ಜೀವನದಲ್ಲೇ ಮೊದಲ ಬಾರಿಗೆ 5 ಸ್ಟಾರ್ ಹೋಟೆಲ್‌ಗೆ ಭೇಟಿ ಕೊಟ್ಟ ಸ್ವಿಗ್ಗಿ ಡೆಲಿವರಿ ಬಾಯ್ : ವೈರಲ್ ವಿಡಿಯೋ ಹಿಂದಿನ ಅಸಲಿ ಕಥೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮುಖದಲ್ಲಿ ನಗು ತರಿಸಿದರೆ, ಇನ್ನು ಕೆಲವು ನಮ್ಮ ಮನಸ್ಸನ್ನ ಮುದಗೊಳಿಸುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕಂಟೆಂಟ್ ಕ್ರಿಯೇಟರ್ ಒಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬರನ್ನ ಐಷಾರಾಮಿ 5 ಸ್ಟಾರ್ ಹೋಟೆಲ್‌ಗೆ ಕರೆದೊಯ್ದು ಮಿಲ್ಕ್ ಶೇಕ್ ಕೊಡಿಸಿರುವ ವಿಡಿಯೋ ಇದೀಗ ಎಲ್ಲರ ಹೃದಯ ಗೆಲ್ಲುತ್ತಿದೆ. ಝೈದ್ ಮೆಹ್ದಿ ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

5 ಸ್ಟಾರ್ ಹೋಟೆಲ್‌ಗೆ ಸ್ವಿಗ್ಗಿ ಡೆಲಿವರಿ ಬಾಯ್ ಎಂಟ್ರಿ
ವಿಡಿಯೋದ ಆರಂಭದಲ್ಲಿ ಝೈದ್ ಮೆಹ್ದಿ ಅವರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆಲಿವರಿ ಪಾರ್ಟ್ನರ್ ಬಳಿ ಹೋಗಿ, "ನನ್ನ ಜೊತೆ 5 ಸ್ಟಾರ್ ಹೋಟೆಲ್‌ನಲ್ಲಿ ಜ್ಯೂಸ್ ಕುಡಿಯಲು ಬರುತ್ತೀರಾ?" ಎಂದು ಕೇಳುತ್ತಾರೆ. ಏಕಾಏಕಿ ಈ ರೀತಿ ಕೇಳಿದ್ದರಿಂದ ಗೊಂದಲಕ್ಕೊಳಗಾದ ಡೆಲಿವರಿ ಬಾಯ್, "ಎಲ್ಲಿ?" ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾರೆ. ಮೆಹ್ದಿ ಹತ್ತಿರದ ಐಷಾರಾಮಿ ಹೋಟೆಲ್ ಕಡೆ ಬೊಟ್ಟು ಮಾಡಿದಾಗ, ಡೆಲಿವರಿ ಬಾಯ್, "ನಾನು ಬಾಲ್ಯದಿಂದಲೂ ಇಂದಿನವರೆಗೆ ಯಾವತ್ತೂ 5-ಸ್ಟಾರ್ ಹೋಟೆಲ್‌ಗೆ ಹೋಗೇ ಇಲ್ಲ" ಎನ್ನುತಾನೆ.
ನಂತರ ಇಬ್ಬರೂ ಒಟ್ಟಿಗೆ ಹೋಟೆಲ್ ಕಡೆಗೆ ತೆರಳುತ್ತಾರೆ. ಹೋಟೆಲ್ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ಅವರನ್ನ ತಡೆಯುತ್ತಾರೆ. ಆಗ ಮೆಹ್ದಿ, "ಯಾವುದೇ ಆತಂಕ ಬೇಡ, ಇವರು ನನ್ನ ಅಂಕಲ್ ಇದ್ದಂತೆ" ಎಂದು ಹೇಳಿ ಭದ್ರತಾ ಸಿಬ್ಬಂದಿಯ ಅನುಮಾನವನ್ನ ದೂರ ಮಾಡುತ್ತಾರೆ.
