ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶೀಘ್ರ ಸ್ಕ್ರೀನಿಂಗ್‌

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 22: ಚೀನಾ ಮತ್ತು ಜಪಾನ್‌ನಂತಹ ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದರಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಕರ್ನಾಟಕದ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೋವಿಡ್‌ ಹೆಚ್ಚಳ ಹಿನ್ನೆಲೆಯಲ್ಲಿ ನಾವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಐಎ ಅಂತಾರಾಷ್ಟ್ರೀಯ ಪ್ರಯಾಣಿಕರ ಹೆಚ್ಚಿನ ಪ್ರಯಾಣಿಕರ ಆಗಮನ ನಿರ್ಗಮನ ಇರುತ್ತದೆ. ನಾವು ಅಲ್ಲಿ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸುತ್ತೇವೆ. ಆದರೆ, ಸ್ಕ್ರೀನಿಂಗ್ ಯಾವಾಗ ಆರಂಭವಾಗಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಪಿಟಿಐ ಕಾರ್ಯಕರ್ತರಿಗೆ ಹಿಂಸೆ: ಪಾಕಿಸ್ತಾನ ಸರ್ಕಾರಕ್ಕೆ ಇಮ್ರಾನ್ ಖಾನ್ ಎಚ್ಚರಿಕೆ ಪಿಟಿಐ ಕಾರ್ಯಕರ್ತರಿಗೆ ಹಿಂಸೆ: ಪಾಕಿಸ್ತಾನ ಸರ್ಕಾರಕ್ಕೆ ಇಮ್ರಾನ್ ಖಾನ್ ಎಚ್ಚರಿಕೆ

ಕೋವಿಡ್ ಪ್ರಕರಣಗಳ ಹಠಾತ್ ಏರಿಕೆ ಮಧ್ಯೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹೆಚ್ಚಿದ ಜನಸಂದಣಿ ಮತ್ತು ರಜೆ ಅವಧಿ ಪ್ರಯಾಣ ವ್ಯವಸ್ಥೆಗೆ ಅಣಿ ಆಗುತ್ತಿದೆ. ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಗಗನಕ್ಕೇರಿವೆ. ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸಲು ತಮ್ಮ ಇಲಾಖೆಯು ಶೀಘ್ರದಲ್ಲೇ ಸಾರ್ವಜನಿಕರಿಗೆ ಹೊಸ ಸಲಹೆಯನ್ನು ನೀಡಲಿದೆ. ರಾಜ್ಯದ ಜನರು ಮುನ್ನೆಚ್ಚರಿಕೆಯಾಗಿ ಬೂಸ್ಟರ್ ಡೋಸ್ ಅನ್ನು ತೆಗೆದುಕೊಳ್ಳಬೇಕು. ಇದುವರೆಗೆ ರಾಜ್ಯದ ಶೇಕಡಾ 20 ರಷ್ಟು ಮಾತ್ರ ಅದನ್ನು ಪಡೆದುಕೊಂಡಿದೆ ಎಂದು ಹೇಳಿದರು.

Covid: Rapid screening at bengaluru kempegowda international airport

ಚೀನಾ ಮತ್ತು ಜಪಾನ್ ಸೇರಿದಂತೆ ಕೆಲವು ದೇಶಗಳು ಪ್ರಕರಣಗಳಲ್ಲಿ ಹೆಚ್ಚಾಗುತ್ತಿವೆ. ಚೀನಾದಲ್ಲಿ ಜನರು ಹೆಚ್ಚು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ, ಬೂಸ್ಟರ್ (ಮುನ್ನೆಚ್ಚರಿಕೆ) ಡೋಸ್ ವ್ಯಾಪ್ತಿಗೆ ನಾವು ಗಮನಹರಿಸಬೇಕು. ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಅವರು ಹೇಳಿದರು.

ಇನ್ನೂ ಬೂಸ್ಟರ್ (ಮುನ್ನೆಚ್ಚರಿಕೆ) ಚುಚ್ಚುಮದ್ದು ಪಡೆಯದವರೆಲ್ಲರೂ ಸ್ವಯಂಪ್ರೇರಣೆಯಿಂದ ಮುಂದೆ ಬಂದು ಅದನ್ನು ಪಡೆದುಕೊಳ್ಳಬೇಕು. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಿರುವುದರಿಂದ, ಅವರು ಸಹ ತೆಗೆದುಕೊಳ್ಳಬೇಕು. ಲಸಿಕೆಯನ್ನು ತೆಗೆದುಕೊಳ್ಳುವ ಮೂಲಕ ನಾವು ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಸಚಿವರು ಹೇಳಿದರು.

Covid: Rapid screening at bengaluru kempegowda international airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಧನಾತ್ಮಕ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲಾಗುವುದು ಮತ್ತು ವೈರಸ್‌ನ ಹೊಸ ತಳಿಗಳನ್ನು ಪತ್ತೆಹಚ್ಚಲು ಮಾದರಿಗಳನ್ನು INSACOG (ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ಗೆ ಕಳುಹಿಸಲಾಗುವುದು. ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

English summary
Karnataka's health department has decided to monitor international air passengers arriving at Bangalore's Kempegowda International Airport (KIA) due to the high number of Covid cases in other countries like China and Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X