ಶರಾವತಿ ಉಳಿವಿಗೆ 'ಬಾಯಾರಿರುವ ದೈತ್ಯಾಕಾರದ ನಗರ' ಸಮಾವೇಶ
ಬೆಂಗಳೂರು, ಜುಲೈ 11: ಶರಾವತಿ ನದಿ ನೀರನ್ನು ಲಿಂಗನಮಕ್ಕಿ ಅಣೆಕಟ್ಟಿನಿಂದ ಬೆಂಗಳೂರಿಗೆ ತರುವ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಗ್ರಾಮ ಸೇವಾ ಸಂಘವು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ಕರ್ನಾಟಕ ಗಾಂಧಿ ಸಂಸ್ಕಾರ ನಿಧಿ ಮತ್ತು ಪಶ್ಚಿಮ ಘಟ್ಟ ಜಾಗೃತಿ ವೇದಿಕೆ ಸಹಭಾಗಿತ್ವದಲ್ಲಿ "ಬಾಯಾರಿರುವ ದೈತ್ಯಾಕಾರದ ನಗರ' (ಎ ಥಸ್ಟಿಂಗ್, ಮಾನ್ಸ್ ಟ್ರಸ್ ಸಿಟಿ) ಎಂಬ ಸಮಾವೇಶವನ್ನು ಹಮ್ಮಿಕೊಂಡಿದೆ.
ಜುಲೈ 14ರ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ ಕುಮಾರ ಕೃಪಾ ರಸ್ತೆಯ, ಗಾಂಧಿ ಭವನದ ಮಹದೇವ್ ದೇಸಾಯಿ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಪರಿಸರವಾದಿಗಳು, ಕಾರ್ಯಕರ್ತರು ಮತ್ತು ಚಿಂತಕರು ಭಾಗವಹಿಸಲಿದ್ದು,ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇಲ್ಲಿನ ನೀರಿನ ದಾಹದ ಕುರಿತು ಚರ್ಚಿಸಲಿದ್ದಾರೆ. ಜನಪ್ರಿಯ ಪರಿಸರವಾದಿಗಳು, ಪರಿಸರ ಕಾರ್ಯಕರ್ತರು, ಕಲಾವಿದರು, ಯುವಕರು, ಮಲೆನಾಡಿನ ಜನತೆ ಈ ಚಳವಳಿಗೆ ಕೈ ಜೋಡಿಸಲಿದ್ದು, ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇಲ್ಲಿನ ನೀರಿನ ದಾಹದ ಕುರಿತು ಚರ್ಚಿಸಲಿದ್ದಾರೆ. ಪರಿಸರ ವಿಜ್ಞಾನ ಬರಹಗಾರ ಹಾಗೂ ಪತ್ರಕರ್ತ ನಾಗೇಶ ಹೆಗಡೆ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಗಾಂಧಿ ಭವನ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಜುಲೈ 14ರಂದು ಬೆಳಿಗ್ಗೆ 11:15ರಿಂದ-11:55ರವರೆಗೆ 'ಬೆಂಗಳೂರು ಎಂಬ ದೈತ್ಯ ನಗರ?' ವಿಷಯದ ಕುರಿತು ಚರ್ಚೆ ನಡೆಯಲಿದ್ದು, ಲಿಯೋ ಎಫ್ ಸಲ್ಡಾನಾ ಸಂವಾದ ನಡೆಸಿಕೊಡಲಿದ್ದಾರೆ. ಎ.ಆರ್.ಶಿವಕುಮಾರ್, ಭಾರ್ಗವಿ ರಾವ್, ರೋಹನ್ ಡಿಸೋಜಾ ವೇದಿಕೆಯಲ್ಲಿರಲಿದ್ದಾರೆ. ಬೆಳಿಗ್ಗೆ 12:00ರಿಂದ 12:40ವರೆಗೆ -'ದಾಹದ ನಗರ ಹಾಗೂ ಸಾಯುತ್ತಿರುವ ನದಿಗಳು' ವಿಷಯದ ಕುರಿತು ಸಿ ಯತಿರಾಜು ಸಂವಾದ ನಡೆಸಲಿದ್ದಾರೆ. ಶಂಕರ್ ಶರ್ಮಾ, ಎಸ್ ಡಿ ವೊಂಬಟ್ಕೆರೆ, ಸೋಮಶೇಖರ್, ಶುಭಾ ರಾಮಚಂದ್ರನ್ ವೇದಿಕೆಯಲ್ಲಿರುವರು. 12:45 ರಿಂದ 13:30ರವರೆಗೆ 'ನಾಳಿನ ಬೆಂಗಳೂರಿನ ಆಕಾರ' ವಿಷಯದ ಕುರಿತು ಸಂಕೇತ್ ಕುಮಾರ್ ಸಂವಾದ ನಡೆಸಲಿದ್ದು, ಜಾಹ್ನವಿ ಪೈ, ಹರ್ಷಕುಮಾರ್ ಕುಗ್ವೆ, ಆನಂದ ಮಾಳಿಗವಾಡ್, ಸಹದೇವ ಇರಲಿದ್ದಾರೆ.












Click it and Unblock the Notifications