Prajwal Revanna: ಅಪ್ಪನಿದ್ದ ಸೆಲ್‌ಗೆ ಮಗ: ಅತ್ಯಾಚಾರ ಕೇಸ್‌ನಲ್ಲಿ 14 ದಿನ ಪ್ರಜ್ವಲ್ ನ್ಯಾಯಾಂಗ ಬಂಧನ
ಬೆಂಗಳೂರು, ಜೂನ್ 10: ಹಾಸನ ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್ ಪ್ರಕರಣ, ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ 14 ದಿನ ಪ್ರಜ್ವಲ್ ನ್ಯಾಯಾಂಗ ಬಂಧನಕ್ಕೆ ನೀಡಿ ಸೋಮವಾರ ಆದೇಶ ಹೊರಡಿಸಿದೆ.
ಎರಡನೇ ಭಾರಿಗೆ ವಶಕ್ಕೆ ಪಡೆದಿದ್ದ ಎಸ್‌ಐಟಿ ಅಧಿಕಾರಿಗಳ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಬಸವನಗುಡಿಯಲ್ಲಿ ಸ್ಥಳ ಮಹಜರು ಬಳಿಕ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಜ್ವಲ್ ಮೇಲೆ ಇನ್ನು ಎರಡು ಅತ್ಯಾಚಾರ ಪ್ರಕರಣಗಳ ತನಿಖೆ ಬಾಕಿ.

ಇದೀಗ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮುಂದಿನ 14 ದಿನಗಳ ವರೆಗೆ (ಜೂನ್ 24ರವರೆಗೆ) ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಅಪಹರಣ ಪ್ರಕರಣ ಸಂಬಂಧ ಹನ್ನೊಂದು ದಿನ ಪೊಲೀಸ್ ವಶದಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆ ಆದ ತಂದೆ ಎಚ್‌ಡಿ ರೇವಣ್ಣ ಅವರಿದ್ದ ಸೆಲ್‌ಗೆ ಪ್ರಜ್ವಲ್ ರೇವಣ್ಣ ಸಹ ಸೇರಿದ್ದಾರೆ. ಅಪ್ಪನಿದ್ದ ಜೈಲಲ್ಲಿ ಮಗ ಮುಂದಿನ ಎರಡು ವಾರ ಕಳೆಯಲಿದ್ದಾರೆ.
ಅತ್ಯಾಚಾರ ಪ್ರಕರಣಗಳ ತನಿಖೆ ಬಾಕಿ
ಮೇ 31ರಂದು ರಾಷ್ಟ್ರೀಯ ತನಿಖಾ ತಂಡದ (SIT) ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದರು. ಎರಡು ಅತ್ಯಾಚಾರ ಹಾಗೂ ಒಂದು ಲೈಂಗಿಕ ದೌರ್ಜನ್ಯ ಪ್ರಕರಣಗಳು ಅವರ ಮೇಲಿವೆ.
ಈ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಎನ್ನಲಾಗಿದೆ. ಎರಡು ಅತ್ಯಾಚಾರ ಪ್ರಕರಣಗಳ ತನಿಖೆ ಬಾಕಿ ಇವೆ. ಹೀಗಾಗಿ ತನಿಖಾಧಿಕಾರಿಗಳು ಪ್ರಜ್ವಲ್‌ನನ್ನು ವಶಕ್ಕೆ ಕೇಳಿದ್ದಾರೆ. ಈ ಸಂಬಂಧ ವಾದ ವಿವಾದ ಆಲಿಸಿದ ನ್ಯಾಯಾಲಯವು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಆದೇಶಿಸಿದೆ.
ಆದೇಶ ಹೊರ ಬಿದ್ದ ಬೆನ್ನಲ್ಲೆ ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಕರೆದೊಯ್ದಿದ್ದಾರೆ. ಎರಡು ವಾರ ಅವರು ಜೈಲಿನಲ್ಲೇ ಕಾಲ ಕಳೆಯಲಿದ್ದಾರೆ.












Click it and Unblock the Notifications