ಬೆಂಗಳೂರಿನ ಈ ಏರಿಯಾದಲ್ಲಿ ಮೇ 9ರಂದು ಕಾವೇರಿ ನೀರು ಬರಲ್ಲ!
ಬೆಂಗಳೂರು, ಮೇ 7: ಬೆಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಜಲ ಮಂಡಳಿ ಪ್ರಕಟಿಸಿದೆ. ಕಾವೇರಿ 3ನೇ ಹಂತದ ಕುಡಿಯುವ ನೀರು ಪೂರೈಕೆಯಾಗುವ ಬಡಾವಣೆಗಳಲ್ಲಿ ಸೋಮವಾರದಂದು ಕಾವೇರಿ ನೀರು ಸರಬರಾಜು ಇರುವುದಿಲ್ಲ.
ಸೋಮವಾರ(ಮೇ 9) ಬೆಳಗ್ಗೆ 3 ಗಂಟೆಯಿಂದ ರಾತ್ರಿ 9 ಗಂಟೆಗಳ ತನಕ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಪೂರೈಕೆಗಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಕಾವೇರಿ 1 ಹಾಗೂ 2ನೇ ಹಂತದ ನೀರು ಸರಬರಾಜು ಯೋಜನೆಗೆ ಪೂರಕವಾಗಿ 3ನೇ ಹಂತದ ಕಾಮಗಾರಿ ಜಾರಿಯಲ್ಲಿದೆ. ಕಾವೇರಿ ಮೂರನೇ ಹಂತದಿಂದ ಸುಮಾರು 300 ಎಂಎಲ್‌ಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ.
3ನೇ ಹಂತದ ಕಾಮಗಾರಿಯ ಪೈಪ್ ಗಳಲ್ಲಿ ಸೋರಿಕೆ ಕಂಡು ಬಂದಿದ್ದು, ನೀರಿನ ಸೋರಿಕೆ ತಡೆಗಟ್ಟಲು ಜಲಮಂಡಳಿ ಕೈಗೆತ್ತಿಕೊಂಡಿದೆ. ಹೀಗಾಗಿ ನಗರದ ಕೆಲ ಪ್ರದೇಶಗಳಲ್ಲಿ ಒಂದು ದಿನದ ಮಟ್ಟಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಯಾವ ಏರಿಯಾಗಳಲ್ಲಿ ಪೂರೈಕೆ ವ್ಯತ್ಯಯ: ಗಾಂಧಿನಗರ, ವಸಂತನಗರ, ಸಂಪಂಗಿರಾಮ ನಗರ, ಕಾಟನ್ ಪೇಟೆ, ಟೌನ್ ಹಾಲ್, ಧರ್ಮರಾಯ ದೇವಸ್ಥಾನ ವಾರ್ಡ್, ಚಿಕ್ಕಪೇಟೆ, ಸೇಂಟ್ ಜಾನ್ ರಸ್ತೆ, ಹೇನ್ಸ್ ರಸ್ತೆ, ಕಾಮರಾಜ ರಸ್ತೆ, ಕಾಕ್ಸ್ ಟೌನ್, ಶಿವಾಜಿ ನಗರ, ಫ್ರೇಜರ್ ಟೌನ್, ಬ್ಯಾಡರಹಳ್ಳಿ, ಲಿಂಗಾರಾಜಪುರ, ಹಡ್ಸನ್ ರಸ್ತೆ, ಡಿ.ಜೆ ಹಳ್ಳಿ, ನಾಗವಾರ, ಬಾಗಲೂರು, ಲಿಂಗರಾಜಪುರ, ಕೆ.ಜಿ ಹಳ್ಳಿ, ಬ್ಯಾಟರಾಯನಪುರ, ಗಿರಿ ನಗರ, ಚಾಮರಾಜಪೇಟೆ, ಶ್ರೀನಗರ, ಬನಶಂಕರಿ, ಯಶವಂತಪುರ, ಮಲ್ಲೇಶ್ವರ, ಶೇಷಾದ್ರಿಪುರ, ಜೆಸಿ ನಗರ, ಸದಾಶಿವನಗರ, ಡಾಲರ್ಸ್ ಕಲೋನಿ, ಆರ್ ಟಿ ನಗರ, ಶಾಂತಲಾ ನಗರ, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ 2ನೇ ಹಂತ, ಲಕ್ಷ್ಮಿಪುರ, ಜೀವನ್ ಬೀಮಾ ನಗರ, ಹಲಸೂರು, ಜೋಗುಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ಹೇಳಿದೆ.












Click it and Unblock the Notifications