Darshan Jail: ದರ್ಶನ್‌ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಮನವಿ ಸಲ್ಲಿಸಿದ್ದು ಏಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಬೆಂಗಳೂರಿನ 24 ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದ ದರ್ಶನ್‌ಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ನೀಡಲಾಗಿದೆ.

ಈ ಮೊದಲೇ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಪವಿತ್ರಾ ಗೌಡ್ ಸೇರಿದಂತೆ ಹಲವರು ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ. ಈಗ ದರ್ಶನ್‌ ಸೇರಿದಂತೆ ನಾಲ್ಕು ಜನರನ್ನು ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ದರ್ಶನ್‌ ಅವರಿಗೆ ಯಾವ ಸೆಲ್‌ನಲ್ಲಿ ಇರಿಸಲಾಗಿದೆ ಎಂಬುದರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.

Darshan Jail Why did the SPP file a request to shift Darshan to another jail

ಇದಕ್ಕೂ ಮೊದಲು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಿಂದ ದರ್ಶನ್‌ ಅವರನ್ನು ಬಿಗಿ ಪೊಲೀಸ್ ಬಧ್ರತೆಯಲ್ಲಿ ಬೆಂಗಳೂರಿನ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಇದೇ ವೇಳೆ ದರ್ಶನ್‌ ಪರ ವಕೀಲರು ಹಾಗೂ ಎಸ್‌ಪಿಪಿ ಪರ ವಾದ ಪ್ರತಿ ವಾದಗಳು ನಡೆಯಿತು. ಈ ವೇಳೆ ಎಸ್‌ಪಿಪಿ ಕೋರ್ಟ್‌ ಒಂದು ಮನವಿಯನ್ನು ಮಾಡುತ್ತಾರೆ. ಬಂಧಿತರನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ವಿಚಾರಣೆಯನ್ನು ಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ.

ಬೇರೆ ಜೈಲಿಗೆ ಏಕೆ?

ನಟ ದರ್ಶನ್‌ ಹಾಗೂ ಉಳಿದ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಆದರೆ ಇದಕ್ಕೆ ಎಸ್‌ಪಿಪಿ ಬೇರೆ ಜೈಲಿಗೆ ಕಳುಹಿಸುವಂತೆ ಮನವಿಯನ್ನು ಮಾಡಿದ್ದರು. ಹಾಗಿದ್ದರೆ, ಹೀಗೆ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಅಂದಹಾಗೆ ಈ ಎಲ್ಲ ಆರೋಪಿಗಳು ಒಂದೇ ಕಡೆ ಇದ್ದಲ್ಲಿ ಬೇರೆ ಸಂಚು ರೂಪಿಸುತ್ತಾರೆ. ಮಾತನಾಡಿಕೊಳ್ಳುತ್ತಾರೆ ಎಂಬ ವಾದವನ್ನು ಎಸ್‌ಪಿಪಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ದರ್ಶನ್‌ ಪರ ವಕೀಲರ ತಕರಾರು?

ಇನ್ನು ಈ ಮನವಿಗೆ ದರ್ಶನ್‌ ಪರ ವಕೀಲರು ತಕರಾರು ಎತ್ತಿದ್ದಾರೆ. ಒಂದು ವೇಳೆ ಬೇರೆ ಜೈಲುಗಳಿಗೆ ಆರೋಪಿಗಳನ್ನು ಕಳುಹಿಸಿದರೆ, ಅವರನ್ನು ನಾವು ಸಂಪರ್ಕ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮುಂದೇ ಇಟ್ಟಿದ್ದಾರೆ. ವಾದ ಪ್ರತಿ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.

ಇನ್ನು ದರ್ಶನ್‌ ಅವರನ್ನು ಕೋರ್ಟ್‌ ಹಾಲ್‌ನಿಂದ ಕರೆದುಕೊಂಡು ಬಂದು, ಪೊಲೀಸರು ತಂದಿದ್ದ ಜೀಪ್‌ನಲ್ಲಿ ಕೂರಿಸುತ್ತಿದ್ದಾಗ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್‌ರನ್ನು ಕಂಡು ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಅಭಿಮಾನಿಗಳತ್ತ ಕೈ ಬೀಸಿದ ದರ್ಶನ್‌, ಕೈ ಮುಗಿದು ಕುಳಿತುಕೊಂಡರು. ಇಲ್ಲಿಂದ ಪರಪ್ಪನ್ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವವರೆಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆಯ ಹಲವು ಕಡೆ ಅಭಿಮಾನಿಗಳು ಜಮಾಯಿಸಿದ್ದರು, ಈ ಅಭಿಮಾನಿಗಳನ್ನು ಚದುರಿಸುವುದೇ ಪೊಲೀಸರಿಗೆ ದೊಡ್ಡ ಕೆಲಸವಾಯಿತು.

ಪರಪ್ಪನ ಅಗ್ರಹಾರ ಜೈಲಿಗೆ ಬರುವುದಕ್ಕೂ ಮೊದಲೇ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹ ಪಟ್ಟರು. ಕೊನೆಗೆ ದರ್ಶನ್‌ರನ್ನು ಪೊಲೀಸ್‌ ವಾಹನದಲ್ಲಿ ಪರಪ್ಪನ್ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಯಿತು.

Darshan Jail Why did the SPP file a request to shift Darshan to another jail

ದರ್ಶನ್‌ ಖೈದಿ ನಂಬರ್‌ ಎಷ್ಟು?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎಲ್ಲ ಆರೋಪಿಗಳು ಪರಪ್ಪನ್ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಿನಲ್ಲಿ ಎಲ್ಲ ಖೈದಿಗಳಿಗೂ ನೀಡುವಂತೆ ದರ್ಶನ್‌ಗೂ ನಂಬರ್ ನೀಡಲಾಗಿದೆ. ದರ್ಶನ್‌ಗೆ 6106 ನಂಬರ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್‌ 11 ರಂದು ನಟ ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಇವರಷ್ಟೇ ಅಲ್ಲದೆ ಪವಿತ್ರಾ ಗೌಡ ಸೇರಿದಂತೆ 17 ಜನರನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+