ಬೆಂಗಳೂರಿನಲ್ಲಿ ಆತಂಕ, ಕಂಟೇನ್ಮೆಂಟ್ ಪ್ರದೇಶಗಳು ಏರಿಕೆ
ಬೆಂಗಳೂರು, ಮೇ 31: ಬೆಂಗಳೂರಿನಲ್ಲಿ ಲಾಕ್ಡೌನ್ 4.0 ಮುಗಿದು ಲಾಕ್ಡೌನ್ 5.0 ಜಾರಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ ಕೂಡಾ ಏರುತ್ತಿರುವುದು ಆತಂಕಕಾರಿಯಾಗಿದೆ.
ಶನಿವಾರದಂದು ಬೆಂಗಳೂರಿನಲ್ಲಿ 33 ಹೊಸ ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, ಎಲ್ಲವೂ ಕಂಟೇನ್ಮೆಂಟ್ ಪ್ರದೇಶಕ್ಕೆ ಹೊಂದಿಕೊಂಡಂತೆ ಬಂದ್ರಿರುವ ಪ್ರಕರಣಗಳಾಗಿವೆ. ಈಗ ಭಾನುವಾರದ ಕರ್ಫ್ಯೂ ಕೂಡಾ ತೆಗೆದು ಹಾಕಲಾಗಿದೆ.
ಮೇ 31ರಂದು 4ನೇ ಹಂತದ ಲಾಕ್ ಡೌನ್ ಮುಗಿಯಲಿದೆ. 5ನೇ ಹಂತದ ಲಾಕ್ ಡೌನ್‌ನಲ್ಲಿ ಹಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಜೂನ್ 1ರಿಂದ 30ರ ತನಕ ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲುಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವ ಪ್ರದೇಶಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ಇಡೀ ದೇಶದಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ಜೋನ್ ಸಂಖ್ಯೆ 28ಕ್ಕೇರಿದೆ. ಕಂಟೇನ್ಮೆಂಟ್ ಜೋನ್ ನಲ್ಲಿ ಈ ಹಿಂದಿನ ಎಲ್ಲಾ ನಿಯಮಗಳು ಜಾರಿಯಲ್ಲಿರಲಿದ್ದು ಯಾವುದೇ ವಿನಾಯತಿ ಸಿಕ್ಕಿಲ್ಲ. ಇದಲ್ಲದೆ, ಕಂಟೇನ್ಮೆಂಟ್ ಜೋನ್ ಸುತ್ತಮುತ್ತ ಪ್ರದೇಶದಲ್ಲಿ ಜನಸಂದಣಿಯನ್ನು ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಹೇಳಿದ್ದಾರೆ.
ಕಂಟೇನ್ಮೆಂಟ್ ಪ್ರದೇಶಗಳು: ಪಾದರಾಯನಪುರ, ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಶಿವಾಜಿನಗರ, ಬಿಟಿಎಂ ಲೇಔಟ್, ಮಲ್ಲೇಶ್ವರ, ಎಚ್ ಬಿ ಆರ್ ಲೇಔಟ್, ಹೇರೋಹಳ್ಳಿ, ಮಂಗಮ್ಮನಪಾಳ್ಯ, ಹೂಡಿ, ನಾಗವಾರ, ಜ್ಞಾನಭಾರತಿ ನಗರ, ಕೆ. ಆರ್ ಮಾರುಕಟ್ಟೆ, ಎಸ್ ಕೆ ಗಾರ್ಡನ್(ಡಿ.ಜೆ ಹಳ್ಳಿ), ಲಕ್ಕಸಂದ್ರ, ಥಣಿಸಂದ್ರ, ಅಗರ, ಪುಟ್ಟೇನಹಳ್ಳಿ, ಮಾರಪ್ಪನಪಾಳ್ಯ, ಹಗದೂರು, ವರ್ತೂರು, ರಾಮಮೂರ್ತಿ ನಗರ, ಅಗ್ರಹಾರ ದಾಸರಹಳ್ಳಿ, ಹೊನ್ನಾರುಪೇಟೆ, ಮಾರತ್ ಹಳ್ಳಿ,











Click it and Unblock the Notifications