• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನರ ಆತಂಕ ಹಾಗೂ ಭಯ ಹೋಗಲಾಡಿಸಿ ಬಿಎಸ್ವೈಗೆ ಎಎಪಿ ಕರೆ

|

ಬೆಂಗಳೂರು, ಮಾರ್ಚ್ 24: ಕೊರೊನಾ ವೈರಸ್ ಸಾಮೂಹಿಕವಾಗಿ ಹರಡುವುದಕ್ಕೆ ಮುಂಚಿತವಾಗಿ ನಿಮ್ಮ ಸರ್ಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೆಗೆದುಕೊಂಡ 'ಲಾಕ್ ಡೌನ್' ಹಾಗೂ ಇತರೆ ನಿರ್ಧಾರಗಳನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸುತ್ತದೆ. ಆದರೆ ಮುಂಜಾಗ್ರತ ಕ್ರಮವಾಗಿ, ಪರಿಣಾಮಕಾರಿಯಾಗಿ ನಿಮ್ಮ ಸರ್ಕಾರ ಇನ್ನಷ್ಟು ದೃಢವಾಗಿ ಹೆಜ್ಜೆ ಇಟ್ಟರೆ ಮಾತ್ರ ಜನರ ಆತಂಕ ಹಾಗೂ ಭಯವನ್ನು ಹೋಗಲಾಡಿಸಲು ಸಾಧ್ಯ. ಈ ಕೂಡಲೇ ಈ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮವನ್ನು ನಾವೆಲ್ಲ ಎದುರಿಸಬೇಕಾಗುತ್ತದೆ.

ರಾಜ್ಯದಲ್ಲಿ ತಪಾಸಣಾ, ಚಿಕಿತ್ಸಾ ಕೇಂದ್ರಗಳನ್ನು ಹೆಚ್ಚಳ ಮಾಡಬೇಕು. ಕಡೆ ಪಕ್ಷ ಜಿಲ್ಲೆಗೆ ಒಂದರಂತೆ ಈ ಸೌಲಭ್ಯ ಒದಗಿಸಬೇಕು. ಹೆಚ್ಚಿನ ಜನರನ್ನು ತಪಾಸಣೆಗೆ ಒಳಪಡಿಸಬೇಕು. ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಕೈ, ಮುಖಗವಸು, ಸ್ಯಾನಿಟೈಜರ್ ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ವಿತರಿಸಬೇಕು.

Live Updates : ಕೊರೊನಾ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

ಶ್ರಮ ಆಧಾರಿತಾ ಕೆಲಸ ಮಾಡುವವರಿಗೆ, ಕೊಳೆಗೇರಿಯಲ್ಲಿ ವಾಸಿಸುವ ಜನರಿಗೆ ಕೊರೊನಾ ವೈರಸ್ (ಕೋವಿಡ್ 19) ಬಗ್ಗೆ ಅರಿವು ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಕೈ, ಮುಖ ಗವಸು ವಿತರಣೆ ಮಾಡಿರುವುದು ಸಂತಸದ ವಿಚಾರ. ಈ ಸೌಲಭ್ಯವನ್ನು ಆದಷ್ಟು ಬೇಗ ಹೆಚ್ಚಳ ಮಾಡಬೇಕು ಹಾಗೂ ಶ್ರೀಘ್ರವಾಗಿ ಕಾರ್ಯಗತಗೊಳಿಸಬೇಕು.

ಶ್ರಮಿಕ ವರ್ಗದ ಆರೋಗ್ಯ ತಪಾಸಣೆ

ಶ್ರಮಿಕ ವರ್ಗದ ಆರೋಗ್ಯ ತಪಾಸಣೆ

ನೀರು, ವಿದ್ಯುತ್‌ ಹಾಗೂ ಇತರೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವ ಕಾರ್ಮಿಕರು, ಮುಖ್ಯವಾಗಿ ಪೌರ ಕಾರ್ಮಿಕರು, ದಿನಸಿ ಪದಾರ್ಥ, ಔಷಧ ವ್ಯಾಪಾರಿಗಳನ್ನು ಆಗಾಗ್ಗೆ ತಪಾಸಣೆಗೆ ಒಳಪಡಿಸಬೇಕು. ಪೊಲೀಸ್, ಖಾಸಗಿ ಭದ್ರತಾ ಸಿಬ್ಬಂದಿಗಳಿಗೂ ಸಹ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ನೀಡಬೇಕು.

