ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಂಡುಪಾಳ್ಯ ಗ್ಯಾಂಗ್ ಸದಸ್ಯ ತಿಮ್ಮನ ಬಿಡುಗಡೆಗೆ ಹೈಕೋರ್ಟ್ ಆದೇಶ

ದಂಡುಪಾಳ್ಯ ಗ್ಯಾಂಗ್ ಸದಸ್ಯ ತಿಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ಕರ್ನಾಟಕ ಹೈಕೋರ್ಟ್ ಅತನ ಬಿಡುಗಡೆಗಾಗಿ ಶುಕ್ರವಾರ ಆದೇಶ ನೀಡಿದೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 31: ದಂಡುಪಾಳ್ಯ ಹಂತಕರ ತಂಡದ ಸದಸ್ಯ ತಿಮ್ಮನ ಬಿಡುಗಡೆಗೆ ಶುಕ್ರವಾರ ಹೈಕೋರ್ಟ್ ಆದೇಶ ನೀಡಿದೆ. ಅತ ಹದಿನೆಂಟು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದು, ಬಿಡುಗಡೆಗೆ ಕೋರಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ಪೂರ್ಣ ಮಾಡಿದ ಕೋರ್ಟ್ ಬಿಡುಗಡೆಗಾಗಿ ಆದೇಶ ನೀಡಿದೆ.

ಬೆಂಗಳೂರಿನ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ತಿಮ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ತಿಮ್ಮ, ಪೊಲೀಸರು 1999ರಲ್ಲಿ ನನ್ನನ್ನ ಅರೆಸ್ಟ್ ಮಾಡಿದಾಗ 15 ವರ್ಷ ಅಗಿತ್ತು. ಬಾಲಾಪರಾಧಿಗಳಿಗೆ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸುವುದಕ್ಕೆ ಮಾತ್ರ ಕಾನೂನು ಅವಕಾಶ ನೀಡಿದೆ. ಆದರೆ ನನಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮನವಿ ತಿಳಿಸಿದ್ದ.[ದಂಡುಪಾಳ್ಯ ಗ್ಯಾಂಗ್ ತಕ್ಷಣ ಬಿಡುಗಡೆಗೆ ಸೂಚನೆ]

Dandupalya gang member Thimma will be releasing on Karnataka high court order

ತಾನು ಈಗಾಗಲೇ ಹದಿನೆಂಟು ವರ್ಷ ಜೈಲು ಶಿಕ್ಷೆ ಅನುಭವಿಸಿಯಾಗಿದೆ. ಆದ್ದರಿಂದ ಜೈಲಿನಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದ. ತಿಮ್ಮನ ಪರವಾಗಿ ಹಸ್ಮತ್ ಪಾಷಾ ಎಂಬುವವರು ವಾದ ಮಂಡಿಸಿದ್ದರು. ಆತನ ಅರ್ಜಿಯನ್ನು ಪುಅರಸ್ಕರಿಸಿರುವ ಹೈಕೋರ್ಟ್ ಬಿಡುಗಡೆಗಾಗಿ ಆದೇಶ ನೀಡಿದೆ. ಅಂದಹಾಗೆ ತಿಮ್ಮ ಈಗ ಹಿಂಡಲಗಾ ಜೈಲಿನಲ್ಲಿ ಇದ್ದಾನೆ.

English summary
Dandupalya gang member Thimma will be releasing on Karnataka high court order. Currently he is at Hindalaga jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X