ಹಿಂಗಾದ್ರೆ ಹೆಂಗೆ: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಐಸಿಯು ಬೆಡ್ ಇಲ್ಲವೇ ಇಲ್ಲ!

ಬೆಂಗಳೂರು, ಮೇ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಆಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ ಸಂಸ್ಥೆ ಹಾಗೂ ವಾಣಿ ವಿಲಾಸ್ ಆಸ್ಪತ್ರೆ ಹೊರತುಪಡಿಸಿ ಯಾವುದೇ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ತುರ್ತು ನಿಗಾ ಘಟಕ ಮತ್ತು ಉಸಿರಾಟ ವ್ಯವಸ್ಥೆ ಕಲ್ಪಿಸುವ ವೈದ್ಯಕೀಯ ಸೌಲಭ್ಯಗಳಿಲ್ಲ.

ಮಲ್ಲೇಶ್ವರಂನಲ್ಲಿ ಇರುವ ಕೆ ಸಿ ಜನರಲ್ ಆಸ್ಪತ್ರೆಯಲ್ಲೂ ಕೂಡಾ ಮಕ್ಕಳ ಚಿಕಿತ್ಸೆಗೆ 38 ಜನರಲ್ ಬೆಡ್ ಹಾಗೂ 12 ನವಜಾತ ಶಿಶುಗಳ ಬೆಡ್ ಇವೆ. ಆದರೆ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳಾದ ಪರಿಣಾಮಕಾರಿ ವೆಂಟಿಲೇಟರ್ ಹಾಗೂ ಪರಿಣಾಮಕಾರಿಯಲ್ಲ ವೆಂಟಿಲೇಟರ್, ಸಿಪಿಎಪಿ ಮಷಿನ್, ಮಲ್ಟಿಪ್ಯಾರಾ ಮಾನಿಟರ್, ಪಲ್ಸ್ ಆಕ್ಸಿಮೀಟರ್, ವ್ಯವಸ್ಥೆಯನ್ನು ಒಳಗೊಂಡಿರುವ ಒಂದೇ ಒಂದು ಮಕ್ಕಳ ತುರ್ತು ನಿಗಾ ಘಟಕದ ಬೆಡ್ ವ್ಯವಸ್ಥೆಯಿಲ್ಲ.

ರಾಜ್ಯ ರಾಜಧಾನಿಯಲ್ಲೇ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಹೀಗೆ!

ರಾಜ್ಯ ರಾಜಧಾನಿಯಲ್ಲೇ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಹೀಗೆ!

ಬೆಂಗಳೂರಿನ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯೊಂದೇ ಅಲ್ಲ. ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೌರಿಂಗ್ ಆಸ್ಪತ್ರೆ, ವಾಣಿ ವಿಲಾಸ್ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ ಸಂಸ್ಥೆಯನ್ನು ಹೊರತುಪಡಿಸಿ ಬೇಕೆ ಯಾವುದೇ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ತುರ್ತು ನಿಗಾ ಘಟಕಗಳಿಲ್ಲ ಎಂದು ಕೆ ಸಿ ಜನರಲ್ ಆಸ್ಪತ್ರೆಯ ಮಕ್ಕಳ ವಿಭಾಗದ ಡಾ. ಲಕ್ಷ್ಮೀಪತಿ ಎಸ್ ಆರ್ ತಿಳಿಸಿದ್ದಾರೆ.

3ನೇ ಅಲೆ ನಿರ್ವಹಣೆಗೆ ಬೇಕಿರುವ ಅಗತ್ಯ ವಸ್ತುಗಳು

3ನೇ ಅಲೆ ನಿರ್ವಹಣೆಗೆ ಬೇಕಿರುವ ಅಗತ್ಯ ವಸ್ತುಗಳು

ಕರ್ನಾಟಕವನ್ನು ಕೊರೊನಾವೈರಸ್ ಮೂರನೇ ಅಲೆಯನ್ನು ಎದುರಿಸಲು ಸನ್ನದ್ಧಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬಿಸಾಡಬಹುದಾದ ವೈದ್ಯಕೀಯ ಸಲಕರಣೆ, ಪರಿಣಾಮಕಾರಿ ವೆಂಟಿಲೇಟರ್ ಹಾಗೂ ಪರಿಣಾಮಕಾರಿ ಅಲ್ಲದ ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಮಕ್ಕಳ ಚಿಕಿತ್ಸೆಗೆ ಅಗತ್ಯವಾಗಿರುವ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಬೇಕಿದೆ. ಒಂದು ವೇಳೆ ಆಸ್ಪತ್ರೆಗಳಿಂದ ವೈದ್ಯಕೀಯ ಆಮ್ಲಜನಕ ವ್ಯವಸ್ಥೆ ಪೂರೈಸಿದರೆ, ಅದು ಉಸಿರಾಟ ಸಮಸ್ಯೆ ನೀಗಿಸುವ ಅತ್ಯಾಧುನಿಕ ಉಪಕರಣ ಎಂದು ಎನಿಸುವುದಿಲ್ಲ. ಇಂಥ ಸಂದರ್ಭದಲ್ಲಿ ತುರ್ತು ನಿರ್ವಹಣೆಗೆ ಸೂಕ್ತ ಉಪಕರಣಗಳ ಅಗತ್ಯವಿರುತ್ತದೆ. ಈ ಹಿನ್ನೆಲೆ ಕೊವಿಡ್-19 ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಮಕ್ಕ ತುರ್ತು ನಿಗಾ ಘಟಕಗಳನ್ನು ಸಿದ್ಧಪಡಿಸಬೇಕಿದೆ ಎಂದು ಹೇಳಿದ್ದಾರೆ.