ಮಧ್ಯಮ ಹಾಗೂ ಬಡ ಜನರೆ ಹೆಚ್ಚಾಗಿ ಇರುವ ಸಮಾಜ ನಮ್ಮದು. ಒಂದು ಹೊತ್ತಿನ ಊಟವನ್ನು ಅಂದೆ ದುಡಿದು ತಿನ್ನುವ ಪರಿಸ್ಥಿತಿ ನಮ್ಮಲ್ಲಿದೆ ಆದ ಕಾರಣ ಅಂತಹ ಕಾರ್ಮಿಕ ವರ್ಗವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ನಮ್ಮ ಮನವಿ.

ನಿರ್ಗತಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ

ನಿರ್ಗತಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ

* ಇಂದಿರಾ ಕ್ಯಾಂಟೀನ್ ಮೂಲಕ ನಿರ್ಗತಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಬೇಕು.

* ದಿನಗೂಲಿ ನೌಕರರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಆಟೊ ಚಾಲಕರಿಗೆ ಮತ್ತು ಇತರೆ ಕ್ಷೇತ್ರಗಳ ಕಾರ್ಮಿಕರಿಗೆ ಅಗತ್ಯ ವಿಶೇಷ ಹಣಕಾಸು ಪ್ಯಾಕೇಜ್ ಘೋಷಣೆ ಮಾಡಬೇಕು.

* ಬಡ ಮಕ್ಕಳಿಗೆ ತೊಂದರೆ ಆಗದಂತೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಮುಂದುವರೆಸಬೇಕು.

ರೈತರ ಉತ್ಪನ್ನ ಹಾಪ್ ಕಾಮ್ಸ್ ಬಳಸಲಿ

ರೈತರ ಉತ್ಪನ್ನ ಹಾಪ್ ಕಾಮ್ಸ್ ಬಳಸಲಿ

ಹಾಪ್‌ಕಾಮ್ಸ್ ಮೂಲಕ ರೈತರು ಬೆಳೆದ ಬೆಳೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನೂತನ ವಹಿವಾಟು ವ್ಯವಸ್ಥೆ ಯನ್ನು ರೂಪಿಸಿ ಅದರ ಮೂಲಕ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬೇಕು ಹಾಗೂ ತರಕಾರಿ, ಸೊಪ್ಪುಗಳು ಹಾಳಾಗದಂತೆ ವ್ಯವಸ್ಥೆ ಮಾಡಬೇಕು.

ವೃದ್ದಾಶ್ರಮದ ಬಗ್ಗೆ ಗಮನವಿರಲಿ

ವೃದ್ದಾಶ್ರಮದ ಬಗ್ಗೆ ಗಮನವಿರಲಿ

ವೃದ್ದಾಶ್ರಮದಲ್ಲಿ ಬದುಕುತ್ತಿರುವ, ಒಂಟಿ ಜೀವನ ನಡೆಸುತ್ತಿರುವವ ಹಿರಿಯ ನಾಗರೀಕರರ ಬಗ್ಗೆ ಗಮನ ಹರಿಸಬೇಕು. ವೃದ್ಧ ಮತ್ತು 10 ವರ್ಷಗಳ ಕೆಳಗಿನ ಮಕ್ಕಳಿಂದ ಯುವಕರು ಮತ್ತು ಮಧ್ಯ ವಯಸ್ಕರು ದೂರ ಇರುವಂತೆ ಘೋಷಣೆ ಮಾಡಬೇಕು. ಯುವಕರು ರೋಗದಿಂದ ಬಾಧಿತರಾಗುವುದಕ್ಕಿಂತ ಅಧಿಕವಾಗಿ ಅವರು ರೋಗಾಣುವನ್ನು ಇತರರಿಗೆ ಹಬ್ಬಿಸುತ್ತಾರೆ. ಇದರ ಮೇಲೆ ಆದಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳಬೇಕು.

ಜನರ ಬಳಿಗೆ ಅಧಿಕಾರಗಳು ಹೋಗಲಿ

ಜನರ ಬಳಿಗೆ ಅಧಿಕಾರಗಳು ಹೋಗಲಿ

ಕೇವಲ ಮಾಧ್ಯಮದ ಮೂಲಕ ಜನರಿಗೆ ಮನವಿ ಮಾಡುವ ಬದಲು ಸರ್ಕಾರಿ ಅಧಿಕಾರಿಗಳು ಜನರ ಬಳಿಗೆ ಹೋಗಿ ತೊಂದರೆ ಆಗದ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಬೇಕು. ಆಗ ಮಾತ್ರ ಜನರಲ್ಲಿ ಅರಿವು ಮೂಡಿಸಲು ಸಾಧ್ಯ. ಈ ಕೆಲಸ ಜರೂರಾಗಿ ಆದರೆ ಮಾತ್ರ ಸೊಂಕು ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಹೇಳಿದರು.

English summary
Coronavirus Scare: AAP Karnataka has given few suggestion to CM BS Yediyurappa and appreciated the initiatives taken against Civid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X