ಪಾಕಿಗಳ ಬಂಧನದ ತನಿಖೆಗೆ ಕತಾರ್ ಗೆ ಹೊಂಟರು ಬೆಂಗಳೂರು ಪೊಲೀಸರು
ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿಯರು ಸೇರಿ 4ಜನ ಬಂಧಿತರಾಗಿದ್ದ ಪ್ರಕರಣ ಸಂಬಂಧ ತನಿಖೆಗಾಗಿ ನಗರದ ಪೊಲೀಸರ ತಂಡ ಕತಾರ್ ಗೆ ಭೇಟಿ ನೀಡಲಿದೆ.
ನಗರದಲ್ಲಿ ಬಂಧಿತರಾಗಿದ್ದ ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ನೆಲೆಯೂರಲು ಪ್ರೀತಿ ಮತ್ತು ಮದುವೆಯೇ ಕಾರಣ ಎಂದಿದ್ದರು. ಹೀಗಿದ್ದೂ ಇವರ ಉದ್ದೇಶ ಏನಾಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಕಾರಣಕ್ಕೆ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕತಾರ್ ಗೆ ಭೇಟಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

"ಅವರು ಭಾರತಕ್ಕೆ ಬರಲು ಬೇರೆ ಕಾರಣಗಳೂ ಇರಬಹುದು. ಅವರ ವಾದ ಮತ್ತು ಉದ್ದೇಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಅವರ ವಿವರಗಳನ್ನು ಕೇಂದ್ರ ತನಿಖಾ ದಳಗಳು ಪರಿಶೀಲನೆ ನಡೆಸುತ್ತಿವೆ. ಅವರು ಈ ಹಿಂದೆ ಕೆಲಸ ಮಾಡಿದ ಕತಾರ್ ಗೆ ನಾವು ಪ್ರಯಾಣಿಸಲಿದ್ದೇವೆ. ಇದರರ್ಥ ನಾವು ಯಾವುದೇ ತೀರ್ಮಾನಕ್ಕೆ ಬಂದಿದ್ದೇವೆ ಎಂದಲ್ಲ. ಆದರೆ ಅವರ ವಾದವನ್ನು ನಂಬುತ್ತಿಲ್ಲ ಅಷ್ಟೇ," ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.
ಇನ್ನು ತನಿಖೆಯ ವಿವರಗಳನ್ನು ನೀಡಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಆದರೆ ಮೂಲಗಳ ಪ್ರಕಾರ ಆರೋಪಿಗಳು ನೀಡುತ್ತಿರುವ ಹೇಳಿಕೆಗಳು ಗೊಂದಲದಿಂದ ಕೂಡಿದ್ದು ಪ್ರೀತಿ ಮತ್ತು ಮದುವೆಯ ಹೊರತಾಗಿ ಈ ಪ್ರಕರಣಕ್ಕೆ ಬೇರೆಯದೇ ಆಯಾಮಗಳಿವೆ ಎನ್ನಲಾಗಿದೆ. ಯುವತಿ ಸಮೀರಾ ತಾನು ಕೇರಳದ ಯುವಕ ಮುಹಮ್ಮದ್ ಶಿಹಾಬ್ ನನ್ನು ಮದುವೆಯಾಗಿದ್ದೇನೆ ಎಂದು ಹೇಳುತ್ತಿದ್ದಾಳೆ. ಆದರೆ ಇತರ ಇಬ್ಬರು ಪಾಕಿಸ್ತಾನಿಯರು ಖಾಸಿಫ್ ಮತ್ತು ಕಿರ್ಹಾನ್ ಕೂಡಾ ಮದುವೆಯಾಗಿರುವುದಾಗಿ ಹೇಳುತ್ತಿದ್ದಾರೆ. ಇದರಿಂದ ಅವರ ಮದುವೆ ಬಗ್ಗೆಯೇ ಅನುಮಾನಗಳು ಹುಟ್ಟಿವೆ.
ಇನ್ನು ಮೂವರೂ ಆದಷ್ಟು ಬೇಗ ಆಧಾರ್ ಕಾರ್ಡ್ ಪಡೆಯಲು ಯತ್ನಿಸಿದ್ದು ತನಿಖಾ ಸಂಸ್ಥೆಗಳ ಗಮನ ಸೆಳೆದಿದ್ದು, ಹೆಚ್ಚಿನ ವಿಚಾರಣೆಯಲ್ಲಿ ನಿರತರಾಗಿದ್ದಾರೆ. ಇವೆಲ್ಲದರ ಜತೆಗೆ ಕತಾರ್ ಮತ್ತು ಪಾಶ್ಚಿಮಾತ್ಯ ದೇಶಗಳು ಬದುಕಲು ಹೆಚ್ಚು ಸುರಕ್ಷಿತವಾಗಿರುವಾಗ ಭಾರತಕ್ಕೇ ಬಂದಿದ್ದು ಏಕೆ ಎಂಬುದೂ ಅನುಮಾನ ಹುಟ್ಟಿಸುತ್ತಿದೆ. ಹೀಗೆ ಪ್ರಕರಣದ ತನಿಖೆಗೆ ಚುರುಕಾಗಿ ನಡೆಯುತ್ತಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications