ಬೆಕ್ಕು, ನಾಯಿಗಳಿಂದ ಕೊರೊನಾ ಹರಡುವುದಿಲ್ಲ: ಸೌಮ್ಯ ರೆಡ್ಡಿ ಮನವಿ

ಬೆಂಗಳೂರು, ಮಾರ್ಚ್ 22: ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ, ಹೀಗೆ ಮಾಡದಂತೆ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಮನವಿ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಿಡಿಯೋ ಹಂಚಿಕೊಂಡಿರುವ ಅವರು ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ''ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕುಗಳಿಂದ COVID19 ಹರಡುವುದಿಲ್ಲ. ಹಾಗಾಗಿ ನಿಮ್ಮ ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿಕೊಳ್ಳುತ್ತೇನೆ.'' ಎಂದಿದ್ದಾರೆ.

''ಕೊರೊನಾ ವೈರಸ್ ಹರಡುತ್ತದೆ ಎನ್ನುವ ಭಯದಿಂದ ಸಾಕು ಪ್ರಾಣಿಗಳನ್ನು ಅನೇಕರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸಹ ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ, ನಿಮ್ಮ ಪ್ರಾಣಿಗಳಿಗೆ ಸರಿಯಾದ ಆಹಾರ, ನೀರು ನೀಡಿ.'' ಎಂದು ಸೌಮ್ಯ ರೆಡ್ಡಿ ಮನವಿ ಮಾಡಿದ್ದಾರೆ.

Coronavirus: Sowmya Reddy Requested To Protect Cats And Dogs

ಹಾಂಗ್ ಕಾಂಗ್ ನಲ್ಲಿ ಕೊರೊನಾ ವೈರಸ್ ಹರಡುವ ಭೀತಿಯಿಂದ ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಕುಟುಂಬದವರು ದೂರ ಇಟ್ಟಿದ್ದರು. ಒಂಟಿಯಾಗಿದ್ದ ನಾಯಿ ಭಯಗೊಂಡು, ಒತ್ತಡದಿಂದ ಕೆಲವೇ ದಿನಗಳನ್ನು ಸಾವನಪ್ಪಿತ್ತು.

ಭಾರತದಲ್ಲಿ ಕೊರೊನಾ ವೈರಸ್‌ನಿಂದ ಮರಣ ಹೊಂದಿದವರ ಸಂಖ್ಯೆ 7ಕ್ಕೆ ಏರಿದೆ. ಇಂದು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿಯೂ ಒಂದೊಂದು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+