ಎಲೆಕ್ಟ್ರಿಕ್‌ ವಾಹನ ಬಳಸುತ್ತಿದ್ದೀರಾ? ನಿಮಗಾಗಿ ಬರ್ತಿದೆ ಚಾರ್ಜಿಂಗ್‌ ಹಬ್‌

ಬೆಂಗಳೂರು, ಆಗಸ್ಟ್‌ 23: ಸೋಲಾರ್‌ ಶಕ್ತಿಯನ್ನು ಭವಿಷ್ಯದ ಇಂಧನ ಎಂದು ಕರೆಯಲಾಗಿದ್ದು, ಈ ವಿಚಾರದಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಹೌದು ಬೆಸ್ಕಾಂ ವತಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದಿನದ 24 ಗಂಟೆಯೂ ಚಾರ್ಜ್‌ ಮಾಡಬಹುದಾದ ದೇಶದ ಮೊದಲ ಸೌರಶಕ್ತಿ ಆಧಾರಿತ ಬ್ಯಾಟರಿ ಸ್ಟೋರೇಜ್‌ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಸೆಂಟರ್‌ ನಿರ್ಮಾಣವಾಗುತ್ತಿದೆ.

ಇದನ್ನು ದಿನದ 24 ಗಂಟೆಯೂ ಚಾರ್ಜ್‌ ಮಾಡಬಹುದಾದ ದೇಶದ ಮೊದಲ ಸೌರಶಕ್ತಿ ಆಧಾರಿತ ಬ್ಯಾಟರಿ ಸ್ಟೋರೇಜ್‌ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಸೆಂಟರ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಸದ್ಯ ಈ ಕೇಂದ್ರದ ನಿರ್ಮಾಣ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳೊಳಗೆ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

Country s First 24-Hour Solar Charging Center Near Kempegowda International Airport

ಏನು ಇದರ ವೈಶಿಷ್ಟ್ಯ?: ಈ ಹಬ್‌ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಒಂದೇ ಬಾರಿಗೆ ಸುಮಾರು 23 ವಾಹನಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಹೆಚ್ಚೆಂದರೆ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಚಾರ್ಜ್‌ ಮಾಡಬಹುದಾದ 20 ಫಾಸ್ಟ್‌ ಚಾರ್ಜಿಂಗ್‌ ಪಾಯಿಂಟ್‌ಗಳಿವೆ. ಈ ಹಬ್‌ನಲ್ಲಿ 50 Kw, 30 Kw ಸಾಮರ್ಥ್ಯ ಹೊಂದಿರುವ ಫಾಸ್ಟ್‌ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನೀಡಲಾಗುತ್ತಿದೆ. ಜೊತೆಗೆ 7.5 Kw ಮತ್ತು 3.3 Kw ಸಾಮರ್ಥ್ಯದ ಸಾಮಾನ್ಯ ಚಾರ್ಜಿಂಗ್‌ ಪಾಯಿಂಟ್‌ಗಳೂ ಇಲ್ಲಿರಲಿವೆ.

ಇಂಟಿಗ್ರೇಟೆಡ್‌ ತಂತ್ರಜ್ಞಾನದಡಿ ಎರಡು 45 Kw ಸಾಮರ್ಥ್ಯದ ಎರಡು ಲೈಫ್‌ ಬ್ಯಾಟರಿಗಳು ಹಗಲಿನಲ್ಲಿ ಸೌರಶಕ್ತಿಯನ್ನು ಚಾರ್ಜ್‌ ಮಾಡಿಕೊಳ್ಳುತ್ತವೆ. ಇದರಿಂದಲೇ ದಿನದ 24 ಗಂಟೆಯೂ ಜಾರ್ಜಿಂಗ್‌ ಸೌಲಭ್ಯ ಸಿಗಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೆಟ್ರೋಲ್‌-ಡೀಸೆಲ್‌ ಚಾಲಿತ ವಾಹನಗಳ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಸದ್ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಇವುಗಳ ಅನುಕೂಲಕ್ಕಾಗಿ ಸಾಕಷ್ಟು ಚಾರ್ಜಿಂಗ್‌ ಪಾಯಿಂಟ್‌ಗಳ ಕೊರತೆ ಇತ್ತು.

Country s First 24-Hour Solar Charging Center Near Kempegowda International Airport

ಏರ್‌ಪೋರ್ಟ್‌ ಆವರಣದಲ್ಲಿ ಇ.ವಿ ಚಾರ್ಜಿಂಗ್‌ ಪಾಯಿಂಟ್‌ಗಳಿದ್ದರೂ ಅವು ವಿಮಾನ ನಿಲ್ದಾಣದ ವಾಹನಗಳಿಗೆ ಮಾತ್ರ ಬಳಕೆಗೆ ಸಿಗುತ್ತಿವೆ. ಹಾಗಾಗಿ ಸಾರ್ವಜನಿಕರ ಪಾಯಿಂಟ್‌ ಬಳಕೆಗೆ ಸಿಗುತ್ತಿರಲಿಲ್ಲ. ಒಂದು ವೇಳೆ ಚಾರ್ಜಿಂಗ್‌ ಬೇಕಾದರೆ ದೂರದ ಪ್ರದೇಶಕ್ಕೆ ವಾಹನಗಳು ಹೋಗಬೇಕಿತ್ತು. ಈ ಹೊಸ ಚಾರ್ಜಿಂಗ್‌ ಕೇಂದ್ರದಿಂದ ಈ ಸಮಸ್ಯೆ ಪರಿಹಾರಗೊಳ್ಳಲಿದೆ. ಏರ್‌ಪೋರ್ಟ್‌ನಿಂದ ಕೇವಲ ಒಂದು ಕಿಲೋಮೀಟರ್‌ ದೂರದಲ್ಲೇ ಇರುವ ಬೆಸ್ಕಾಂನ 224 Kw ಪವರ್‌ ಸ್ಟೇಷನ್‌ ಜಾಗದಲ್ಲಿ ಸೋಲಾರ್‌ ಚಾರ್ಜಿಂಗ್ ಸೆಂಟರ್‌ ನಿರ್ಮಾಣಗೊಳ್ಳುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಇ.ವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ದೇವನಹಳ್ಳಿ ಸಮೀಪ ದೊಡ್ಡಮಟ್ಟದಲ್ಲಿ ಇ.ವಿ ಚಾರ್ಜಿಂಗ್‌ ಹಬ್‌ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ತಿಂಗಳಲ್ಲಿ ಇದು ಉದ್ಘಾಟನೆಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿಯೇ ಅತಿ ಹೆಚ್ಚು ವಿದ್ಯುತ್‌ಚಾಲಿತ ವಾಹನಗಳು ಕರ್ನಾಟಕದಲ್ಲಿವೆ ಎಂಬ ಹೆಗ್ಗಳಿಕೆ ಇದೆ. ಸರಿ ಸುಮಾರು 4.80 ಲಕ್ಷ ಎಲೆಕ್ಟ್ರಿಕ್‌ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿವೆ. ಸದ್ಯ ರಾಜ್ಯದಲ್ಲಿ 5,765 ಚಾರ್ಜಿಂಗ್‌ ಸ್ಟೇಷನ್‌ಗಳಿದ್ದು, 4,462 ಸ್ಟೇಷನ್‌ಗಳು ಬೆಂಗಳೂರು ನಗರ ಪ್ರದೇಶದಲ್ಲೇ ಇವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ 2,500 ಚಾರ್ಚಿಂಗ್ ಕೇಂದ್ರಗಳನ್ನು ತೆರೆಯಲು ಟೆಂಡರ್‌ ಪ್ರಕ್ರಿಯೆ ಕೂಡ ಆರಂಭವಾಗಿದ್ದು, ಕರ್ನಾಟಕಕ್ಕೆ ಇವಿ ಹಬ್‌ ಎನ್ನುವ ಪಟ್ಟ ಗಿಟ್ಟುವುದು ಸನಿಹದಲ್ಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+