ಬೆಂಗಳೂರು : ಪೊಲೀಸ್ ಪೇದೆ ಮೇಲೆ ಯುವಕರಿಂದ ಹಲ್ಲೆ
ಬೆಂಗಳೂರು, ಸೆ. 16 : ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಕಲ್ಲು ಮತ್ತು ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಾಯಗೊಂಡಿರುವ ಪೇದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರಾಮಮೂರ್ತಿ ನಗರ ಸಮೀಪದ ಕಸ್ತೂರಿ ನಗರದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಮೂವರು ಯುವಕರ ಗುಂಪು ರಾಮಮೂರ್ತಿ ನಗರ ಠಾಣೆಯ ಪೇದೆ ಪುಂಡಲೀಕ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಗೊಂಡ ಪೇದೆಯನ್ನು ಹ್ಯಾಸ್ ಮಾಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [822 ಪೊಲೀಸ್ ಪೇದೆಗಳ ಹುದ್ದೆಗೆ ಅರ್ಜಿ ಆಹ್ವಾನ]

ಮಂಗಳವಾರ ತಡರಾತ್ರಿ ಮೂವರು ಯುವಕರ ಗುಂಪು ಕಸ್ತೂರಿ ನಗರ ಸಮೀಪ ಮದ್ಯಪಾನ ಮಾಡುತ್ತ ಕುಳಿತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪುಂಡಲೀಕ ಅವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. [ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!]
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ಬಾಟಲಿ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವುದರಿಂದ ಪುಂಡಲೀಕ ಅವರ ಮುಖದ ಬಲಭಾಗದ ಮೂಳೆ ಮುರಿದು ಹೋಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.












Click it and Unblock the Notifications