ಸುನಿಲ್ ಹತ್ಯೆಗೆ ಸುಪಾರಿ, ಬೆಳೆಗೆರೆ ವಿರುದ್ಧ ಎಫ್ಐಆರ್ : ಎಸಿಪಿ ಸತೀಶ್
Recommended Video

ಬೆಂಗಳೂರು, ಡಿಸೆಂಬರ್ 08: ಪತ್ರಕರ್ತ ರವಿ ಬೆಳಗೆರೆ ಅವರು ಹಾಯ್ ಬೆಂಗಳೂರು ಪತ್ರಿಕೆಯ ಮಾಜಿ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಬಗ್ಗೆ ವಿವರಣೆ ನೀಡಲು ಬೆಂಗಳೂರು ಕ್ರೈಂ ವಿಭಾಗದ ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದರು.
ಆಗಸ್ಟ್ 28ರಂದು ಸುನಿಲ್ ಹೆಗ್ಗರವಳ್ಳಿಯ ಹತ್ಯೆಯಾಗಬೇಕಿತ್ತು. ಆದರೆ, ಸುಪಾರಿ ಪಡೆದ ಹಂತಕ ತಾಂತ್ರಿಕ ಕಾರಣಗಳಿಗಾಗಿ ತನ್ನ ಯೋಜನೆಯನ್ನು ಹಿಂಪಡೆಯುತ್ತಾನೆ. ಪತ್ರಕರ್ತೆ ಗೌರಿ ಹತ್ಯೆಗೂ ಈ ಕೇಸಿಗೂ ಸಂಬಂಧವಿಲ್ಲ.
ಆದರೆ, ಗೌರಿ ಹತ್ಯೆ ಪ್ರಕರಣಕ್ಕೆ ಬಳಸಿದ್ದ ಆಯುಧ(ಗನ್)ದ ಮೂಲ ಹುಡುಕಿಕೊಂಡು ಹೋದಾಗ ಈ ಕೇಸ್ ಬಗ್ಗೆ ತಿಳಿದು ಬಂದಿದೆ ಎಂದು ಆಯುಕ್ತ ಸತೀಶ್ ಕುಮಾರ್ ಅವರು ಹೇಳಿದರು. ಸುದ್ದಿಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
* ವೆಪನ್ ಡೀಲರ್ ಆಗಿರುವ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಹೊಸೂರಿನ ಲಾಡ್ಜಿನಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
* ವಿಚಾರಣೆ ವೇಳೆ ಮತ್ತೊಬ್ಬ ವೆಪನ್ ಡೀಲರ್ ವಿಜಯಪುರದ ಚಡಚಣದ ಶಶಿಧರ ಮುಂಡೆವಾಡಗಿ ಹೆಸರು ತಿಳಿಸಿದ.

* ಶಶಿಧರ ಮುಂಡೆವಾಡಗಿ ಎಂಬಾತನನ್ನು ಡಿಸೆಂಬರ್ 07ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ರವಿ ಬೆಳಗೆರೆ ಅವರು ಸುಪಾರಿ ನೀಡಿರುವ ಬಗ್ಗೆ ಮಾಹಿತಿ ನೀಡಿದ. ಈತನ ಬಳಿ 02 ಜೀವಂತ ಗುಂಡುಗಳು ಪತ್ತೆಯಾಗಿತ್ತು.
* ಶಶಿಧರ ನೀಡಿದ ಹೇಳಿಕೆಯಂತೆ: ಆಗಸ್ಟ್ 28, 2017ರಂದು ಶಶಿಧರ ಹಾಗೂ ಆತನ ಸಹಚರ ವಿಜು ಬಡಿಗೇರ್ ಅವರು ಹಾಯ್ ಬೆಂಗಳೂರು ಕಚೇರಿಗೆ ಹೋಗಿರುತ್ತಾರೆ.
* ಈ ಸಂದರ್ಭದಲ್ಲಿ ಒಂದು ಗನ್, 04 ಜೀವಂತ ಗುಂಡುಗಳು, 01 ಚಾಕು ನೀಡಿ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲುವಂತೆ ರವಿ ಬೆಳಗೆರೆ ಸೂಚಿಸುತ್ತಾರೆ. ಆತನ ಮೇಲೆ ವೈಯಕ್ತಿಕ ದ್ವೇಷವಿದೆ ಎಂದು ರವಿ ಹೇಳಿರುತ್ತಾರೆ.
* ಸುಪಾರಿ ಮೊತ್ತದ ಮುಂಗಡವಾಗಿ 15,000 ರು ನೀಡಿರುತ್ತಾರೆ. ಆದರೆ, ಸುನಿಲ್ ಹತ್ಯೆ ಮಾಡುವಲ್ಲಿ ವಿಫಲರಾದ ಶಾರ್ಪ್ ಶೂಟರ್ಸ್ ಗಳು ಆಯುಧಗಳನ್ನು ವಾಪಸ್ ಮಾಡಿ ಮುಂದಿನ ತಿಂಗಳು ಮತ್ತೆ ಪ್ರಯತ್ನಿಸುವುದಾಗಿ ಹೇಳುತ್ತಾರೆ.
* ಸುನೀಲ್ ಹೆಗ್ಗರವಳ್ಳಿ ಮರ್ಡರ್ ಬಗ್ಗೆ ಮಾಹಿತಿ ಸಿಕ್ಕಿದಾಗ ಎಫ್ ಐಆರ್ ಹಾಕಿದ್ದೇವೆ. ರವಿ ಬೆಳಗೆರೆ ಮನೆಯಿಂದ ರಿವಾಲ್ವರ್, ಡಬ್ಬಲ್ ಬ್ಯಾರಲ್ ಗನ್ ಸಿಕ್ಕಿದೆ.
* ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ರವಿ ಬೆಳಗೆರೆ ಅವರ ಮನೆ, ಕಚೇರಿ, ಕಾರು ತಪಾಸಣೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ಸಂಜೆ ವೇಳೆಗೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications