ಕೊರೊನಾ ಭೀತಿ; ಮದುವೆ ಮಾಡುವ ಬಗ್ಗೆ ಬಿಬಿಎಂಪಿ ಸ್ಪಷ್ಟನೆ
ಬೆಂಗಳೂರು, ಮಾರ್ಚ್ 15 : ಕೊರೊನಾ ಭೀತಿ ಹಿನ್ನಲೆಯಲ್ಲಿ ಒಂದು ವಾರ ಸಾರ್ವಜನಿಕ ಸಮಾರಂಭ, ವಿವಾಹ ಮುಂತಾದವುಗಳನ್ನು ಕರ್ನಾಟಕ ಸರ್ಕಾರ ಬಂದ್ ಮಾಡಿದೆ. ಮಾರ್ಚ್ 14ರಿಂದಲೇ ಇದು ರಾಜ್ಯಾದ್ಯಂತ ಜಾರಿಗೆ ಬಂದಿದೆ.
ಬೆಂಗಳೂರು ನಗರದಲ್ಲಿ ಮಾಲ್, ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದು, ಮಾಲ್ ತೆರೆದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಬಿಬಿಎಂಪಿಯ ಕೆಲವು ಅಧಿಕಾರಿಗಳು ಮದುವೆ ಸಮಾರಂಭವೊಂದರ ಅಲಂಕಾರ ಮತ್ತು ಪೆಂಡಾಲ್ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ, 100 ರಿಂದ 150 ಜನರು ಸೇರುವ ಇಂತಹ ಕಾರ್ಯಕ್ರಮಗಳನ್ನು ಯಾರೂ ತಡೆಯುವಂತಿಲ್ಲ ಎಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.

ಪಾಲಿಕೆ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಕರುತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ತಡೆಯಬೇಡಿ, ಗೊಂದಲಗಳಿದ್ದರೆ ನನ್ನನ್ನು ಅಥವ ಎಲ್ಲ ವಲಯಗಳ ವಿಶೇಷ ಆಯುಕ್ತರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ ಎಂದು ಹೇಳಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳ ತಂಡದ ನಡವಳಿಕೆ ಕುರಿತು ದೂರುಗಳಿದ್ದರೆ, ಪಾಲಿಕೆಯ ಕಂಟ್ರೋಲ್ ರೂಂ, ಸಹಾಯವಾಣಿಗೆ ಕರೆ ಮಾಡಬಹುದು ಎಂದು ಫೇಸ್‌ಬುಕ್‌ನಲ್ಲಿ ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications