ಕೊವ್ಯಾಕ್ಸಿನ್ ಕೊರತೆ; ಬೆಂಗಳೂರಲ್ಲಿ 2ನೇ ಡೋಸ್‌ಗೆ ಪರದಾಟ!

ಬೆಂಗಳೂರು, ಆಗಸ್ಟ್ 16; ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಪ್ರಮುಖ ಅಸ್ತ್ರ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದರ ಜೊತೆಗೆ ಲಸಿಕೆಯ ಕೊರತೆಯೂ ಎದುರಾಗಿದೆ. ಅದರಲ್ಲೂ ಕೊವ್ಯಾಕ್ಸಿನ್ ಲಸಿಕೆ ಪಡೆದವರು 2ನೇ ಡೋಸ್ ಪಡೆಯಲು ಪರದಾಟ ನಡೆಸುತ್ತಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಪಡೆಯುವುದು ಈಗ ಅಷ್ಟು ಸುಲಭದ ಮಾತಲ್ಲ. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು ಈಗ 2ನೇ ಡೋಸ್ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ನಗರದಲ್ಲಿಯೇ ಸುಮಾರು 70 ಸಾವಿರ ಜನರಿಗೆ 2ನೇ ಡೋಸ್ ಲಸಿಕೆ ನೀಡಬೇಕಿದೆ.

ಕಳೆದ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 39,000 ಡೋಸ್ ಕೊವ್ಯಾಕ್ಸಿನ್ ಸಂಗ್ರಹ ಇದೆ ಎಂದು ಘೋಷಣೆ ಮಾಡಿತು. ಆದರೆ ಗುರುವಾರ ಬೆಳಗ್ಗೆಯೇ ಸುಮಾರು 70,000 ಜನರಿಗೆ ಕೊವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಬೇಕಾಗಿತ್ತು. ಈ ವಾರ ಇನ್ನೂ ಹೆಚ್ಚಿನ ಜನರು ಕೊವ್ಯಾಕ್ಸಿನ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ.

ಲಸಿಕೆ ಕೊರತೆಯ ಹಿನ್ನಲೆಯಲ್ಲಿ ಬಿಬಿಎಂಪಿ ಲಭ್ಯವಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಪಡೆಯುವವರಿಗೆ ಆದ್ಯತೆ ಮೇಲೆ ನೀಡುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ಕೊರತೆ ಬೆಂಗಳೂರು ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲಿಯೂ ಕಂಡುಬಂದಿದೆ. ಇದರಿಂದಾಗಿ 2ನೇ ಡೋಸ್ ಪಡೆಯಲು ಜನರು ಕಾದು ಕೂರುವಂತಾಗಿದೆ.

ಎಷ್ಟು ಡೋಸ್ ಲಸಿಕೆ ನೀಡಲಾಗಿದೆ

ಎಷ್ಟು ಡೋಸ್ ಲಸಿಕೆ ನೀಡಲಾಗಿದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದುವರೆಗೂ 13,37,910 ಡೋಸ್ ಕೊವ್ಯಾಕ್ಸಿನ್‌ ಲಸಿಕೆ ನೀಡಿದೆ. ಇದರಲ್ಲಿ 8,08,543 ಮೊದಲ ಡೋಸ್, 5,29,357 2ನೇ ಡೋಸ್ ಆಗಿದೆ. 2,79,186 ಜನರು ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು 2ನೇ ಡೋಸ್ ಕೊವ್ಯಾಕ್ಸಿನ್ ಪಡೆಯಬೇಕಿದೆ. ಆದರೆ ಲಸಿಕೆಯ ಕೊರತೆ ಈಗ ಕಾಡುತ್ತಿದೆ.

3-4 ದಿನಕ್ಕೊಮ್ಮೆ ಮಾತ್ರ ಪೂರೈಕೆ

3-4 ದಿನಕ್ಕೊಮ್ಮೆ ಮಾತ್ರ ಪೂರೈಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಕೆಲವು ವಾರಗಳಿಂದ ಕೊವ್ಯಾಕ್ಸಿನ್ ಲಸಿಕೆ ಕೊರತೆ ಉಂಟಾಗಿದೆ. 3 ರಿಂದ 4 ದಿನಕ್ಕೊಮ್ಮೆ ಲಸಿಕೆ ಪೂರೈಕೆಯಾಗುತ್ತಿದೆ. ಸರ್ಕಾರ ಸಹ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್‌ಗೆ ಆದ್ಯತೆ ನೀಡಬೇಕು ಎಂದು ಸೂಚನೆ ಕೊಟ್ಟಿದೆ. ಕೆಲವು ಪಿಎಚ್‌ಸಿಗಳಲ್ಲಿ ಬೆಳಗ್ಗೆ ಪೂರೈಕೆಯಾದ ಲಸಿಕೆ ಮಧ್ಯಾಹ್ನಕ್ಕೆ ಖಾಲಿಯಾಗುತ್ತಿದೆ.

ಕೊಡಗು ಜಿಲ್ಲೆಯ ಅಂಕಿ ಸಂಖ್ಯೆಗಳು

ಕೊಡಗು ಜಿಲ್ಲೆಯ ಅಂಕಿ ಸಂಖ್ಯೆಗಳು

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 4 ಸಾವಿರ ಜನರು 2ನೇ ಡೋಸ್ ಕೊವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದರು. ಆದರೆ ಶನಿವಾರ ಜಿಲ್ಲೆಗೆ ತಲುಪಿದ್ದು 3,500 ಡೋಸ್ ಲಸಿಕೆ ಮಾತ್ರ. ಕಾಲೇಜು ವಿದ್ಯಾರ್ಥಿಗಳಿಗೆ 2ನೇ ಡೋಸ್ ಲಸಿಕೆ ನೀಡಬೇಕಿತ್ತು. ಅದನ್ನು ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಈಗ ಯೋಜನೆ ರೂಪಿಸುತ್ತಿದ್ದಾರೆ.

ಮೊದಲ ಡೋಸ್ ಲಸಿಕೆ ಸಿಕ್ಕಿತ್ತು

ಮೊದಲ ಡೋಸ್ ಲಸಿಕೆ ಸಿಕ್ಕಿತ್ತು

ಶುಕ್ರವಾರ ಬೆಳಗಾವಿ ಜಿಲ್ಲೆಯಲ್ಲಿ 31,000 ಜನರು 2ನೇ ಡೋಸ್ ಕೊವ್ಯಾಕ್ಸಿನ್ ಪಡೆಯಲು ಅರ್ಹರಿದ್ದರು. 36,000 ಡೋಸ್ ಲಸಿಕೆ ಜಿಲ್ಲೆಗೆ ಶನಿವಾರ ಸಿಕ್ಕಿತು. ಉಳಿದ ಲಸಿಕೆಯನ್ನು ಮೊದಲ ಡೋಸ್ ಪಡೆಯಬೇಕಿದ್ದವರಿಗೆ ನೀಡಲಾಯಿತು. ಹಲವು ಜಿಲ್ಲೆಗಳಲ್ಲಿ ಕೊವ್ಯಾಕ್ಸಿನ್ ಕೊರತೆ ಇದೆ. ಮೊದಲ ಡೋಸ್ ಪಡೆದವರು 2ನೇ ಡೋಸ್ ಪಡೆಯಲು ಸಮಯವಾದರೂ ಸಹ ಲಸಿಕೆ ಸಿಗುತ್ತಿಲ್ಲ.

Recommended Video

    ಚಿಂದಿ ಆಯೋ ಈ ಮಹಿಳೆಯ ಇಂಗ್ಲಿಷ್ ಮಾತನ್ನು ನೀವು ಮಿಸ್ ಮಾಡ್ದೇ ನೋಡ್ಲೇಬೇಕು | Oneindia kannada
    ಕೊವ್ಯಾಕ್ಸಿನ್ ದರ ಹೆಚ್ಚಳ

    ಕೊವ್ಯಾಕ್ಸಿನ್ ದರ ಹೆಚ್ಚಳ

    ಆಗಸ್ಟ್‌ನಿಂದ ಸೆಪ್ಟೆಂಬರ್ 2ರ ತನಕ ಕರ್ನಾಟಕಕ್ಕೆ 6.12 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಬರಲಿದೆ. ಖಾಸಗಿ ಅವರಿಗೆ ಸಹ 1.94 ಲಕ್ಷ ಡೋಸ್ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ಖಾಸಗಿ ಅವರು ಕೊವ್ಯಾಕ್ಸಿನ್ ಲಸಿಕೆಗೆ 1,410 ರೂ. ದರವನ್ನು ಪಡೆಯುತ್ತಿದ್ದಾರೆ. ಕೋವಿಶೀಲ್ಡ್‌ (780 ರೂ.), ಸ್ಪುಟ್ನಿಕ್ (1,145 ರೂ.) ದರವಿದೆ. ಖಾಸಗಿ ಆಸ್ಪತ್ರೆಗಳು ಕೊವ್ಯಾಕ್ಸಿನ್‌ ಅನ್ನು 2,800 ರೂ. ಪ್ರತಿ ಡೋಸ್‌ಗೆ ನೀಡಿ ಖರೀದಿ ಮಾಡುತ್ತಿವೆ. ಎಂಬ ವರದಿಯೂ ಇದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+