ಬೆಂಗಳೂರಿನಲ್ಲಿ ಮಾಲಿನ್ಯಯುಕ್ತ ನೀರಿನ ಸರಬರಾಜು, ನಾಗರಿಕರಲ್ಲಿ ಹೆಚ್ಚಿದ ಭೀತಿ

ಬೆಂಗಳೂರು, ಮಾರ್ಚ್‌ 11: ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದಲ್ಲಿ ಬೇರೆ ಬೇರೆ ಕಾರಣಗಳಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ, ನೀರು ಕಲುಷಿತವಾಗುವ ಭೀತಿ ಹೆಚ್ಚುತ್ತಿದೆ.

ಕಳೆದ ತಿಂಗಳಲ್ಲಿ ಅನೇಕ ಪ್ರದೇಶಗಳಲ್ಲಿ ನೀರಿನ ಮಾಲಿನ್ಯದ ಅನೇಕ ನಿದರ್ಶನದ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡ್ಲುಎಸ್‌ಎಸ್‌ಬಿ) ಮೂಲಗಳು ಮೂರು ವಿಭಿನ್ನ ಪ್ರದೇಶಗಳ ನೀರಿನ ಮಾದರಿಗಳನ್ನು ಬಹಿರಂಗಪಡಿಸಿವೆ. ಬಿಟಿಎಂ ಲೇಔಟ್, ಸರ್ ಎಂವಿ ಲೇಔಟ್ ಮತ್ತು ಇಸ್ರೋ ಲೇಔಟ್‌ನಲ್ಲಿ ಕಳೆದ ತಿಂಗಳು ನೀರಿನ ಬಳಕೆಗೆ ಅನರ್ಹವೆಂದು ಪರಿಗಣಿಸಲಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

Contaminated water supply in Bengaluru, heightened fear among citizens

ನಾವು ಪ್ರತಿದಿನ 80ರಿಂದ 90 ಮಾದರಿಗಳನ್ನು ಸಂಗ್ರಹಿಸುತ್ತೇವೆ ಮತ್ತು ಅವು ಕುಡಿಯಲು ಸೂಕ್ತವೇ ಎಂದು ಪರೀಕ್ಷಿಸುತ್ತೇವೆ. ಕಳೆದ ತಿಂಗಳಿನಿಂದ ಕೆಲವು ಪ್ರದೇಶಗಳ ನೀರಿನ ಮಾದರಿಗಳು ಅನರ್ಹವೆಂದು ಕಂಡುಬಂದಿದೆ. ಈ ಬಗ್ಗೆ ನಾವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆಎಂದು ಗುಣಮಟ್ಟ ನಿಯಂತ್ರಣ ವಿಭಾಗದ ಹಿರಿಯ ಬಿಡ್ಲುಎಸ್‌ಎಸ್‌ಬಿ ಅಧಿಕಾರಿ ತಿಳಿಸಿದ್ದಾರೆ.

ಆರ್‌ಎಂವಿ ಎರಡನೇ ಹಂತ, ರಾಜಾಜಿನಗರ ಮತ್ತು ಇತರ ಪ್ರದೇಶಗಳಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಾದ ವರದಿಗಳೂ ಇವೆ. ಸುಮಾರು 10 ದಿನಗಳ ಕಾಲ ಈ ಪ್ರದೇಶಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು ಬಳಿಕ ಕಲುಷಿತ ನೀರು ಸರಬರಾಜು ಮಾಡಲಾಗಿದೆ ಎಂದು ಆರ್‌ಎಂವಿ ಎರಡನೇ ಹಂತದ ನಿವಾಸಿಯೊಬ್ಬರು ತಿಳಿಸಿದ್ದಾರೆ.

Contaminated water supply in Bengaluru, heightened fear among citizens

ಬಹಳ ದಿನಗಳ ಬಳಿಕ ಬಿಟ್ಟ ನೀರು ದುರ್ವಾಸನೆ ಇತ್ತು. ಇದರಿಂದಾಗಿ ಕೆಲವೇ ದಿನಗಳಲ್ಲಿ ಆ ಪ್ರದೇಶದಲ್ಲಿ ಅವರಲ್ಲಿ ಹಲವರು ಅನಾರೋಗ್ಯಕ್ಕೆ ಒಳಗಾದರು. ನಾವು ಘಟನೆಯನ್ನು ಬಿಡ್ಲುಎಸ್‌ಎಸ್‌ಬಿಗೆ ಮಾಹಿತಿ ನೀಡಿದ್ದರೂ, ಅವರು ಮೂಲ ಕಾರಣವನ್ನು ಕಂಡುಹಿಡಿಯಲು ಸಮಯ ತೆಗೆದುಕೊಂಡರು ಎಂದು ನಿವಾಸಿಯೊಬ್ಬರು ಹೇಳಿದರು.

ಕೆಲವೆಡೆ ಕೊಳಚೆ ನೀರು ನೀರಿನೊಂದಿಗೆ ಬೆರೆತಿದ್ದರೂ ಕೆಲವು ನಿವಾಸಿಗಳು ಕೆಸರು ಮಿಶ್ರಿತ ನೀರನ್ನೆ ಬಳಸುತ್ತಿದ್ದಾರೆ ಎಂದು ವರದಿಯಾಗಿದೆ. ಬಿಡ್ಲುಎಸ್‌ಎಸ್‌ಬಿ ಅಧಿಕಾರಿಗಳು ಇದು ಪ್ರತ್ಯೇಕ ಘಟನೆಗಳು, ಹಳೆಯ ಪೈಪ್‌ಗಳು ಮತ್ತು ಯೋಜಿತವಲ್ಲದ ಮೂಲಸೌಕರ್ಯ ಯೋಜನೆಗಳ ಮೇಲೆ ಆರೋಪ ಹೊರಿಸಿ ಕೈತೊಳೆದುಕೊಂಡಿದ್ದಾರೆ.

ನೀರಿನ ಗುಣಮಟ್ಟದಲ್ಲಿ (ಮೂಲಭೂತವಾಗಿ) ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ, ರಸ್ತೆಗಳು ಕಿರಿದಾಗಿರುವುದರಿಂದ ನೀರು ಮತ್ತು ಒಳಚರಂಡಿ ಪೈಪ್‌ಲೈನ್‌ಗಳನ್ನು ಪರಸ್ಪರ ಹತ್ತಿರದಲ್ಲಿ ಹಾಕಲಾಗಿದೆ. ಅಂತಹ ಸಂದರ್ಭಗಳಲ್ಲಿ, ಪೈಪ್‌ಗಳು ಸೋರಿಕೆಯಾಗಿದ್ದರೆ ಪೈಪ್‌ಲೈನ್‌ಗಳ ಕೆಲವೆಡೆಯಲ್ಲಿ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣವಾಗುವ ಸಂಭವವಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಇಂತಹ ಘಟನೆಗಳು ವರದಿಯಾದಾಗ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಸೋರಿಕೆಯನ್ನು ಮುಚ್ಚಬೇಕು. ಯೋಜಿತವಲ್ಲದ ಮೂಲಸೌಕರ್ಯ ಯೋಜನೆಗಳು ಪೈಪ್‌ಲೈನ್ ಅನ್ನು ಹಾನಿಗೊಳಿಸುತ್ತವೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದು ಅಧಿಕಾರಿ ಹೇಳಿದರು. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಪರೀಕ್ಷಿಸಬೇಕಾದ ಮಾದರಿಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸಿದ್ದೇವೆ ಮತ್ತು ನಿಕಟ ನಿಗಾ ಇಡಲು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್-ಇನ್-ಚೀಫ್ ಸುರೇಶ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+