ಕ್ವಾರಂಟೈನ್‌ ಕೇಂದ್ರವಾಗಿದ್ದ ರೈಲು ಬೋಗಿಯಲ್ಲಿ ತರಕಾರಿ ಸಾಗಣೆ!

ಬೆಂಗಳೂರು, ಡಿಸೆಂಬರ್ 07: ಕೋವಿಡ್ ಸಂದರ್ಭದಲ್ಲಿ ರೈಲು ಬೋಗಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗಿತ್ತು. ಆದರೆ, ಇವುಗಳನ್ನು ಬಳಕೆ ಮಾಡಲಿಲ್ಲ. ಈಗ ಕೆಲವು ಬದಲಾವಣೆಗಳ ಜೊತೆ ಈ ಬೋಗಿಗಳು ಹಳಿಯ ಮೇಲೆ ಬಂದಿವೆ.

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ 320 ಬೋಗಿಗಳನ್ನು ಕ್ವಾರಂಟೈನ್‌ಗಾಗಿ ಸಿದ್ಧಪಡಿಸಲಾಗಿತ್ತು. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗಲೂ ಇವುಗಳನ್ನು ಬಳಕೆ ಮಾಡುವ ಪರಿಸ್ಥಿತಿ ಎದುರಾಗಲಿಲ್ಲ.

ಈಗ ಬೋಗಿಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಅವುಗಳಲ್ಲಿ ತರಕಾರಿಗಳನ್ನು ಸಾಗಾಟ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಸಾಗಣೆಗೆ ಈ ಬೋಗಿಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಚಿಕ್ಕಪುಟ್ಟ ಬದಲಾವಣೆ ಮಾಡಲಾಗಿದೆ.

Covid Care Centre Coaches Now Using To Transport Vegetables

ಬೆಂಗಳೂರು ರೈಲ್ವೆ ವಿಭಾಗದ ಮ್ಯಾನೇಜರ್ ಅಶೋಕ್ ಕುಮಾರ್ ವರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ. "ಕೆಲವು ಚಿಕ್ಕ ಬದಲಾವಣೆಗಳನ್ನು ಮಾತ್ರ ಬೋಗಿಯಲ್ಲಿ ಮಾಡಲಾಗಿದ್ದು, ಅವುಗಳನ್ನು ಬಳಕೆ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

ಪ್ರಯಾಣಿಕರ ಪ್ರತಿಕ್ರಿಯೆ; "ಡಿಸೆಂಬರ್ 7 ರಿಂದ 17ರ ತನಕ 6 ಜೋಡಿ ರೈಲುಗಳನ್ನು ಓಡಿಸಲಾಗುತ್ತಿದೆ. 10 ದಿನಗಳ ಕಾಲ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲುಗಳನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಅಶೋಕ್ ಕುಮಾರ್ ವರ್ಮಾ ತಿಳಿಸಿದರು.

6 ಜೋಡಿ ರೈಲುಗಳನ್ನು ಹೊರತಪಡಿಸಿ ಬೇರೆ ಯಾವುದೇ ರೈಲುಗಳನ್ನು ಓಡಿಸುವ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ಟಿಕೆಟ್ ಕಾಯ್ದಿರಿಸದ ಈ ರೈಲುಗಳಲ್ಲಿನ ಪ್ರಯಾಣಿಕರ ಸಂಚಾರ ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+