ರಾಜ್ ಪ್ರತಿಮೆಗೆ ಬೆಂಕಿ: 5 ಆಟೋ ಚಾಲಕರ ಬಂಧನ
ಬೆಂಗಳೂರು, ನ. 15: ಇಬ್ಬರು ಚಿತ್ರ ನಟರ ಅಭಿಮಾನಿಗಳು ಪರಸ್ಪರ ಹಲ್ಲೆ ನಡೆಸುವುದು, ಗಲಭೆ ಸೃಷ್ಟಿಸುವುದು ಸಾಮಾನ್ಯವಾಗಿ ಆಂಧ್ರಪ್ರದೇಶದಲ್ಲಿ ಕಂಡುಬರುತ್ತಿದ್ದ ಪ್ರಕರಣ. ಆದರೆ, ಈ ರೋಗ ಕನ್ನಡಿಗರಿಗೂ ಹಬ್ಬಿದೆಯೇ?
ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿರುವ ಡಾ. ರಾಜಕುಮಾರ್ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ನೋಡಿದರೆ ಈ ಅನುಮಾನ ಹುಟ್ಟುತ್ತದೆ. [ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ]

ಈ ಸ್ಥಳದಲ್ಲಿ ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್‌ಕುಮಾರ್ ಪ್ರತಿಮೆ ನಿಲ್ಲಿಸಿದ್ದರಿಂದ ಅಮಾಧಾನಗೊಂಡ ಶಂಕರನಾಗ್ ಅಭಿಮಾನಿಗಳು ಬೆಂಕಿ ಹಚ್ಚಿದ್ದಾರೆಂಬ ವದಂತಿ ಸ್ಥಳೀಯರಲ್ಲಿ ಕೇಳಿಬಂದಿತ್ತು. ಈ ಮಾಹಿತಿ ಅನುಸರಿಸಿ ಪೊಲೀಸರು ಶಂಕರನಾಗ್ ಅಭಿಮಾನಿಗಳು ಎನ್ನಲಾದ ಐವರು ಆಟೋ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ತನಿಖೆಯ ನಂತರವೇ ಸತ್ಯ ಹೊರಬರಬೇಕಿದೆ. [ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳೋದೇನು?]
ಒಂದು ವೇಳೆ ಇದೇ ನಿಜವಾಗಿದ್ದರೆ ಸ್ವರ್ಗದಲ್ಲಿರುವ ಈ ಇಬ್ಬರೂ ಮೇರು ನಟರ ಆತ್ಮಗಳು ನೊಂದುಕೊಳ್ಳುವುದರಲ್ಲಿ ಅನುಮಾನವಿಲ್ಲ.












Click it and Unblock the Notifications