ಕೊರೊನಾ ಭೀತಿ, ಕೆಲಸದ ಒತ್ತಡವೇ, ಉಚಿತ ಕೌನ್ಸಲಿಂಗ್ ಪಡೆಯಿರಿ

ಬೆಂಗಳೂರು, ಮಾರ್ಚ್ 31: ಕೊರೊನಾವೈರಸ್ ಬಗ್ಗೆ ದಿನವಿಡಿ ಸುದ್ದಿ ಕೇಳಿ, ನೋಡಿ ಗಾಬರಿ, ಆತಂಕ ಸಹಜವಾಗಿ ಮೂಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ದಿನಕ್ಕೆ ಎರಡು ಬಾರಿ ನಂಬಲರ್ಹವಾದ ಸುದ್ದಿ ಸಂಸ್ಥೆಯಿಂದ ಮಾತ್ರ ಕೊರೊನಾ ಬಗ್ಗೆ ಮಾಹಿತಿ ಪಡೆಯಿರಿ ಎಂದು ಸಲಹೆ ನೀಡಿದೆ. ಇದಲ್ಲದೆ, ವೈರಸ್ ಹರಡದಂತೆ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಅನೇಕ ಸಂಸ್ಥೆಗಳು ವರ್ಕ್ ಫ್ರಂ ಹೋಂಗೆ ಮೊರೆ ಹೋಗಿವೆ.

ಈ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಅನ್ವಯವಾಗುತ್ತದೆ.

ಮನೆಯಿಂದ ಹೊರಗಡೆ ಹೋಗದ ಕಾರಣ ಮಕ್ಕಳು, ಯುವಕರು, ಪೋಷಕರು, ಸಮಯ ನಿರ್ವಹಣೆ ಮಾಡುವುದರಲ್ಲಿ ವಿಫಲರಾಗುತ್ತಿದ್ದಾರೆ. ಈ ನಡುವೆ ಮೊಬೈಲ್, ಟಿವಿ ವ್ಯಸನಿಗಳಾಗುತ್ತಿದ್ದಾರೆ. ಇದಲ್ಲದೆ, ಈಗಾಗಲೇ ಮದ್ಯಪಾನ, ಧೂಮಪಾನ ವ್ಯಸನಿಗಳಾಗಿರುವ ವ್ಯಕ್ತಿಗಳು ಇವುಗಳು ಸಿಗದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ.

Coronavirus Scare: Mind Craft Trust offers Free Counselling Services

ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಆದ ಕಾರಣ Mind Craft Trust (R) ವತಿಯಿಂದ ಉಚಿತವಾಗಿ ದೂರವಾಣಿ ಆಪ್ತ ಸಮಾಲೋಚನೆ(Counselling) ಮತ್ತು ಆನ್ ಲೈನ್ ಆಪ್ತ ಸಮಾಲೋಚನೆ ಆಯೋಜಿಸಲಾಗಿದೆ.

ಯಾವ ರೀತಿ ಕೌನ್ಸಲಿಂಗ್ ಲಭ್ಯ?:
* ಟೆಲಿಫೋನ್ ಕೌನ್ಸಲಿಂಗ್
* ಆನ್ ಲೈನ್ ಕೌನ್ಸಲಿಂಗ್ (ವಾಟ್ಸಪ್ ಮೂಲಕ ಮಾತ್ರ)

ಯಾವೆಲ್ಲ ವಿಷದ ಮೇಲೆ ಕೌನ್ಸಲಿಂಗ್:
* ಕೊರೊನಾವೈರಸ್ ಆತಂಕ ಎದುರಿಸುವುದು.
* ಭಯ, ಅವ್ಯವಸ್ಥೆ
* ಮಾನಸಿಕ ಆರೋಗ್ಯ
* ಮಾನಸಿಕ ಒತ್ತಡ ನಿರ್ವಹಣೆ
* ಸಮಯ ನಿರ್ವಹಣೆ
* ಕೋಪ ನಿರ್ವಹಣೆ
* ಸಮಸ್ಯೆಗೆ ಪರಿಹಾರ
* ಚಟ, ವ್ಯಸನದಿಂದ ದೂಷಿಸುವುದು
* ಆಹಾರ ಸೇವನೆ ಅವ್ಯವಸ್ಥೆ
* ಸಮಸ್ಯೆ ನಿರ್ವಹಣೆ(ಮಾನಸಿಕ, ಭಾವನಾತ್ಮಕ)

ಸೈಕಾಲಜಿಸ್ಟ್ ಕೌನ್ಸಿಲರ್ಸ್:
ಮನೋಜ್ ಎಸ್: 9141140408
ನವೀನ್ ಎನ್: 9141140401
ಪ್ರದೀಪ್ ಕುಮಾರ್: 9880137481
ಪ್ರತ್ಯುಶಾ ರಾಜ್: 9141140409
ರಂಜನಾ ಸೆಲ್ವರಾಜ್: 8667502787

ಯಾವ ಭಾಷೆಯಲ್ಲಿ ಲಭ್ಯ: ಕನ್ನಡ, ಇಂಗ್ಲೀಷ್, ತಮಿಳು ಹಾಗೂ ತೆಲುಗು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+