಗ ಅವರ ತೂಕ 107 ಕೆಜಿ ಆಗಿತ್ತು. ಅಲ್ಲದೆ ಬಿಪಿ ಸಹ 134/86 ಇತ್ತು. ಆದರೆ ಸತತ ವಿಚಾರಣೆಯನ್ನು ಎದುರಿಸಿ, ಸರಿಯಾಗಿ ಊಟಾ ಮಾಡದ ದರ್ಶನ್‌ ತೂಕ ನಷ್ಟ ಹಾಗೂ ಬಿಪಿಯಲ್ಲಿ ವ್ಯತ್ಯಾಸ ಕಂಡಿದ್ದಾರೆ. ದರ್ಶನ್‌ ಅವರು ಮೊದಲ ದಿನ ಬರೀ ನೀರು ಹಾಗೂ ಜ್ಯೂಸ್ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಜೂನ್‌ 11 ರಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಎಲ್ಲವೂ ಸ್ಥಿರವಾಗಿ ಇತ್ತು ಎಂದು ತಿಳಿದು ಬಂದಿದೆ.

Darshan s weight loss began after his arrest due to a lack of proper eating

ಕಸ್ಟಡಿಗೆ ಪಡೆದ ಬಳಿಕ ದರ್ಶನ್‌ ಆರೋಗ್ಯ ತಪಾಸಣೆಯನ್ನು ನಡೆಸಿದ ಮಲ್ಲತ್ತಹಳ್ಳಿ ಪಿಎಚ್‌ಸಿ ವೈದ್ಯ ಡಾ. ಸುನಿತಾ ತಂಡ, ಪರಿಶೀಲನೆ ನಡೆಸಿತು. ಆಗ ಅವರ ಬಿಪಿ ಹೆಚ್ಚಾಗಿದ್ದು ತಿಳಿದು ಬಂದಿದೆ. ಸತತ ಇವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಇವರ ಬಿಪಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ವೈದ್ಯರ ತಂಡ ಅಧಿಕಾರಿಗಳಿ ತಿಳಿಸಿದ್ದು, ಔಷಧಿ ನೀಡಲಾಗಿದೆ. ಆದರಿಂದ ಅವರು ಚೆನ್ನಾಗಿ ನಿದ್ರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಪರಿಶೀಲನೆ ನಡೆಸಿದಾಗ 106 ಕೆಜಿ, ಬಿಪಿ 130/90 ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+