ಕೋವಿಡ್ ಸಕ್ರಿಯ ಪ್ರಕರಣ; ಬೆಂಗಳೂರಿಗೆ ಮತ್ತೆ ಮೊದಲ ಸ್ಥಾನ!

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ನಗರಲ್ಲಿ ಸತತವಾಗಿ ಮೂರು ದಿನಗಳ ಕಾಲ 5 ಸಾವಿರ ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಶನಿವಾರ ನಗರದಲ್ಲಿ4,563 ಹೊಸ ಪ್ರಕರಣ ದಾಖಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ನಗರ ಬೆಂಗಳೂರು. ನಗರದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 2,76,934. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 64,911.

ದೇಶದ ವಿವಿಧ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಯಾವ ರಾಜ್ಯದ ಪ್ರಮುಖ ನಗರದಲ್ಲಿ ಇಷ್ಟು ಸಕ್ರಿಯ ಪ್ರಕರಣಗಳಿಲ್ಲ.

COVID Active Cases Again Bengaluru On Top

ಭಾರತದಲ್ಲಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಆದರೆ, ಮುಂಬೈನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 25,352, ಪುಣೆಯಲ್ಲಿ ಸಕ್ರಿಯ ಪ್ರಕರಣಗಳು 46,583 ಆಗಿದೆ. ಯಾವುದೇ ನಗರವೂ ಸಕ್ರಿಯ ಪ್ರಕರಣಗಳಲ್ಲಿ 50 ಸಾವಿರದ ಗಡಿಯನ್ನು ದಾಟಿಲ್ಲ.

ಚೆನ್ನೈನಲ್ಲಿ 13,580, ಪೂರ್ವ ಗೋದಾವರಿ 8071, ಪಶ್ಚಿಮ ಗೋದಾವರಿಯಲ್ಲಿ 5,644, ಲಕ್ನೋದಲ್ಲಿ 5,116 ಸಕ್ರಿಯ ಪ್ರಕರಣಗಳಿವೆ. ಈ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಟಾಪ್‌ನಲ್ಲಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 6,513, ದೆಹಲಿಯಲ್ಲಿ 22,007, ಕೇರಳ ರಾಜ್ಯದ ತಿರುವನಂತಪುರಂನಲ್ಲಿ 12,022 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಷ್ಟು ಸಕ್ರಿಯ ಪ್ರಕರಣಗಳು ದೇಶದ ಯಾವುದೇ ಪ್ರಮುಖ ನಗರಗಳಲ್ಲಿ ಇಲ್ಲ.

ಬೆಂಗಳೂರು ನಗರದಲ್ಲಿ ಅಕ್ಟೋಬರ್ 8ರಂದು 5121, ಅಕ್ಟೋಬರ್ 9ರಂದು 5009, ಅಕ್ಟೋಬರ್ 7ರಂದು 5000, ಅಕ್ಟೋಬರ್ 6ರಂದು 5012 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+