ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶ್ ಯಂತ್ರ: ಕೆಲಸ ಹೇಗೆ?

By Nayana
|
Google Oneindia Kannada News

ಬೆಂಗಳೂರು, ಜೂನ್ 6: ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದೆ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಿಶೇಷ ಯೋಜನೆಯೊಂದನ್ನು ರೂಪಿಸಿದೆ.

ರೈಲ್ವೆ ನಿಲ್ದಾಣಗಳಲ್ಲಿ ಬಾಟಲ್‌ ಕ್ರಷಿಂಗ್ ಮಷಿನ್ ಅಳವಡಿಕೆಗೆ ಇಲಾಖೆ ಚಾಲನೆ ನೀಡಿದೆ. ಪೆಟಿಎಂ ವಾಲೆಟ್ ಹೊಂದಿರುವವರು ಈ ಯಂತ್ರಕ್ಕೆ ಬಾಟಲ್ ಹಾಕಿದರೆ 5 ರೂ ಕ್ಯಾಶ್‌ ಬ್ಯಾಕ್ ಪಡೆಯಬಹುದು. ವಿಶ್ವ ಪರಿಸರ ದಿನದಂದು ಈ ಯೋಜನೆಗೆ ಚಾಲನೆ ದೊರೆತಿದೆ.

ರೈಲಿನಲ್ಲಿ ಹೆಚ್ಚು ಲಗೇಜ್‌ಗಳನ್ನು ತರುವಂತಿಲ್ಲ: ಮಿತಿ ಎಷ್ಟು? ರೈಲಿನಲ್ಲಿ ಹೆಚ್ಚು ಲಗೇಜ್‌ಗಳನ್ನು ತರುವಂತಿಲ್ಲ: ಮಿತಿ ಎಷ್ಟು?

ಬಾಟಲ್‌ಗಳನ್ನು ಹಾಕಿ ತಮ್ಮ ಮೊಬೈಲ್ ಸಂಖ್ಯೆಯನ್ನು ಯಂತ್ರದಲ್ಲಿ ನಮೂದಿಸಿದರೆ 5 ರೂ. ವಾಲೆಟ್ಗೆ ಬರಲಿದೆ. ಯಂತ್ರದ ಕುರಿತು ಬೆಂಗಲೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್. ಸಕ್ಸೇನಾ ಮಾತನಾಡಿ, ಒಂದು ಯಂತ್ರಕ್ಕೆ 4.50ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಪರ್ಲ್ ಆಗ್ರೋ ಕಂಪನಿ ಸಿಎಸ್‌ಆರ್‌ ಯೋಜನೆಯಡಿ ಉಚಿತವಾಗಿ 4 ಯಂತ್ರಗಳನ್ನು ನೀಡಿದೆ ಎಂದರು.

Crushing water bottles will benefir Rs.5 for you!

ವಿದ್ಯುತ್ ಚಾಲಿತ ಯಂತ್ರವು ದಿನದ 24 ತಾಸು ಕಾರ್ಯ ನಿರ್ವಹಿಸಲಿದೆ. ಪ್ರಯಾಣಿಕರು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಇದರೊಳಗೆ ಹಾಕಬಹುದು. ಬಾಟಲಿ ಹಾಕಿದ ಕೆಲವೇ ಸೆಕೆಂಡುಗಳಲ್ಲಿ ಪುಡಿಯಾಗುತ್ತದೆ. ದಿನಕ್ಕೆ 5 ಸಾವಿರ ಬಾಟಲಿಗಳನ್ನು ಪುಡಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ಈ ಯಂತ್ರದಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಪ್ಲಾಸ್ಟಿಕ್ ಬಾಟಲಿಗಳಿಗೆ ಮುಕ್ತಿ ಸಿಗಲಿದೆ. ಇದರ ಜತೆಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸದಂತೆ ಜಾಗೃತಿಯನ್ನೂ ಕೂಡ ನೀಡಲಾಗುತ್ತಿದೆ.

English summary
South western railway has installed plastic water bottels crushing machine in various railway stations to curb plastic waste. To promote this initiation, passengers will get Rs.5 cash back through paytm for crushing a bottle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X