ಕೋವಿಡ್-19: ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?
ಬೆಂಗಳೂರು, ಮೇ 2: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮೇ 17 ರವರೆಗೂ ಲಾಕ್ ಡೌನ್ ಮುಂದುವರೆಸಲಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಸಂಪುಟದ ಸದಸ್ಯರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ ಬಳಿಕ ಮೂರನೇ ಹಂತದ ಲಾಕ್ ಡೌನ್ ಮುಂದುವರೆಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ.
Recommended Video
ಮೇ.17 ರವರೆಗಿನ ಲಾಕ್ ಡೌನ್ 3.0 ಮಾರ್ಗಸೂಚಿ ಬಿಡುಗಡೆ ಆಗಿದ್ದು, ವಲಯವಾರು ವಿನಾಯಿತಿಗಳನ್ನು ಘೋಷಿಸಲಾಗಿದೆ. ಕೆಲವು ವಿನಾಯಿತಿಗಳು ಹಸಿರು ಮತ್ತು ಕಿತ್ತಲೆ ವಲಯಗಳಿಗೆ ಮಾತ್ರ ಸೀಮಿತವಾಗಿದೆ.
ಹಾಗಾದ್ರೆ, ಬೆಂಗಳೂರಿನಲ್ಲಿ ಇರುವ ರೆಡ್ ಝೋನ್ ಗಳು ಯಾವುವು? ಕಿತ್ತಳೆ ವಲಯದಲ್ಲಿ ಯಾವ್ಯಾವ ವಾರ್ಡ್ ಗಳಿವೆ ಅಂತೀರಾ... ಮೇ 1 ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪರಿಷ್ಕೃತ ಪಟ್ಟಿ ಇಲ್ಲಿದೆ, ನೋಡಿ....

ರೆಡ್ ಝೋನ್ ನಲ್ಲಿವೆ 13 ವಾರ್ಡ್ ಗಳು
ವಾರ್ಡ್ ನಂ.37 - ಯಶವಂತಪುರ (1 ಪ್ರಕರಣ)
ವಾರ್ಡ್ ನಂ.84 - ಹಗದೂರು (1 ಪ್ರಕರಣ)
ವಾರ್ಡ್ ನಂ.93 - ವಸಂತ ನಗರ (2 ಪ್ರಕರಣಗಳು)
ವಾರ್ಡ್ ನಂ.133 - ಹಂಪಿ ನಗರ (2 ಪ್ರಕರಣಗಳು)
ವಾರ್ಡ್ ನಂ.134 - ಬಾಪುಜಿ ನಗರ (3 ಪ್ರಕರಣಗಳು)
ವಾರ್ಡ್ ನಂ.135 - ಪಾದರಾಯನಪುರ (26 ಪ್ರಕರಣಗಳು)
ವಾರ್ಡ್ ನಂ.136 - ಜಗಜೀವನರಾಮ್ ನಗರ (5 ಪ್ರಕರಣಗಳು)

ರೆಡ್ ಝೋನ್ ನಲ್ಲಿರುವ ವಾರ್ಡ್ ಗಳು
ವಾರ್ಡ್ ನಂ.140 - ಚಾಮರಾಜಪೇಟೆ (2 ಪ್ರಕರಣಗಳು)
ವಾರ್ಡ್ ನಂ.145 - ಹೊಂಬೆಗೌಡ ನಗರ (1 ಪ್ರಕರಣ)
ವಾರ್ಡ್ ನಂ.158 - ದೀಪಾಂಜಲಿ ನಗರ (3 ಪ್ರಕರಣಗಳು)
ವಾರ್ಡ್ ನಂ.170 - ಜಯನಗರ ಪೂರ್ವ (1 ಪ್ರಕರಣ)
ವಾರ್ಡ್ ನಂ.188 - ಬಿಳೇಕಹಳ್ಳಿ (1 ಪ್ರಕರಣ)
ವಾರ್ಡ್ ನಂ.189 - ಹೊಂಗಸಂದ್ರ (28 ಪ್ರಕರಣಗಳು)

