CV Raman Nagar Election: ಎಎಪಿ ಕಾಯಕರ್ತರ ಮೇಲೆ ಬಿಜೆಪಿ ಶಾಸಕರ ಬೆಂಬಲಿಗರಿಂದ ಹಲ್ಲೆ ಆರೋಪ, ದೂರು ದಾಖಲು

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದೆ. ಟಿಕೆಟ್ ಹಂಚಿಕೆ, ಪಕ್ಷಾಂತರ, ನಾಯಕ ಅಸಮಾಧಾನದ ಬೇಗುದಿ ಸಹಜ ಎಂಬಂತಾಗಿದೆ. ಆದರೆ ಗುರುವಾರ ಬಿಜೆಪಿ ಮುಖಂಡರೊಬ್ಬರ ಬೆಂಬಲಿಗರು ಆಮ್‌ ಆದ್ಮಿ ಪಕ್ಷ (ಎಎಪಿ) ಕಾರ್ಯಕರ್ತರ ಮೇಲೆ ಹಲ್ಲೇ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಬೆಂಗಳೂರು ಸೇರಿ ರಾಜ್ಯದ್ಯಂತ ಚುನಾವಣೆ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಈ ವೇಳೆ ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.

CV Raman Nagar Election: BJP MLA S Raghu Supporters assaulted on AAP Workers, Complaint filed

ಹಲ್ಲೆ ಮಾಡಿದವರು ಬೇರೆ ಯಾರು ಅಲ್ಲ. ಬಿಜೆಪಿ ಪಕ್ಷದ ಶಾಸಕ ರಘು ಅವರ ಬೆಂಬಲಿಗರಿಂದ ಹಲ್ಲೆ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಬಿಜೆಪಿಯಿಂದ ಏನೇನು? ಮಾಡಿದ್ದೀರಿ. ನಮಗೆ ನಮ್ಮ ಶಾಸಕರೇ ಸಾಕು. ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಪ್ರಚಾರದ ವೇಳೆ ಬಂದು ಅಡ್ಡಿ ಪಡಿಸಿದ್ದಾರೆ. ಪ್ರಚಾರಕ್ಕೆ ಅವಕಾಶ ನೀಡದೇ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಿಜೆಪಿ ಪಕ್ಷದ ಶಾಸಕ ರಘು ಅವರ ಬೆಂಬಲಿಗರಿಂದ ಹಲ್ಲೆ ಖಂಡಿಸಿರುವ ಎಎಪಿ ನಾಯಕರು ಮತ್ತು ಸಿವಿ ರಾಮನ್ ನಗರದ ಅಭ್ಯರ್ಥಿ ಎಲ್ಲರೂ ಸೇರಿ ಬೈಯಪ್ಪನಹಳ್ಳಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರಿಗೆ ದೂರು ಸಲ್ಲಿಸಿದ್ದಾರೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹಲ್ಲೇ ಕುರಿತಂತೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಸರ್ ಸಿ.ವಿ ರಾಮನ್ ನಗರ ಅಭ್ಯರ್ಥಿ ಮೋಹನ್ ದಾಸರಿ ಅವರು, ಸಿ.ವಿ ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದೇವೆ. ಈ ಸಂದರ್ಭಲ್ಲಿ ಮನೋಜ್ ಕುಮಾರ್ ಹಾಗೂ ಶಶಿಕುಮಾರ್ ಎನ್ನುವ ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

CV Raman Nagar Election: BJP MLA S Raghu Supporters assaulted on AAP Workers, Complaint filed

ಅವಾಚ್ಯ ಶಬ್ದಗಳಿಂದ ನಿಂದನೆ?

ಮೋಹನ್ ಮತ್ತು ನಾಗರಾಜ್ ಸಂಗಡಿಗರು ಬಿಜೆಪಿ ಪಕ್ಷಕ್ಕೆ ಸೇರಿದರಾಗಿದ್ದು. ಪ್ರಚಾರ ಆರಂಭಕ್ಕೂ ಮೊದಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಹಾಗೆ ನಮ್ಮ ಕಾರ್ಯಕರ್ತರು ವಿಡಿಯೋ ತೆಗೆಯಲು ಹೋದಾಗ ಮೊಬೈಲ್‌ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಹಾಲಿ ಶಾಸಕ ಎಸ್.ರಘು ಅವರಿಗೆ ಟಿಕೆಟ್ ಲಭಿಸಿದೆ. ಅವರು ಈ ಭಾಗದಲ್ಲಿ ಪ್ರಬಲ ನಾಯಕರಾಗಿದ್ದಾರೆ. ಅಲ್ಲದೇ ಅವರು ಕಳೆದ 2018ರ ಚುನವಣೆಯಲ್ಲಿ ಬಹುಮತ ಪಡೆದು ಗೆದ್ದಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸಂಪತ್ ರಾಜ್ ಅವರ ವಿರುದ್ಧ 85,887ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು.

ಈ ಸಲವು ಅವರೇ ಕಣದಲ್ಲಿದ್ದಾರೆ. ಗೆಲ್ಲವು ವಿಶ್ವಾಸ ಹೊಂದಿದ್ದಾರೆ. ಆ ಕ್ಷೇತ್ರದಲ್ಲಿ ಎಎಪಿಯಿಂದಲೂ ಸ್ಪರ್ಧೆ, ಪ್ರಚಾರ ಜೋರಾಗಿದೆ. ಹೀಗೆ ಪ್ರಚಾರ ನಡೆಯುವಾಗಿ ಬಿಜೆಪಿ ಶಾಸಕರ ಎಸ್. ರಘು ಅವರ ಬೆಂಬಲಿಗರಿಂದ ಹಲ್ಲೆ ಆಗಿದೆ ಎಂದು ಎಎಪಿ ಕಾರ್ಯಕರ್ತರು ಆರೊಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+