• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನ್‌ಲಾಕ್ ಸುಳಿವು ಬೆನ್ನಲ್ಲೇ ಬೆಂಗಳೂರು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

|
Google Oneindia Kannada News

ಬೆಂಗಳೂರು, ಜೂ. 10: ಕೋವಿಡ್ - 19 ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಲಾಕ್ ಡೌನ್ ಮುಗಿಯುವ ಮುನ್ನವೇ ಬಂದ ಮಾಡಿದ್ದ ರಸ್ತೆಗಳನ್ನು ಪೊಲೀಸರು ಸಂಚಾರಕ್ಕೆ ಮುಕ್ತಗೊಳಿಸುತ್ತಿದ್ದಾರೆ. ಅನ್ ಲಾಕ್ ಸುಳಿವಿನ ಬೆನ್ನಲ್ಲೇ ಬೆಂಗಳೂರಿನ ಗೊರಗುಂಟೆ ಪಾಳ್ಯ, ಜಾಲಹಳ್ಳಿ ಸಮೀಪ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಮೇಲ್ಸೇತುವೆ ಬಂದ್ ಮಾಡಿದ್ದ ಕಾರಣ ಕಿಲೋ ಮೀಟರ್ ಗಟ್ಟಲೇ ವಾಹನ ದಟ್ಟಣೆ ಆರಂಭವಾಗಿದೆ. ನವಯುಗ ಟೋಲ್ ಗೇಟ್ ನಿಂದ ಗೊರಗುಂಟೆಪಾಳ್ಯದವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನದ ವರೆಗೂ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಇದರ ಬೆನ್ನಲ್ಲೇ ಲಾಕ್ ಡೌನ್ ಬೆನ್ನಲ್ಲೇ ಬಂದ್ ಮಾಡಿದ್ದ ತುಮಕೂರು ರಸ್ತೆಯ ಮೇಲ್ಸೇತುವೆಯಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಲಾಗಿದೆ. ಈ ಸಂಚಾರ ದಟ್ಟಣೆಯಲ್ಲಿ ಸಿಕ್ಕಿದ್ದ ಆಂಬ್ಯುಲೆನ್ಸ್ ರೋಗಿಗಳು ಕೂಡ ಕಿರಿಕಿರಿ ಅನುಭವಿಸಿದರು.

Covid -19 Unlock: Traffic jam in Bengaluru roads: police vacating the barricades

Recommended Video

   High Command ಈ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ ನಾಯಕತ್ವ ಬದಲಾವಣೆ ಮಾಡೋದೂ ಇಲ್ಲ | Arun Singh | Oneindia Kannada

   ಶೀಘ್ರದಲ್ಲಿಯೇ ಅನ್ ಲಾಕ್: ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಕಡಿಮೆಯಾದ ಬೆನ್ನಲ್ಲೇ ಅನ್ ಲಾಕ್ ಮಾಡುವ ಬಗ್ಗೆ ಸರ್ಕಾರ ಪ್ರಸ್ತಾಪವಿಟ್ಟಿದೆ. ಇದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಸಮ್ಮಿಸಿದೆ. ಇದರ ಬೆನ್ನಲ್ಲೇ ವಾಹನ ದಟ್ಟಣೆ ದಿನೇ ದಿನೇ ಬೆಂಗಳೂರಿನಲ್ಲಿ ಜಾಸ್ತಿಯಾಗಿದೆ. ಇಷ್ಟು ದಿನ ಖಾಲಿಯಾಗಿದ್ದ ರಸ್ತೆಗಳು ಇದೀಗ ಏಕಾಏಕಿ ವಾಹನಗಳ ದಟ್ಟಣೆಯಿಂದ ಕೂಡಿವೆ. ಸರ್ಕಾರ ಅನ್‌ಲಾಕ್ ಮುನ್ಸೂಚನೆ ಬೆನ್ನಲ್ಲೇ ರಸ್ತೆಗಳಿಗೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯಲು ಪೊಲೀಸರು ಮುಂದಾಗಿದ್ದಾರೆ.

   English summary
   Covid 19: Traffic congestion on the roads of Bangalore is on the back of the unlock.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X