ಅಂಬೇಡ್ಕರ್ ಬಗ್ಗೆ ಅವಹೇಳನ: ವಿವರಣೆ ನೀಡುವಂತೆ ಕಾಲೇಜಿಗೆ ಬೆಂಗಳೂರು ಪೊಲೀಸರ ನೋಟಿಸ್
ಕಾಲೇಜು ಪ್ರಾಂಶುಪಾಲ ದಿನೇಶ್ ನೀಲಕಾಂತ್ ಸೇರಿದಂತೆ ಒಂಬತ್ತು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಬೆಂಗಳೂರು, ಮಾರ್ಚ್ 07: ಫೆಬ್ರವರಿಯಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿಗಳು ನಟಿಸಿದ್ದ ಕಿರುನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತುದಲಿತ ಸಮುದಾಯವನ್ನು ಅವಮಾನ ಮಾಡಲಾಗಿತ್ತು. ಈ ಕಿರು ನಾಟಕ ಪ್ರದರ್ಶಿಸಿದ ಕುರಿತು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ವಿವರಣೆ ಕೋರಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಕಾಲೇಜು ಪ್ರಾಂಶುಪಾಲ ದಿನೇಶ್ ನೀಲಕಾಂತ್ ಸೇರಿದಂತೆ ಒಂಬತ್ತು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಫೆಬ್ರವರಿ 4 ರಂದು ಕಾಲೇಜಿನ 'ಕುಲ್-ಆಹ್!' ಫೆಸ್ಟ್‌ನಲ್ಲಿ ಬಿ. ಆರ್. ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನು ಅವಹೇಳನ ಮಾಡುವ ಸ್ಕಿಟ್ ಅನ್ನು ಪ್ರದರ್ಶಿಸಲಾಗಿತ್ತು. ಜೈನ್ ವಿಶ್ವವಿದ್ಯಾನಿಲಯದ ಕಾಲೇಜಿನ ನಾಟಕ ತಂಡ ಡೆಲ್ರಾಯ್ಸ್ ಬಾಯ್ಸ್ ಈ ನಾಟಕ ಪ್ರದರ್ಶಿಸಿತ್ತು.

ದ ಡೆಲ್ರಾಯ್ಸ್ ಬಾಯ್ಸ್ ಎಂಬ ವಿದ್ಯಾರ್ಥಿಗಳ ಗುಂಪು ಪರಿಶಿಷ್ಟ ಜಾತಿ, ಮೀಸಲಾತಿ ಮತ್ತು ಸ್ವತಃ ಭಾರತೀಯ ಸಂವಿಧಾನದ ಪಿತಾಮಹ ಡಾ ಬಿ.ಆರ್ ಅಂಬೇಡ್ಕರ್ ಅವರನ್ನು ಅಣಕಿಸುವ ಸ್ಕಿಟ್ ಅನ್ನು ಪ್ರದರ್ಶಿಸಿದ್ದರು. ಅಸ್ಪೃಶ್ಯತ ಯಂತಹ ಗಂಭೀರ ವಿಷಯಗಳನ್ನು ಸಹ ಸ್ಕಿಟ್‌ನಲ್ಲಿ ಅಪಹಾಸ್ಯ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ಉಂಟಾದ ನಂತರ ಜೈನ್ ವಿಶ್ವವಿದ್ಯಾಲಯ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಹೋರಾಟಗಾರರು, ದಲಿಕತ ಸಂಘಟನೆಗಳು, ರಾಜಕೀಯ ನಾಯಕರು ಪಕ್ಷಾತೀತರಾಗಿ ಘಟನೆಯನ್ನು ಖಂಡಿಸಿದ್ದರು. ಆದರೂ ಕಿಎಉ ನಟಕ ಪ್ರದರ್ಶಿಸಿ ವಿವಾದಕ್ಕೆ ಒಳಗಾಗಿದ್ದ ಜೈನ್ ವಿಶ್ವವಿದ್ಯಾನಿಲಯದ ಕಾಲೇಜಿನ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಾಟಕ ತಂಡ ಡೆಲ್ರಾಯ್ಸ್ ಬಾಯ್ಸ್‌ಗೆ ಪ್ರಥಮ ಬಹುಮಾನ ಲಭಿಸಿತ್ತು ಎಂದು ಮೂಲಗಳು ತಿಳಿಸಿವೆ.

ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿ ಸಂಘಗಳಲ್ಲಿ ಒಂದಾದ 25 ವರ್ಷದೊಳಗಿನವರು ಆಯೋಜಿಸಿದ್ದ ಮ್ಯಾಡ್‌ಆಡ್ಸ್ ಸ್ಪರ್ಧೆಯ ಭಾಗವಾಗಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಪ್ರಕರಣದಲ್ಲಿ ಚಾರ್ಜ್‌ಶೀಟ್ ಇನ್ನೂ ಸಲ್ಲಿಕೆಯಾಗದಿದ್ದರೂ, ಜೈನ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರಿನ್ಸಿಪಾಲ್ ದಿನೇಶ್ ನೀಲಕಾಂತ್, ವಿದ್ಯಾರ್ಥಿಗಳು ಮತ್ತು ಯುವಜನೋತ್ಸವದ ಆಯೋಜಕರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.












Click it and Unblock the Notifications