ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಗೆಲುವು?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಇಂಡಿಯಾ ಪೂರ್ತಿ ಸದ್ದು ಮಾಡಿ ಸುದ್ದಿಯಾಗಿತ್ತು. ಒಂದು ಕಡೆ ಜಯದೇವ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಮಂಜುನಾಥ್ & ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ನಡುವೆ ನೇರ ಹಣಾಹಣಿ ನಡೆದಿತ್ತು. ಇದೀಗ ಮತ ಎಣಿಕೆ ಶುರುವಾಗಿದ್ದು, ಫಲಿತಾಂಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಗೊತ್ತೆ? ಆ ಬಗ್ಗೆ ತಿಳಿಯಲು ಮುಂದೆ ಓದಿ.
2009ರ ತನಕ 'ಕನಕಪುರ ಲೋಕಸಭಾ ಕ್ಷೇತ್ರ' ಎಂಬ ಹೆಸರು ಹೊಂದಿದ್ದ ಈ ಕ್ಷೇತ್ರವನ್ನು 2009 ಲೋಕಸಭೆ ಚುನಾವಣೆ ಸಮಯದಲ್ಲಿ 'ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ' ಎಂದು ಮರು ನಾಮಕರಣ ಮಾಡಲಾಗಿತ್ತು. ಹೀಗೆ 2009ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿ ಆಯ್ಕೆ ಆಗಿದ್ದರು. ಹೀಗೆ ಆಯ್ಕೆಯಾದ ನಂತರ ಅವರು 2013ರಲ್ಲಿ ಕ್ಷೇತ್ರ ತೊರೆದರು.

2013ರ ಉಪಚುನಾವಣೆ ವೇಳೆ ಡಿ.ಕೆ. ಸುರೇಶ್ ಗೆದ್ದು ಬೀಗಿದರು. ಈ ಮೂಲಕ 2014 & 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಸತತವಾಗಿ 3 ಬಾರಿ ಡಿ.ಕೆ. ಸುರೇಶ್ ಸಂಸದರಾಗಿ ಆಯ್ಕೆ ಆದರು. ಈಗ ಅವರು, ಸತತ 4ನೇ ಬಾರಿಗೆ ಆಯ್ಕೆ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗ ಡಾ.ಮಂಜುನಾಥ್ ಅವರೇ ಗೆಲ್ಲುತ್ತಾರೆ ಎಂಬ ಚರ್ಚೆ ಜೋರಾಗಿದೆ. ಅದು ಹೇಗೆ? ಮುಂದೆ ಓದಿ.
ಮಂಜುನಾಥ್ ಗೆಲುವು ಗ್ಯಾರಂಟಿ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ VS ಬಿಜೆಪಿ ನೇರವಾಗಿ ಹಣಾಹಣಿ ನಡೆಸಿವೆ. ಅತ್ತ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸತತ 4ನೇ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರೆ, ಮತ್ತೊಂದ್ಕಡೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸಿದ್ರು. ಹೀಗಿದ್ದಾಗ ಗೆಲುವಿಗೆ ಹತ್ತಿರ ಇರುವುದು ಡಾ.ಮಂಜುನಾಥ್ ಎಂಬ ಮಾತುಗಳು ಕೇಳಿಬಂದಿವೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ & ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ.
ಇಂಡಿಯಾ ಪೂರ್ತಿ ಬೆಂಗಳೂರು ಸದ್ದು!
ಒಟ್ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ದೇಶದಲ್ಲಿ ಹವಾ ಎಬ್ಬಿಸಿದೆ. ಇಲ್ಲಿ ಗೆದ್ದು ಬೀಗುವುದು, ಕಾಂಗ್ರೆಸ್ & ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ವಿಚಾರ. ಇದೀಗ ಸಂಪೂರ್ಣ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ. ಇದೇ ಕಾರಣಕ್ಕೆ ಡಾ. ಸಿ.ಎನ್. ಮಂಜುನಾಥ್ ಅವರು ಗೆಲ್ಲುತ್ತಾರೆ ಎಂಬ ಮಾತನ್ನ ಈಗ ಅವರ ಫ್ಯಾನ್ಸ್ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಪಕ್ಕಾ ಮಾಹಿತಿ ತಿಳಿಯಲು ಕಾದು ನೋಡಬೇಕಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವು & ಸೋಲಿನ ಲೆಕ್ಕಾಚಾರ ಪಕ್ಕಾ ಆಗಲಿದೆ.












Click it and Unblock the Notifications