ವೈರಲ್ ವಿಡಿಯೋ: ಕಹಿ ಘಟನೆ ಹಂಚಿಕೊಂಡ ಡೆಲಿವರಿ ಪಾರ್ಟ್ನರ್
ಹೋಟೆಲ್ ಒಳಗೆ ಪ್ರವೇಶಿಸಿದ ನಂತರ, ಆ ಐಷಾರಾಮಿ ವಾತಾವರಣವನ್ನ ನೋಡಿ ಡೆಲಿವರಿ ಬಾಯ್ ಆಶ್ಚರ್ಯಚಕಿತರಾಗುತ್ತಾರೆ. "ಹೋಟೆಲ್ ಹೇಗಿದೆ ಅಂಕಲ್?" ಎಂದು ಮೆಹ್ದಿ ಕೇಳಿದಾಗ, ಸುತ್ತಲೂ ಕಣ್ಣಾಡಿಸಿದ ಅವರು "ಇದು ಅದ್ಭುತವಾಗಿದೆ, ತುಂಬಾ ವಿಶಾಲವಾಗಿದೆ" ಎಂದು ಖುಷಿಯಿಂದ ಹೇಳುತ್ತಾರೆ.
ಈ ವೈರಲ್ ವಿಡಿಯೋ ಕೇವಲ ಹೋಟೆಲ್ ಭೇಟಿಗೆ ಮಾತ್ರ ಸೀಮಿತವಾಗುವುದಿಲ್ಲ. ಇಬ್ಬರೂ ಕುಳಿತುಕೊಂಡು ಮಾತನಾಡುವಾಗ, ಡೆಲಿವರಿ ಪಾರ್ಟ್ನರ್ ತಮ್ಮ ಜೀವನದ ಕರಾಳ ದಿನವೊಂದನ್ನ ಮೆಹ್ದಿ ಜೊತೆ ಹಂಚಿಕೊಳ್ಳುತ್ತಾರೆ. ತಾವು ಹಿಂದೆ ಒಂದು ಭೀಕರ ಅಪಘಾತಕ್ಕೆ ತುತ್ತಾಗಿದ್ದೆ ಮತ್ತು ಕಾರೊಂದು ಬಂದು ಗುದ್ದಿದ ಪರಿಣಾಮ ದೀರ್ಘಕಾಲದವರೆಗೆ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದೆ ಎಂಬ ಕಹಿ ಸತ್ಯವನ್ನ ಬಿಚ್ಚಿಡುತ್ತಾರೆ. ಇದನ್ನು ಕೇಳಿದ ಮೆಹ್ದಿ ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.
ನೆಟ್ಟಿಗರ ಹೃದಯ ಗೆದ್ದ ಕಂಟೆಂಟ್ ಕ್ರಿಯೇಟರ್
ಸ್ವಲ್ಪ ಹೊತ್ತಿನಲ್ಲೇ ಅವರು ಆರ್ಡರ್ ಮಾಡಿದ್ದ ಮಿಲ್ಕ್ ಶೇಕ್ ಟೇಬಲ್ ಮೇಲೆ ಬರುತ್ತದೆ. ಅದನ್ನು ಸವಿದ ಡೆಲಿವರಿ ಬಾಯ್, "ನಿಜಕ್ಕೂ ಇದು ತುಂಬಾ ರುಚಿಯಾಗಿದೆ" ಎಂದು ಸಂತಸಪಡುತ್ತಾರೆ. ಹೋಟೆಲ್‌ನಿಂದ ಹೊರಬರುವಾಗ, "ಅಂಕಲ್, ಇವತ್ತು ತುಂಬಾ ಖುಷಿಯಾಯ್ತು ಅಲ್ವಾ?" ಎಂದು ಮೆಹ್ದಿ ಕೇಳುತ್ತಾರೆ. ಅದಕ್ಕೆ ಅವರು ಅತ್ಯಂತ ಹರ್ಷದಿಂದ "ಹೌದು!" ಎನ್ನುತ್ತಾರೆ. "ನನ್ನ ಜೊತೆ ಬಂದಿದ್ದಕ್ಕೆ ಧನ್ಯವಾದಗಳು" ಎಂದು ಮೆಹ್ದಿ ಕೃತಜ್ಞತೆ ಸಲ್ಲಿಸುವುದರೊಂದಿಗೆ ವಿಡಿಯೋ ಮುಕ್ತಾಯವಾಗುತ್ತದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಕಂಟೆಂಟ್ ಕ್ರಿಯೇಟರ್‌ನ ಈ ಸಣ್ಣ ಆದರೆ ಅರ್ಥಪೂರ್ಣ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದು ನಿಜಕ್ಕೂ ಹೃದಯಸ್ಪರ್ಶಿ", "ಮಾನವೀಯತೆ ಇನ್ನೂ ಜೀವಂತವಾಗಿದೆ", "ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಮ್ಮ ನಂಬಿಕೆಯನ್ನ ಹೆಚ್ಚಿಸುತ್ತವೆ" ಎಂದು ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.


Click it and Unblock the Notifications
