ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಟಲಿಯಲ್ಲಿ ಪುತ್ರಿ: ಕೊರೊನಾ ಭೀತಿಯಲ್ಲಿ ಸಚಿವ ಆನಂದ್ ಸಿಂಗ್

|
Google Oneindia Kannada News

ಬೆಂಗಳೂರು, ಮಾರ್ಚ್ 17: ಕೊರೊನಾ ಭೀತಿ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಎದುರಾಗಿದೆ. ಆನಂದ್ ಸಿಂಗ್ ಪುತ್ರಿ ಇಟಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಲು ಅವರು ಪ್ರಯತ್ನಪಟ್ಟರು.

Recommended Video

Lockie Ferguson put under isolation following sore throat on international return |Lockie Ferguson |

ವಿಧಾನಸಭೆ ಕಲಾಪ ಶೂನ್ಯ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಕೋವಿಡ್ 19 ಹಿನ್ನೆಲೆ ಇಟಲಿಯನ್ನು ಬ್ಲಾಕೇಡ್ ಮಾಡಲಾಗಿದೆ ಎಂದು ವಿಷಯ ಪ್ರಸ್ತಾಪ ಮಾಡಿದರು. ''ಕರ್ನಾಟಕದ 150 ವಿದ್ಯಾರ್ಥಿಗಳು ಸೇರಿದಂತೆ 445 ಜನರು ಇಟಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಕರೋನಾ ಪರೀಕ್ಷೆಯ ನೆಗಟೀವ್ ಸರ್ಟಿಫಿಕೇಟ್ ಕೊಡದೇ ಇದ್ದರೆ ಏರ್ ಇಂಡಿಯಾದವರು ವಿಮಾನ ಹತ್ತಿಸಿಕೊಳ್ಳಲು ಬಿಡುತ್ತಿಲ್ಲ''. ಎಂದರು.

ಕೊರೊನಾಕ್ಕೆ ತಲೆಬಾಗಿದ ಎಲ್ಲಾ ಮತ, ಧರ್ಮ, ಪಂಥದವರುಕೊರೊನಾಕ್ಕೆ ತಲೆಬಾಗಿದ ಎಲ್ಲಾ ಮತ, ಧರ್ಮ, ಪಂಥದವರು

ಇಟಲಿಯಲ್ಲಿ ಕನ್ನಡಿಗರ ಪರಿಸ್ಥಿತಿ ತೀರಾ ಕಷ್ಟವಾಗಿದೆ ನಾಳೆಯೊಳಗಾಗಿ ಅವರನ್ನು ಕರೆಸಿಕೊಳ್ಳದೇ ಇದ್ದರೆ ಇಟಲಿ ಪೂರ್ಣ ಬ್ಲಾಕ್ ಡೌನ್ ಆಗುತ್ತದೆ ಕೇಂದ್ರ ವಿದೇಶಾಂಗ ಸಚಿವಾಲಯದ ಜೊತೆ ಮಾತುಕತೆ ನಡೆಸಿ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಿಯಾಂಕ ಖರ್ಗೆ ಆಗ್ರಹಿಸಿದರು.

Coronavirus: Minister Anand Singh Daughter Stranded At Rome Airport

ಇದಕ್ಕೆ ಉತ್ತರ ನೀಡಿದ ಡಿಸಿಎಂ ಡಾ.ಸಿ.ಎನ್‌. ಅಶ್ವಥ್ ನಾರಾಯಣ ಮಿಲಾನ್ ಏರ್ ಪೋರ್ಟ್ ನಲ್ಲಿದ್ದ ಭಾರತೀಯರನ್ನು ವಾಪಸ್ ಕರೆಸಲಾಗಿದೆ. ರೋಮ್ ಏರ್ ಪೋರ್ಟ್ ನಲ್ಲಿರುವರಿಗೆ ರಕ್ತ ಪರೀಕ್ಷೆ ಮಾಡಲಾಗಿದೆ‌. ಅದರಲ್ಲಿ ನೆಗೆಟಿವ್ ವರದಿ ಬಂದವರನ್ನು ವಾಪಸ್ ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ ಎಂದರು.

ಕೊರೊನಾ: ಮಾಸ್ಕ್ ಧರಿಸುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿಕೊರೊನಾ: ಮಾಸ್ಕ್ ಧರಿಸುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಈ ವೇಳೆ ತಮ್ಮ ಮಗಳು ರೋಮ್ ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ ಪ್ರತಿಪಕ್ಷ ಶಾಸಕರ ಗಲಾಟೆ ಗದ್ದಲದ ನಡುವೆ ಆನಂದ್ ಸಿಂಗ್‌ಗೆ ವಿಷಯ ಪ್ರಸ್ತಾಪಿಸಲು ಅವಕಾಶ ಸಿಗದೆ ಕಂಗಾಲಾದರು. ಕೊರೊನಾ ದಿಂದ ಪುತ್ರಿ ಸಿಕ್ಕಿಹಾಕಿಕೊಂಡ ಬಗ್ಗೆ ತಮ್ಮ ಪೂರ್ತಿ ಮಾತನ್ನು ಸಚಿವ ಆನಂದ್ ಸಿಂಗ್ ಆಡಲು ಆಗಲಿಲ್ಲ.

English summary
Coronavirus in karnataka: Forest and Ecology minister Anand Singh daughter stranded at Rome airport
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X