Darshan Bird Case: ಕಾನೂನು ಬಾಹಿರವಾಗಿ ವಿಶಿಷ್ಟ ಪಕ್ಷಿ ಸಾಕಿದ್ದ ದರ್ಶನ್: ಹಳೆ ಕೇಸ್ ಓಪನ್!
ಬೆಂಗಳೂರು ಜೂನ್ 18: ಕಾನೂನು ಬಾಹಿರವಾಗಿ ವಿಶಿಷ್ಟ ಪಕ್ಷಿ ಸಾಕಿದ್ದ ಆರೋಪದ ಮೇಲೆ ನಟ ದರ್ಶನ್ ವಿರುದ್ಧ ಹಳೆ ಕೇಸ್ ಒಂದು ಓಪನ್ ಆಗಿದೆ. ಈ ಪ್ರಕರಣದಲ್ಲಿ ಎ1 ಆರೋಪಿ ವಿಜಯಲಕ್ಷ್ಮಿ, ಎ2 ಆರೋಪಿ ನಾಗರಾಜು ಹಾಗೂ ಎ3 ಆರೋಪಿ ದರ್ಶನ್ ಆಗಿದ್ದಾರೆ.
ಟಿ ನರಸಿಪುರದ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್ ಹಲವಾರು ಪ್ರಬೇಧದ ಪಕ್ಷಗಳನ್ನು ಸಾಕಿದ್ದಾರೆ. ಅದರಲ್ಲಿ ಬಾರ್ ಹೆಡೆಡ್ ಗೂಸ್ ಪಕ್ಷಿ ಕೂಡ ಒಂದು. ಇದು ವಿಶಿಷ್ಟ ಪ್ರಭೇದದ ಪಕ್ಷಿಯಾಗಿದ್ದು ಚಳಿಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಕಾನೂನು ಪ್ರಕಾರ ಈ ಪಕ್ಷಿಯನ್ನು ಸಾಕುವಂತಿಲ್ಲ.

ಆದರೆ ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಈ ಪಕ್ಷಿಯನ್ನು ಸಾಕಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿದು ಕೂಡ ದರ್ಶನ್ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಕೇವಲ ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ಅವರನ್ನು ವಿಚಾರಣೆ ನಡೆಸಿ ಕೈತೊಳೆದುಕೊಂಡಿದ್ದರು.
ಸದ್ಯ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಅರಣ್ಯ ಇಲಾಖೆ ದರ್ಶನ್ ವಿಚಾರಣೆ ನಡೆಸದೆ ಸುಮ್ಮನಾಗಿದ್ದು ಯಾಕೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಕೇಸ್ ವಿಚಾರದಲ್ಲಿ ಚಾರ್ಜ್‌ಶೀಟ್ ತಯಾರಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಹಿಂದೆ ಹಲವಾರು ಪ್ರಕರಣದಿಂದ ಪಾರಾಗಿದ್ದ ದರ್ಶನ್‌ಗೆ ಸದ್ಯ ಜೈಲು ಪಾಲಾಗುವ ಸಂಕಷ್ಟ ಶುರುವಾಗಿದೆ. ಅದ್ಯಾಕೋ ಏನೋ ದರ್ಶನ್ ಸಮಯವೇ ಸರಿಯಾಗಿಲ್ಲ. ಒಂದಾದ ಮೇಲೊಂದರಂತೆ ಹಳೆ ಪ್ರಕರಣಗಳು ತಲೆ ಎತ್ತಿಕೊಳ್ಳುತ್ತಿವೆ. ಹೀಗಾಗಿ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನುವ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಈ ಎಲ್ಲಾ ಪ್ರಕರಣಗಳಲ್ಲಿ ತಪ್ಪು ಸಾಬೀತಾದರೆ ದರ್ಶನ್ ಜೈಲು ವಾಸ ಪಕ್ಕಾ.

ಏನಿದು ರೇಣುಕಾಸ್ವಾಮಿ ಕೊಲೆ ಪ್ರಕರಣ?
ಇಡೀ ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿ ಬೀಳಿಸಿದ ಪ್ರಕರಣ ರೇಣುಕಾಸ್ವಾಮಿ ಕೊಲೆ ಕೇಸ್. ಜೂನ್ 8ರಂದು ರೇಣುಕಾಸ್ವಾಮಿ ಕೊಲೆಯಾದ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರನ್ನು ಬಂಧಿಸಲಾಗಿದೆ. ಈ ಕೊಲೆಯ ಎ2 ಆರೋಪಿ ದರ್ಶನ್ ಆಗಿದ್ದರೆ ಎ1 ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಆಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ದರ್ಶನ್ ಪ್ರೇಯಸಿಗೆ ತನ್ನ ಖಾಸಗಿ ಫೋಟೋ ಕಳುಹಿಸಿದ್ದನು. ಈ ವಿಚಾರವಾಗಿ ಕೋಪಗೊಂಡ ಪವಿತ್ರಾ ನಟ ದರ್ಶನ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ಅಷ್ಟೇ ಅಲ್ಲದೆ ದರ್ಶನ್ ಸ್ಟಾರ್‌ಗಿರಿಯನ್ನು ಪ್ರಶ್ನೆ ಮಾಡಿದ್ದಳು. ಇದರಿಂದ ಕೋಪಕೊಂಡಿದ್ದ ದರ್ಶನ್ ತನ್ನ ಗ್ಯಾಂಗ್‌ಗೆ ಸೂಚಿಸಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿದ್ದರು. ಬಳಿಕ ಆತನನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆತಂದು ಮನಬಂದಂತೆ ಹಲ್ಲೆ ಮಾಡಿದ್ದರಿಂದ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿತ್ರವಿಚಿತ್ರವಾಗಿ ಹಿಂಸಿಸಿ ರೇಣುಕಾಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಕೊಂದಿದೆ ಎನ್ನುವ ಆರೋಪವಿದೆ. ಪ್ರಕರಣದಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ವಿಚಾರಣೆ ಮಾಡಿದಷ್ಟು ಹಲವಾರು ವಿಷಯಗಳು ಬಹಿರಂಗವಾಗುತ್ತಿವೆ. ಅಲ್ಲದೆ ದರ್ಶನ್ ಈ ಹಿಂದೆ ಮೆರೆದಿದ್ದ ಕೃತ್ಯಗಳೆಲ್ಲವೂ ಬಯಲಾಗುತ್ತಿವೆ.












Click it and Unblock the Notifications