ಪಿಐಎಲ್ ನೆಪ: ಗುತ್ತಿಗೆದಾರರಿಗೆ ಕಾಮಗಾರಿಯ ಬಾಕಿ ಬಿಲ್ ನೀಡದ ಬಿಬಿಎಂಪಿ
ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ನೆಪ ಮಾಡಿಕೊಂಡು ಬಿಬಿಎಂಪಿ ಗುತ್ತಿಗೆದಾರರಿಗೆ ಕಾಮಗಾರಿ ಮುಗಿದರೂ ಕೋಟ್ಯಂತರ ರೂಪಾಯಿ ಬಿಲ್ ಪಾವಿಸುತ್ತಿಲ್ಲ. ಈ ಸಂಬಂಧ ಗುತ್ತಿಗೆದಾರರು ಧರಣಿ ನಡೆಸಿ ಅಳಲು ತೋಡಿಕೊಂಡರು
ಬೆಂಗಳೂರು, ಫೆಬ್ರವರಿ 15: ಬೆಂಗಳೂರು ನಗರ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಮಾರು ಮೂರುವರ್ಷದಿಂದ ಬಿಲ್ ನೀಡದೇ ನಿರ್ಲಕ್ಷ್ಯ ವಹಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕಾಮಗಾರಿ ಮೂರು ವರ್ಷಗಳ ಹಿಂದೆಯೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಆ ಕಾಮಗಾರಿ ಪೂರ್ಣಗೊಳಿಸಿದ್ದ ಗುತ್ತಿಗೆದಾರರಿಗೆ ನೀಡಬೇಕಾದ ಸರಿಸುಮಾರು 200 ಕೋಟಿ ಬಿಡುಗಡೆ ಮಾಡಿಲ್ಲ. ಹೀಗೆಂದು ಆರೋಪಿಸಿದ ಬಿಬಿಎಂಪಿ ಮತ್ತು ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನಲ್ಲಿ (KRIDL) ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಕೆಆರ್‌ಐಡಿಎಲ್ ವಿರುದ್ಧ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದನ್ನೆ ನೆಪವಾಗಿಟ್ಟುಕೊಂಡಿರುವ ಬಿಬಿಎಂಪಿ ಬಾಕಿ ಬಿಲ್ ಪಾವತಿಸದೇ ವಿಳಂಬ ಮಾಡುತ್ತಿದೆ. ನಿಯಮಗಳಂತೆ ಎರಡು ಕೋಟಿ ರೂಪಾಯಿಗೆ ವರೆಗಿನ ಕಾಮಗಾರಿಯ ಕೆಆರ್‌ಐಡಿಎಲ್ ಮೂಲಕ ನಿರ್ವಹಿಸಲಾಗಿದೆ. ಒಟ್ಟು 120ಕ್ಕೂ ಹೆಚ್ಚು ಗುತ್ತಿಗೆದಾರರಿಗೆ 200 ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಅದನ್ನು ನೀಡುವಂತೆ ಗುತ್ತಿಗೆದಾರರು ವರ್ಷಗಳಿಂದಲೂ ದುಂಬಾಲು ಬಿದ್ದರು ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರ ಪ್ರತಾಪ್ ಅಳಲು ತೋಡಿಕೊಂಡರು.

ಬಾಕಿ ಬಿಲ್ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ದೇವೆ. ಮನವಿಗೆ ಸ್ಪಂದಿಸದ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ನಮ್ಮನ್ನು ಬಂಧಿಸಲು ತಿಳಿಸಿದ್ದಾರೆ. ಸಂಜೆ ನಂತರ ಬಿಡುಗಡೆ ಮಾಡಲಾಯಿತು.
ಕಾಮಗಾರಿ ಮುಗಿದು ಗುಣಮಟ್ಟ ತಪಾಸಣೆ ಆದ ಬಳಿಕ ವಿಭಾಗೀಯ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಬಿಲ್ ರೆಕಾರ್ಡ್ (ಬಿಆರ್) ನಮೂದಿಸಬೇಕು. ಟಿವಿಸಿಸಿ ಇಲಾಖೆಯಿಂದ ಕಡತಗಳ ಸ್ಥಳ ಪರಿಶೀಲನೆ ಪೂರ್ಣಗೊಳ್ಳಬೇಕಿದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡರೂ ನಮಗೆ ಬಾಕಿ ಬಿಲ್ ಪಾವತಿಸದೇ ವಿಳಂಬ ಮಾಡಲಾಗುತ್ತದೆ ಎಂದರು.

ಬಿಬಿಎಂಪಿ ಮತ್ತು ಕೆಆರ್‌ಐಡಿಎಲ್ ಎರಡೂ ಪಿಐಎಲ್‌ನಲ್ಲಿ ಪ್ರತಿವಾದಿಗಳಾಗಿವೆ. ಕೋರ್ಟ್ ಯಾವುದೇ ಆದೇಶ ನೀಡುವವರೆಗೆ ಬಿಬಿಎಂಪಿಯು ತಾನು ಈ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ತಿಳಿಸಿದೆ. ಬಿಲ್ ಪಾವತಿ ಮಾಡುವಂತೆ ಬಿಬಿಎಂಪಿಗೆ ಸೂಚಿಸಿದರೆ ನಾವು ನೀಡುತ್ತೇವೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು ಎಂದು ಗುತ್ತಿಗೆದಾರರು ಹೇಳಿದ್ದಾರೆ.hy












Click it and Unblock the Notifications