ಸಿವಿ ರಾಮನ್ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಹೇಗಿದೆ?

ಸಿವಿ ರಾಮನ್ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಹೇಗಿದೆ?

ಬೆಂಗಳೂರಿನ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಇರುವ ನವಜಾತ ಶಿಶುಗಳ ವಿಶೇಷ ಆರೈಕೆ ಘಟಕ ಒಂದು ವರ್ಷದಿಂದ ಬಳಕೆ ಆಗುತ್ತಿಲ್ಲ ಎಂದು ಆಸ್ಪತ್ರೆ ಮುಖ್ಯಸ್ಥರಾದ ಡಾ. ಹೆಚ್ ಡಿ ರಾಧಾಕೃಷ್ಣನ್ ತಿಳಿಸಿದ್ದಾರೆ. ತಾಯಂದಿರ ಆರೈಕೆ ಕೇಂದ್ರದಿಂದ ನವಜಾತ ಶಿಶುಗಳ ಆರೈಕೆ ಕೇಂದ್ರದಿಂದ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸುವುದಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ 40 ಜನರಲ್ ಬೆಡ್ ಹಾಗೂ 12 ನವಜಾತ ಶಿಶುಗಳ ಆರೈಕೆ ಘಟಕದ ಹಾಸಿಗೆಗಳಿದ್ದು, ಮೂವರು ಮಕ್ಕಳ ತಜ್ಞರಿದ್ದಾರೆ. ಮಕ್ಕಳ ತುರ್ತು ನಿಗಾ ಘಟಕ ಎಂಬ ಆಲೋಚನೆಯೇ ಇಲ್ಲ. ಜನರಲ್ ಬೆಡ್ ಗಳಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿಲ್ಲ. ಈವರೆಗೂ ಕೇವಲ ಕೊವಿಡ್-19 ರೋಗಿಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದ್ದು, ನವಜಾತ ಶಿಶುಗಳ ಆರೈಕೆ ಕೇಂದ್ರದ ಹಾಸಿಗೆಗಳನ್ನು ಈವರೆಗೂ ಬಳಸಿಕೊಳ್ಳಲಾಗುತ್ತಿಲ್ಲ ಎಂದು ಆಸ್ಪತ್ರೆ ಮುಖ್ಯಸ್ಥ ಡಾ. ಹೆಚ್ ಡಿ ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.

ಅನುಭವಿ ವೈದ್ಯಕೀಯ ಸಿಬ್ಬಂದಿಯ ಅನಿವಾರ್ಯತೆ

ಅನುಭವಿ ವೈದ್ಯಕೀಯ ಸಿಬ್ಬಂದಿಯ ಅನಿವಾರ್ಯತೆ

ಕೊರೊನಾವೈರಸ್ ಮೂರನೇ ಅಲೆಯ ಹರಡುವಿಕೆ ಭೀತಿ ನಡುವೆ ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಮತ್ತು ನವಜಾತ ಶಿಶುಗಳ ಜೊತೆಗೆ ತಾಯಂದಿರ ಆರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಅನುಭವಿ ವೈದ್ಯರ ಮತ್ತು ನರ್ಸ್ ಗಳ ಆಗತ್ಯವಿದೆ. ಜನರಲ್ ವಾರ್ಡ್ ಗಳಲ್ಲಿ ಕಾರ್ಯ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಯನ್ನು ಇಟ್ಟುಕೊಂಡು ಈಗಿನ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

Recommended Video

    ಬೆಡ್ ರೂಮಿನ ಅಸಲಿ ಕಹಾನಿ ಬಿಚ್ಚಿಟ್ಟ Ramesh jarakiholi! | Oneindia Kannada
    ಕೊರೊನಾವೈರಸ್ 3ನೇ ಅಲೆಗೆ ಮಕ್ಕಳೇ ಟಾರ್ಗೆಟ್!

    ಕೊರೊನಾವೈರಸ್ 3ನೇ ಅಲೆಗೆ ಮಕ್ಕಳೇ ಟಾರ್ಗೆಟ್!

    ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಯಾರಿಗೆ ತಗುಲುವುದು ಎಂದು ಪತ್ತೆ ಮಾಡಬೇಕಿದೆ. ವೃದ್ಧರು ಹಾಗೂ ಮಧ್ಯಮ ವಯಸ್ಕರಿಗೆ ಈಗಾಗಲೇ ಕೊರೊನಾವೈರಸ್ ಸೋಂಕು ತಗುಲಿದೆ. ಈ ವಯಸ್ಸಿನ ಮತ್ತೊಂದು ಗುಂಪು ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿದೆ. ಹೀಗಿರುವಾಗ ಮುಂದಿನ ಕೊರೊನಾ ಸೋಂಕಿನ ಅಲೆಗೆ ಮಕ್ಕಳೇ ಮುಖ್ಯ ಗುರಿಯಾಗುತ್ತದೆ. ಮಕ್ಕಳು ಮತ್ತು 18 ವರ್ಷದೊಳಗಿನವರಿಗೆ ಮೂರನೇ ಅಲೆಯಿಂದ ಅಪಾಯ ಹೆಚ್ಚಾಗಿರುತ್ತದೆ. ಆದರೆ ಈ ವಯೋಮಾನದಲ್ಲಿ ಇರುವವರಿಗೆ ಕೊರೊನಾವೈರಸ್ ಸೋಂಕಿನ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+