4 ತಿಂಗಳ ಮಗುವಿನ ಅಳುವಿನಿಂದ ಮನೆಯಲ್ಲಿ ನಡೆದ 2 ಕೊಲೆ ಬಯಲಾಯ್ತು
ಬೆಂಗಳೂರು, ಜನವರಿ 11: ನಾಲ್ಕು ತಿಂಗಳ ಮಗು ಅತ್ತಿದ್ದರಿಂದ ಮನೆಯಲ್ಲಿ ಎರಡು ಕೊಲೆ ನಡೆದಿರುವ ರಹಸ್ಯ ಬಯಲಾಗಿದೆ.
ಈ ಘಟನೆ ಬೆಂಗಳೂರು ಗ್ರಾಮೀಣ ಪ್ರದೇಶವಾದ ಬೈಚಾಪುರದಲ್ಲಿ ನಡೆದಿದೆ. ಮೃತರನ್ನು ರಮಾದೇವಿ ಹಾಗೂ ಅವರ ತಾಯಿ ಲಕ್ಷ್ಮೀದೇವಿ ಎಂದು ಗುರುತಿಸಲಾಗಿದೆ.4 ತಿಂಗಳ ಮಗು ಅಳುತ್ತಿರುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚೆತ್ತು ಬಂದು ನೋಡದಾಗ ಘಟನೆ ಬೆಳಕಿಗೆ ಬಂದಿದೆ.
ಮಗು ಅಳು ಕೇಳಿಸಿದ ಕೂಡಲೇ ಸ್ಥಳೀಯರು ರಮಾದೇವಿ ಮನೆಗೆ ಹೋಗಿದ್ದರು. ಆ ವೇಳೆ ಅಮ್ಮ ಮತ್ತು ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ತನಿಖೆ ಮುಂದುವರೆಸಿದಾಗ ರಮಾದೇವಿ ಲಿವ್ ಇನ್ ಪಾರ್ಟ್ನರ್ ಮಲೇ ಕುಮಾರ್ ಪರಿದಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಪರಿದಿ ಮೂಲತಃ ಒಡಿಶಾದವನು, 2018ರಲ್ಲಿ ಬೆಂಗಳೂರಿಗೆ ಬಂದಿದ್ದನು, ಈತ ಅಪಾರ್ಟ್‌ಮೆಂಟ್ ಸಂಕೀರ್ಣದ ಕೊಳಾಯಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ರಮಾದೇವಿ ಚಿಕ್ಕಬಳ್ಳಾಪುರದವಳಾಗಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.ಹಾಗೆಯೇ ಇಬ್ಬರ ನಡುವೆ ಪ್ರೀತಿಯಾಗಿತ್ತು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು, ನಾಲ್ಕು ತಿಂಗಳ ಹಿಂದೆ ಇವರಿಗೆ ಗಂಡು ಮಗು ಜನಿಸಿತ್ತು.
ಕೆಲ ದಿನಗಳ ಬಳಿಕ ರಮಾದೇವಿ ತಾಯಿ ಹಾಗೂ ಅವರ ಸಹೋದರರು ಅವರ ಜತೆಯೇ ಇರುತ್ತಿದ್ದರು, ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರು.ಇದಕ್ಕೆ ಇಬ್ಬರನ್ನು ಕೊಲೆ ಮಾಡಿರಬಹುದು ಎನ್ನಲಾಗಿದೆ.
ರಮಾದೇವಿ ಸಹೋದರರು ಕೆಲಕ್ಕೆಂದು ಹೊರಗೆ ಹೋಗಿದ್ದರು, ಆ ಸಂದರ್ಭದಲ್ಲಿ ಇದೇ ಸಮಯದಲ್ಲಿ ಹತ್ಯೆ ಮಾಡಿದ್ದಾನೆ.












Click it and Unblock the Notifications