Cybercrime: 5 ರೂ. ಡಿಟಿಎಚ್ ಟಾಪ್ ಅಪ್ ಮಾಡಲೋಗಿ 1 ಲಕ್ಷ ಕಳೆದುಕೊಂಡ ವ್ಯಕ್ತಿ
ಬೆಂಗಳೂರು, ಮಾರ್ಚ್ 11: 43 ವರ್ಷದ ವ್ಯಕ್ತಿರೊಬ್ಬರು ತಮ್ಮ ಟಿವಿ ಡಿಟಿಎಚ್ ಪ್ಲಾನ್ ಅನ್ನು ಬದಲಿಸಲು 5 ರೂಪಾಯಿ ಟಾಪ್-ಅಪ್ ರೀಚಾರ್ಜ್ ಮಾಡಿಸಲು ಹೋಗಿ 1 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಟಿವಿ ಡಿಟಿಎಚ್ ಪ್ಲಾನ್ ಅನ್ನು ಬದಲಿಸಲು ಅವರು ಇಂಟರ್ನೆಟ್‌ನಲ್ಲಿ ಸರ್ಚ್ ಮಾಡುವಾಗ ಕಾಣಿಸಿಕೊಂಡ ಗ್ರಾಹಕ ಸೇವೆ ಸಂಖ್ಯೆಗೆ ಕರೆ ಮಾಡಿದಾಗ ಈ ಅವಘಡ ಸಂಭವಿಸಿದೆ. ಪೂರ್ವ ಸಿಇಎನ್ ಅಪರಾಧ ಪೊಲೀಸರಿಗೆ ನೀಡಿದ ದೂರಿನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯು ತಮ್ಮ ಡಿಟಿಎಚ್ ಸೇವಾ ಪೂರೈಕೆದಾರರ ಗ್ರಾಹಕ ಸೇವಾ ಸಂಖ್ಯೆಯನ್ನು ಕಂಡುಹಿಡಿಯಲು ಹಾಗೂ ಯೋಜನೆಯನ್ನು ಬದಲಾಯಿಸಲು ಮತ್ತು ತಮ್ಮ ಟಿವಿ ವೀಕ್ಷಣೆಯಲ್ಲಿ ಕನ್ನಡ ಚಾನೆಲ್‌ಗಳನ್ನು ಸೇರಿಸಲು ಇಂಟರ್ನೆಟ್ ಹುಡುಕಾಟ ನಡೆಸಿದ್ದಾರೆ. ಗೂಗಲ್‌ನಲ್ಲಿ ಗುತ್ತಿದಾರ ವ್ಯಕ್ತಿಯು ದೂರವಾಣಿ ಸಂಖ್ಯೆಯನ್ನು ನೋಡಿದ್ದಾರೆ. ಅಲ್ಲಿ ಕರೆಗೆ ಉತ್ತರಿಸಿದ ವ್ಯಕ್ತಿಯು ತಾನು ಹೇಳಿದ ಡಿಟಿಎಚ್ ಸಂಸ್ಥೆಯವನೆಂದು ಹೇಳಿಕೊಂಡಿದ್ದಾನೆ.

ಬಳಿಕ ಗ್ರಾಹಕ ವ್ಯಕ್ತಿ ಆತನಿಂದ ಮೂರು ವಿಭಿನ್ನ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದನು. ಆದರೆ ಅದೇ ವ್ಯಕ್ತಿ ತಾನು ಡಿಟಿಎಚ್ ಸಿಬ್ಬಂದಿ ಎಂದು ಹೇಳಿಕೊಂಡನು. ಬಳಿಕ ಕರೆ ಮಾಡಿದವರು ವ್ಯಕ್ತಿಗೆ ಯೋಜನೆಯನ್ನು ಬದಲಾಯಿಸಲು 5 ರೂಪಾಯಿ ಟಾಪ್-ಅಪ್ ಪಾವತಿಯನ್ನು ಮಾಡಬೇಕು ಎಂದು ಹೇಳಿದನು.
ಜನವರಿ 16ರಂದು ಬಾಧಿತ ವ್ಯಕ್ತಿಗೆ ಹಣ ಪಾವತಿಯ ಲಿಂಕ್ ಸಿಕ್ಕಿತು. ಹೊಸ ಯೋಜನೆಯನ್ನು ಸಕ್ರಿಯಗೊಳಿಸಲು ಅದೇ ಬಗೆಯಲ್ಲಿ ಹಣವನ್ನು ಪಾವತಿಸಬೇಕೆಂದು ತಿಳಿಸಲಾಯಿತು. ಆದರೆ ಲಿಂಕ್ ಕೆಲಸ ಮಾಡಲಿಲ್ಲ. ಕೆಲವು ನಿಮಿಷಗಳ ನಂತರ ವ್ಯಕ್ತಿ ಮತ್ತೆ ಅವನಿಗೆ ಕರೆ ಮಾಡಿ ವಾಟ್ಸಾಪ್‌ನಲ್ಲಿ ಹೊಸ ಲಿಂಕ್ ಕಳುಹಿಸುವುದಾಗಿ ಹೇಳಿದರು. ಸುಮಾರು 15 ನಿಮಿಷಗಳ ನಂತರ ವಂಚಕನು ವ್ಯಕ್ತಿಗೆ ಹೊಸ ಲಿಂಕ್ ಅನ್ನು ಕಳುಹಿಸಿದನು.

ಲಿಂಕ್ ಕಳುಹಿಸಿದ ನಂತರ ಕರೆ ಮಾಡಿದವರು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಗೊತ್ತುಪಡಿಸಿದ ಜಾಗದಲ್ಲಿ ಅವರ ಯುಪಿಐ ಐಡಿಯನ್ನು ಸೇರಿಸಲು ವ್ಯಕ್ತಿಗೆ ತಿಳಿಸಿದರು. ಆ ವ್ಯಕ್ತಿಯು ಸಹ ವಂಚಕರ ಸೂಚನೆಗಳನ್ನು ಅನುಸರಿಸಿದರು. ಆದರೆ ಖಾತೆಯಿಂದ ಯಾವುದೇ ಹಣವನ್ನು ಕಡಿತಗೊಳಿಸಲಾಗಿಲ್ಲ. ಆದಾಗ್ಯೂ, ನಂತರ ರಾತ್ರಿ ವೇಳೆಯಲ್ಲಿ ಮೊದಲು 1 ರೂಪಾಯಿಯನ್ನು ಕಡಿತಗೊಳಿಸಲಾಯಿತು ಮತ್ತು ನಂತರ ಎರಡು ಬೇರೆ ಬೇರೆ ವಹಿವಾಟುಗಳಲ್ಲಿ 99,000 ರೂಪಾಯಿ ಕಣ್ಮೆರೆಯಾಯಿತು.
ರಿವರ್ಸ್ ಟ್ರಾನ್ಸಾಕ್ಷನ್ ಮೂಲಕ ಹಣ ವಸೂಲಿ ಮಾಡಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಲು ತನ್ನ ಹಣವನ್ನು ಸ್ಥಳಾಂತರಿಸಿದ ಬ್ಯಾಂಕ್‌ನೊಂದಿಗೆ ಮಾತನಾಡುವುದಾಗಿ ಪೊಲೀಸರು ಹೇಳಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿಯು ತಿಳಿಸಿದ್ದಾರೆ.












Click it and Unblock the Notifications