ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಮಕ್ಕಳಿಗೆ ಬೈಸಿಕಲ್, ಶೂ ಮತ್ತು ಸಾಕ್ಸ್ ನೀಡುವಂತೆ ಸಮನ್ವಯ ವೇದಿಕೆ ಮನವಿ

|
Google Oneindia Kannada News

ಬೆಂಗಳೂರು ಜುಲೈ 6: ಸರಕಾರೀ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬೈಸಿಕಲ್, ಶೂ ಮತ್ತು ಸಾಕ್ಸ್ ನೀಡಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ. ಸರಕಾರೀ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬೈಸಿಕಲ್, ಶೂ ಮತ್ತು ಸಾಕ್ಸ್ ನ್ನು ಆಯವ್ಯದಲ್ಲಿ ಮುಂಜೂರು ಮಾಡದೇ, 2022-23 ನೇ ಸಾಲಿಗೆ ಈ ಉಚಿತ ಸೌಲಭ್ಯವನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ನಿಜಕ್ಕೂ ವಿಷಾದನೀಯ ಹಾಗು ಖಂಡನೀಯ ಎಂದು ಸಮನ್ವಯ ವೇದಿಕೆ ಹೇಳಿದೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಸರಕಾರದ ಈ ಬೇಜವಾಬ್ದಾರಿ ನಡೆಯನ್ನು ಖಂಡಿಸಿದೆ.

 Coordination forum appeals to provide bicycles, shoes and socks to school children

ಇದು ನಮ್ಮ ಮಕ್ಕಳಿಗಾದ ಘೋರ ಅನ್ಯಾಯ. ಮಕ್ಕಳು ಗೌರವ ಮತ್ತು ಆತ್ಮಾಭಿಮಾನದಿಂದ ಸಮವಸ್ತ್ರ ಧರಿಸಿ, ಶೂ ಮತ್ತು ಸಾಕ್ಸ್ ಹಾಕಿಕೊಂಡು ಸಂವಿಧಾನ ಕೊಡಮಾಡಿದ ಉಚಿತ ಹಾಗು ಕಡ್ಡಾಯ ಶಿಕ್ಷಣದ ಹಕ್ಕನ್ನು ಪಡೆದ ಹೆಮ್ಮೆಯಲ್ಲಿ ತಲೆಯೆತ್ತಿ ಶಾಲೆಗೆ ಹೋಗುತ್ತಿದ್ದರು. ಆ ಮೂಲಕ ಕನ್ನಡ ಶಾಲೆಗಳಲ್ಲಿ ಮಕ್ಕಳು ಉಳಿದ ಖಾಸಗಿ ಶಾಲೆಗಳ ಮಕ್ಕಳಂತೆಯೇ ಸ್ವಾಭಿಮಾನದ ಗೌರವಯುತ ಕಲಿಕಾ ವಾತಾವರಣದಲ್ಲಿ ಕಲಿಯುವ ಭೂಮಿಕೆಯನ್ನು ಸಂವಿಧಾನದ ಮೂಲಭೂತ ಹಕ್ಕು ಒದಗಿಸಿತ್ತು. ಅವರ ಶೂ ಮತ್ತು ಸಾಕ್ಸ್ ಹಾಗೂ ಬೈಸಿಕಲ್ ಹಕ್ಕನ್ನು ಕಸಿದಿರುವ ಸರ್ಕಾರ, ಮಕ್ಕಳು ಬರಿಗಾಲಿನಲ್ಲಿ ಹೋಗುವಂತೆ ಮಾಡಿದೆ.

ಇದು ನಮ್ಮ ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆ. ಮಕ್ಕಳ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಕುಗ್ಗಿಸುವ ನಡೆ. ಇದು ಸರಕಾರೀ ಶಾಲೆಗಳ ಮಕ್ಕಳಲ್ಲಿ ಮತ್ತಷ್ಟು ಕೀಳಿರಿಮೆ ಬೆಳೆಸಿ ಶಿಕ್ಷಣದ ಆಸಕ್ತಿಯನ್ನು ತಗ್ಗಿಸುತ್ತದೆ. ಸರಕಾರೀ ಶಾಲೆಗಳು ಮತ್ತಷ್ಟು ದುರ್ಬಲವಾಗುತ್ತವೆ.

 Coordination forum appeals to provide bicycles, shoes and socks to school children

ಕೂಡಲೇ ಸರಕಾರ ಮಕ್ಕಳಿಗೆ ಸಂವಿಧಾನ ದತ್ತವಾಗಿ ಸಿಕ್ಕಿರುವ ಮೂಲಭೂತ ಹಕ್ಕನ್ನು ಗೌರವಿಸಿ, ಉಚಿತ ಶೂ ಮತ್ತು ಸಾಕ್ಸ್ ಹಾಗು ಬೈಸಿಕಲ್ ವಿತರಣೆಗೆ ಕ್ರಮವಹಿಸಬೇಕೆಂದು ಸಮನ್ವಯ ವೇದಿಕೆಯ ಮಹಾ ಪೋಷಕರಾದ ನಿರಂಜನಾರಾಧ್ಯ.ವಿ.ಪಿ. ಅವರು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದಾರೆ.

Recommended Video

ಶಾಕ್ ಮೇಲೆ ಶಾಕ್ !!ಗೃಹಬಳಕೆಯ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ರೂ.50 ಏರಿಕೆ | *India | OneIndia Kannada

English summary
The Coordinating Forum of Karnataka State School Development and Supervision Committees has demanded that government and aided school children should be given bicycles, shoes and socks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X