ಕೆಂಚಾಲೋ ಮಂಚಾಲೋ ಹಾಡು ಜೈಲಿನಲ್ಲಿ ಕೇಳದ್ರೆ ಸೆಲೆಬ್ರೇಷನ್‌: ಕರಿಯಾ ಸಾಂಗ್‌ಗೆ ಖೈದಿಗಳು ಫಿದಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟ ದರ್ಶನ್, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರೆಯುತ್ತಿದ್ದಾರೆ. ದರ್ಶನ್‌ ಜೈಲಿನಲ್ಲಿ ಊಟ ಸೇರುತ್ತಿಲ್ಲ, ತೂಕ ನಷ್ಟ ಆಗಿದೆ. ಹೀಗಾಗಿ ಮನೆ ಊಟ ಕೊಡಿಸುವಂತೆಯೂ ಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ ಈ ಬಗ್ಗೆ ಕೋರ್ಟ್‌ ಇನ್ನು ವಿಚಾರಣೆ ನಡೆಸುತ್ತಿದೆ.

ದರ್ಶನ್‌ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದಾಗಿನಿಂದಲೂ ಖೈದಿಗಳು ನಾನಾ ಕಾರಣಗಳನ್ನು ಹೇಳುತ್ತಾ, ನಟ ಇರುವ ಸೆಲ್‌ ಕಡೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ದರ್ಶನ್‌ ಅವರನ್ನು ಭೇಟಿ ಆಗಲು ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರಗಡೆ ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್‌ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಜೀವನ ನಡೆಸುವಂತಾಗಿದೆ.

Darshan s Kariya Movie Song Becomes a Favorite Among Prisoners in Jail

ದರ್ಶನ್‌ ಹಾಡಿಗೆ ಖೈದಿಗಳು ಫಿದಾ

ದರ್ಶನ್‌ ಅಂಡರ್‌ ವರ್ಲ್ಡ್‌ ಬೇಸಡ್‌ ಚಿತ್ರಗಳನ್ನು ಹೆಚ್ಚಾಗಿ ಮಾಡಿದ್ದಾರೆ. ಮೆಜೆಸ್ಟಿಕ್‌, ದಾಸ್, ಶಾಸ್ತ್ರಿ, ರಾಬರ್ಟ್‌ ಮುಂತಾದ ಚಿತ್ರಗಳ ಕಥಾ ಹಂದರ ಒಂದೇ ಆಗಿದೆ. ಇದರಲ್ಲೂ ಭಿನ್ನ ವಿಭಿನ್ನ ಹಾಡುಗಳು ಇವೆ. ಲವ್‌ ಕಮ್‌ ರೌಡಿಸಂ ಚಿತ್ರಗಳಲ್ಲಿ ಮತ್ತೊಂದು ದರ್ಶನ್‌ ನಟನೆಯ ಕರಿಯ ಚಿತ್ರ ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದ ಒಂದು ಸಾಂಗ್ ಜೈಲಿನ ಕೈದಿಗಳ ಹಾಟ್‌ ಫೆವರೀಟ್‌ ಎಂದು ತಿಳಿ ಬಂದಿದೆ.

ದರ್ಶನ್‌ ಅಭಿನಯ ಹಾಗೂ ಜೋಗಿ ಪ್ರೇಮ್‌ ಅವರ ನಿರ್ದೇಶನದ ಕರಿಯಾ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಆ ಚಿತ್ರದಲ್ಲಿ ದರ್ಶನ್ ಅವರ ನೈಜ ನಟನೆಗೆ ಅಭಿಮಾನಿಗಳು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಅದ್ರಲ್ಲೂ ಇದರಲ್ಲಿನ ಹಾಡುಗಳು ಪಡ್ಡೆ ಹೈಕ್ಕಳಿಂದ ಹಿಡಿದು ಎಲ್ಲರಿಗೂ ಫೆವರೀಟ್‌..

ಕರಿಯಾ ಚಿತ್ರದ ಹಾಡು ಆ್ಯಂಥಮ್ ಸಾಗ್‌

ಕರಿಯಾ ಸಿನಿಮಾ ಕೆಂಚಾಲೋ ಮಂಚಾಲೋ ಹಾಡು ಹಾಕದೇ ಜೈಲಿನಲ್ಲಿ ಸೆಲಿಬ್ರೇಷನ್‌ ಆಗುದೇ ಇಲ್ಲ. ಸೆಲಿಬ್ರಿಷನ್‌ ಮೂಡನ್ನು ಹೆಚ್ಚಿಸುವ ಸಾಂಗ್‌ ಎಂದರೆ ಅದು ಕರಿಯ ಚಿತ್ರದ ಕೆಂಚಾಲೋ ಸಾಂಗ್‌. ಈ ಹಾಡನ್ನು ಜೈಲಿನಲ್ಲಿ ಯಾವುದೇ ಫಕ್ಷನ್‌ ಆದ್ರೂ ಈ ಹಾಡನ್ನು ಬಳಸುತ್ತಾರೆ. ಹೀಗಾಗಿ ಇದು ಒಂದು ರೀತಿ ಖೈದಿಗಳ ಪಾಲಿನ ಆ್ಯಂಥಮ್ ಸಾಗ್‌ ಆಗಿ ಬಿಟ್ಟಿದೆ.

ಕರಿಯ ಚಿತ್ರದ ಈ ಹಾಡನ್ನು ಬಿಟ್ಟರೆ, ಖೈದಿಗಳು ಹೆಚ್ಚಾಗಿ ನಟಸಾರ್ವಭೌಮ ಡಾ. ರಾಜಕುಮಾರ್ ಅವರು ಅಭಿನಯದ ಸತ್ಯ ಹರಿಶ್ಚಂದ್ರ ಸಿನಿಮಾದ ಕುಲದಲ್ಲಿ ಕೀಳ್ಯಾವುದು ಸಾಂಗ್‌ ಪ್ಲೇ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+