ಆರೆಂಜ್ ಝೋನ್ ನಲ್ಲಿರುವ ವಾರ್ಡ್ ಗಳು
ವಾರ್ಡ್ ನಂ.19 - ಸಂಜಯ್ ನಗರ (1 ಪ್ರಕರಣ)
ವಾರ್ಡ್ ನಂ.25 - ಹೊರಮಾವು (1 ಪ್ರಕರಣ)
ವಾರ್ಡ್ ನಂ.31 - ಕುಶಾಲ್ ನಗರ (1 ಪ್ರಕರಣ)
ವಾರ್ಡ್ ನಂ.59 - ಮಾರುತಿ ಸೇವಾ ನಗರ (1 ಪ್ರಕರಣ)
ವಾರ್ಡ್ ನಂ.62 - ರಾಮಸ್ವಾಮಿ ಪಾಳ್ಯ (1 ಪ್ರಕರಣ)
ವಾರ್ಡ್ ನಂ.118 - ಸುಧಾಮ ನಗರ (1 ಪ್ರಕರಣ)
ವಾರ್ಡ್ ನಂ.119 - ಧರ್ಮರಾಯ ಸ್ವಾಮಿ ದೇವಸ್ಥಾನ (1 ಪ್ರಕರಣ)

ಕಿತ್ತಳೆ ವಲಯದಲ್ಲಿ ಇರುವ ವಾರ್ಡ್ ಗಳು
ವಾರ್ಡ್ ನಂ.129 - ಜ್ಞಾನ ಭಾರತಿ (1 ಪ್ರಕರಣ)
ವಾರ್ಡ್ ನಂ.139 - ಕೆ.ಆರ್.ಮಾರುಕಟ್ಟೆ (3 ಪ್ರಕರಣಗಳು)
ವಾರ್ಡ್ ನಂ.160 - ರಾಜರಾಜೇಶ್ವರಿ ನಗರ (1 ಪ್ರಕರಣ)
ವಾರ್ಡ್ ನಂ.171 - ಗುರಪ್ಪನ ಪಾಳ್ಯ (1 ಪ್ರಕರಣ)
ವಾರ್ಡ್ ನಂ.172 - ಮಡಿವಾಳ (3 ಪ್ರಕರಣಗಳು)
ವಾರ್ಡ್ ನಂ.177 - ಜೆ.ಪಿ.ನಗರ (2 ಪ್ರಕರಣಗಳು)
ವಾರ್ಡ್ ನಂ.179 - ಶಾಂಕಾಬರಿ ನಗರ (1 ಪ್ರಕರಣ)

ವಾರ್ಡ್ ಗಳ ವಿಂಗಡನೆ ಹೇಗೆ?
ಕಳೆದ 14 ದಿನಗಳಿಂದ ಒಂದು ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದರೂ, ಅದನ್ನು ರೆಡ್ ಝೋನ್ ಎಂದು ಪರಿಗಣಿಸಲಾಗುತ್ತದೆ. ಕಳೆದ 14 ದಿನಗಳಿಂದ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬರದೆ, 15-28 ದಿನಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿರುವ ವಾರ್ಡ್ ಗಳನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗಿದೆ.

ಗ್ರೀನ್ ಝೋನ್ ನಲ್ಲಿ ಮಿಕ್ಕೆಲ್ಲಾ ವಾರ್ಡ್ ಗಳು
ಕಳೆದ 28 ದಿನಗಳಿಂದ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಾರದ ವಾರ್ಡ್ ಗಳನ್ನು ಗ್ರೀನ್ ಝೋನ್ ಎಂದು ಪರಿಗಣಿಸಲಾಗಿದೆ. ರೆಡ್ ಮತ್ತು ಆರೆಂಜ್ ಝೋನ್ ಪಟ್ಟಿಯಲ್ಲಿ ಇಲ್ಲದ ಮಿಕ್ಕೆಲ್ಲಾ ವಾರ್ಡ್ ಗಳು ಸದ್ಯಕ್ಕೆ ಗ್ರೀನ್ ಝೋನ್ ನಲ್ಲಿವೆ.












Click it and Unblock the Notifications